ಕ್ರೈಂವೈರಲ್ ನ್ಯೂಸ್

ಮದುವೆಯಾಗಲು ಹುಡುಗಿ ಸಿಗದೆ ಮನನೊಂದು ಯುವಕ ಆತ್ಮಹತ್ಯೆ! ಯುವಕನ ಸಾವಿನ ಸುತ್ತ ಹಲವು ಅನುಮಾನ!

ನ್ಯೂಸ್ ನಾಟೌಟ್‌: ಮದುವೆಯಾಗಲು ಕನ್ಯೆ ಸಿಗಲಿಲ್ಲ ಎಂದು ಮನನೊಂದು ಯುವಕನೊಬ್ಬ ಸಾವಿಗೆ ಶರಣಾಗಿರುವ ಘಟನೆ ಉತ್ತರ ಕನ್ನಡದ ಯಲ್ಲಾಪುರ ತಾಲೂಕಿನ ತೇಲಂಗಾರ ಗ್ರಾಮದಲ್ಲಿ ನಡೆದಿದೆ.

35 ವರ್ಷದ ನಾಗರಾಜ ಗಣಪತಿ ಗಾಂವ್ಕರ ಎಂಬಾತ ಮೃತ ವ್ಯಕ್ತಿ. ಈತ ತೇಲಂಗಾರದ ಕಿರಗಾರಿಮನೆಯ ನಿವಾಸಿ. ಮನೆಯ ಸಮೀಪದ ಗುಡ್ಡದಲ್ಲಿ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ವರದಿ ತಿಳಿಸಿದೆ.

ನಾಗರಾಜ ಗಾಂವ್ಕರ್, ಕೃಷಿ ಕೆಲಸ ಮಾಡಿಕೊಂಡಿದ್ದ. ಮದುವೆಯಾಗಲು ಹೆಣ್ಣು ಸಿಗುತ್ತಿಲ್ಲ ಅಂತ ಮನನೊಂದಿದ್ದ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ದುಡುಕಿನ ನಿರ್ಧಾರದಿಂದ ತನ್ನ ಬದುಕು ಅಂತ್ಯಗೊಳಿಸಿದ್ದಾನೆ. ಆದರೆ ಈತನ ಸಾವಿನ ಸುತ್ತ ಬೇರೆ ಕಾರಣಗಳಿವೆಯೇ ಎಂಬ ಬಗ್ಗೆ ಪೊಲೀಸರ ತನಿಖೆಯಿಂದ ಬಯಲಾಗಬೇಕಿದೆ.
ಘಟನಾ ಸ್ಥಳಕ್ಕೆ ಯಲ್ಲಾಪುರ ಠಾಣಾ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Related posts

ಅರಂತೋಡು: ಕಾರು – ದ್ವಿಚಕ್ರ ವಾಹನ ನಡುವೆ ಅಪಘಾತ, ಸವಾರನಿಗೆ ಗಾಯ, ಆಸ್ಪತ್ರೆಗೆ ದಾಖಲು

ಮೂವರು ಇಂಜಿನೀಯರ್ ವಿದ್ಯಾರ್ಥಿಗಳು ನೀರು ಪಾಲು

ಮೈಸೂರಿನ ಚಾಮುಂಡಿ ಬೆಟ್ಟದ ನಿರ್ವಹಣೆಗೆ ಪ್ರಾಧಿಕಾರ ರಚಿಸಿದ ರಾಜ್ಯ ಸರ್ಕಾರ..! ಕೋರ್ಟ್ ಮೆಟ್ಟಿಲೇರಿದ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್..!