ವೈರಲ್ ನ್ಯೂಸ್

ಮದುಮಗಳು ಹಣ, ಚಿನ್ನಾಭರಣದೊಂದಿಗೆ ರಾತ್ರೋರಾತ್ರಿ ಪರಾರಿ! ಸಿಸಿಟಿವಿಯಿಂದ ಬಯಲಾಯ್ತು ರಹಸ್ಯ! ಮದುಮಗ ಕೋರ್ಟ್ ಮುಂದೆ ಹೇಳಿದ್ದೇನು?

268

ಮದುವೆಯಾಗಿ ಎರಡನೇ ರಾತ್ರಿಯೇ ವಿಚಿತ್ರ ಘಟನೆಯೊಂದು ಬಿಹಾರದ ಭಾಗಲ್ಪುರ್ ದಲ್ಲಿ ಮೇ.೨೨ರಂದು ನಡೆದಿದ್ದು ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಭಾಗಲ್ಪುರ ಜಿಲ್ಲೆಯ ನವಗಾಚಿಯಾ ಪ್ರದೇಶದ ನಾರಾಯಣಪುರ ಬ್ಲಾಕ್‌ನ ಹಳ್ಳಿಯಲ್ಲಿ ಇತ್ತೀಚೆಗೆ ನಂದಲಾಲ್ ಠಾಕೂರ್ ಎಂಬಾತನ ವಿವಾಹ ನೆರವೇರಿದೆ.

ಮೇ.21 ರಂದು ಮದುವೆ ನಡೆದು, ಮೇ.22 ರಂದು ವಧು ತನ್ನ ಪತಿಯೊಂದಿಗೆ ಅತ್ತೆ ಮನೆಗೆ ಬಂದಿದ್ದಾರೆ. ಮೇ.22 ರಂದು ಮಧ್ಯರಾತ್ರಿಯ ವೇಳೆಗೆ ವಧು ತಾನು ಉಟ್ಟಿದ್ದ ಚಿನ್ನಾಭರಣ, ಗಂಡನ ಮನೆಯಿಂದ ಬಂದ ಹಣ ಇದೆಲ್ಲವನ್ನು ಹಿಡಿದುಕೊಂಡು ರಾತ್ರೋ ರಾತ್ರಿ ಪರಾರಿಯಾಗಿದ್ದಾಳೆ.!

ಈ ಸಂಬಂಧ ಭವಾನಿಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಪತ್ನಿ 1.40 ಲಕ್ಷ ರೂ. ಹಾಗೂ ಭಾರೀ ಪ್ರಮಾಣದ ಚಿನ್ನಾಭರಣದೊಂದಿಗೆ ಪರಾರಿಯಾಗಿದ್ದಾಳೆ ಎಂದು ಪೊಲೀಸರಿಗೆ ಪತಿ ದೂರು ನೀಡಿದ್ದಾರೆ. ಪೊಲೀಸರು ಈ ಸಂಬಂಧ ದೂರು ದಾಖಲಿಸಿಕೊಂಡು ತನಿಖೆ ನಡೆಸಿದಾಗ, ಕಾರಿನಲ್ಲಿ ವಧು ವ್ಯಕ್ತಿಯೊಬ್ಬನೊಂದಿಗೆ ಓಡಿ ಹೋಗುತ್ತಿರುವುದನ್ನು ಸಿಸಿಟಿವಿಯಿಂದ ಕಂಡುಬಂದಿದೆ.

ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ರಾಜೀವ್ ಕುಮಾರ್ ಯಾದವ್, ಸಿಸಿಟಿವಿ ದೃಶ್ಯಾವಳಿಗಳ ಸಹಾಯದಿಂದ ಗುರುವಾರ ಮಾನ್ಸಿಯ ಗ್ರಾಮದಿಂದ ನವವಿವಾಹಿತೆಯೊಂದಿಗೆ ಓಡಿಹೋಗಲು ಬಳಸಿದ ಕ್ರೆಟಾ ಕಾರನ್ನು ವಶಪಡಿಸಿಕೊಂಡಿದ್ದೇವೆ ಹಾಗೂ ನವವಿವಾಹಿತೆಯನ್ನು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದಿದ್ದಾರೆ.

ಆಕೆಗೆ ಪ್ರಿಯಕರ ಇದ್ದಾನೆ ಎಂದು ಮೊದಲೇ ಗೊತ್ತಾಗಿದ್ದರೆ ನಾನು ಮದುವೆ ಆಗುತ್ತಿರಲಿಲ್ಲ. ನನ್ನ ತಾಯಿ ಹಾಗೂ ಮಧ್ಯವರ್ತಿ ಅವಳ ಬಳಿ ಆಗಾಗ ಮಾತನಾಡುತ್ತಿದ್ದರು. ಆಕೆಯನ್ನು ನಾನು ಮದುವೆಗಿಂತ ಮುಂಚೆ ಎಲ್ಲೂ ಭೇಟಿಯಾಗಿಲ್ಲ. ಆಕೆ ಚೆನ್ನಾಗಿ ಮಾತನಾಡುತ್ತಿದ್ದಳು. ಆ ಕಾರಣದಿಂದ ಇದು ಮೋಸವೆನ್ನುವುದು ಗೊತ್ತಾಗಿಲ್ಲ ಎಂದು ವರ ನಂದಲಾಲ್ ಠಾಕೂರ್ ಹೇಳಿದ್ದಾರೆ ಕೋರ್ಟ್ ಮುಂದೆ ಹೇಳಿಕೊಂಡಿದ್ದಾರೆ ಎಂದು ವರದಿ ತಿಳಿಸಿದೆ.

See also  ಕಾಲೇಜಿನಲ್ಲಿ ನಡೆದ ಪರೀಕ್ಷೆಯ ಪ್ರಶ್ನೆ ಪತ್ರಿಕೆಯಲ್ಲಿ ಧರ್ಮನಿಂದಿಸಿದರೆಂದು ಪ್ರಾಧ್ಯಾಪಕರ ಕೈ ಕತ್ತರಿಸಿದ ವಿದ್ಯಾರ್ಥಿಗಳು! 12 ವರ್ಷಗಳ ಬಳಿಕ ಕೇರಳ ಕೋರ್ಟ್ ಹೇಳಿದ್ದೇನು?
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget