ಕ್ರೈಂಬೆಂಗಳೂರುರಾಜ್ಯವೈರಲ್ ನ್ಯೂಸ್

12 ಕೋಟಿ ಆಸ್ತಿ ಇದ್ದರೂ ಅದನೆಲ್ಲಾ ಬಿಟ್ಟು ಈತನಿಗಾಗಿ ಬಂದಿದ್ದೇನೆ ಎಂದವಳ ಕಥೆಗೆ ರೋಚಕ ಟ್ವಿಸ್ಟ್..! ಎಸ್ಪಿ ಬಳಿ ರಕ್ಷಣೆ ಕೇಳಿದ್ದ ಆಕೆಗೆ ಇದು ಮೂರನೇ ಮದುವೆ..!

ನ್ಯೂಸ್ ನಾಟೌಟ್: ಇನ್ಸ್ಟಾಗ್ರಾಮ್‌ನಲ್ಲಿ ಪ್ರೀತಿ ಆಗಿ ಮನೆಯ ವಿರೋಧದ ನಡುವೆ ಈತನನ್ನು ಮದುವೆಯಾಗಿದ್ದೇನೆ. 12 ಕೋಟಿ ಆಸ್ತಿ ಇದ್ದರೂ ಅದನೆಲ್ಲಾ ಬಿಟ್ಟು ಈತನಿಗಾಗಿ ಬಂದಿದ್ದೇನೆ ಎಂದು ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದ ಬೆಂಗಳೂರಿನ ಮಹಿಳೆಗೆ ಇದು ಮೂರನೇ ಮದುವೆ ಎನ್ನುವ ಸತ್ಯ ಬೆಳಕಿಗೆ ಬಂದಿದೆ.

ಸೋಶಿಯಲ್ ಮೀಡಿಯಾದಲ್ಲಿ ಪ್ರೀತಿ ಹುಟ್ಟಿ ಬೆಳಗಾವಿಗೆ ಬಂದು ಖಾನಾಪುರ ತಾಲೂಕಿನ ರೋಹಿತ್ ಕೋಲಕಾರ ಎಂಬಾತನನ್ನು ಪ್ರಿಯಾಂಕಾ ಗೌಡ ( 24 ) ಎನ್ನುವ ಯುವತಿಯೊಬ್ಬಳು ಮದುವೆಯಾಗಿದ್ದಳು. ಬೆಂಗಳೂರಿನಲ್ಲಿ ನನ್ನದು ಸ್ವಂತ ಮನೆ, ಸೈಟ್ ಇದೆ. ಬರೋಬ್ಬರಿ 12 ಕೋಟಿ ಮೌಲ್ಯದ ನನ್ನ ಆಸ್ತಿ ಹೊಡೆಯಲು ನಮ್ಮ ಸಂಬಂಧಿಕರು ಕಿರುಕುಳ ಕೊಡುತ್ತಿದ್ದಾರೆ ಎಂದು ಆರೋಪ ಮಾಡಿದ್ದ ಪ್ರಿಯಾಂಕಾ ಬೆಳಗಾವಿ ಎಸ್ಪಿ ಕಚೇರಿಗೆ ಬಂದು ದೂರು ನೀಡಿದ್ದಳು. ಈ ಸುದ್ದಿ ಎಲ್ಲೆಡೆ ವೈರಲ್ ಆಗಿತ್ತು. ಈ ಪ್ರಕರಣ ತನಿಖೆ ನಡೆಸಿದ ಪೊಲೀಸರಿಗೆ ಅಚ್ಚರಿ ಕಾದಿದ್ದು, ಪ್ರಿಯಾಂಕಾ ಗೌಡಗೆ ಇದು ಮೂರನೇ ಮದುವೆ ಎನ್ನುವುದು ತಿಳಿದು ಬಂದಿದೆ. ಇನ್‌ಸ್ಟಾಗ್ರಾಂ ಮೂಲಕ ಪರಿಚಯವಾಗಿ, ಪರಸ್ಪರ ಪ್ರೀತಿಸಿ ಮದುವೆಗೆ ಮುಂದಾಗಿದ್ದ ಯುವಕ, ಯುವತಿಯು ಕುಟುಂಬಸ್ಥರಿಂದ ರಕ್ಷಣೆ ಕೋರಿ ಒಂದೂವರೆ ತಿಂಗಳ ಹಿಂದೆ ಖಾನಾಪುರ ಪೊಲೀಸರಿಗೆ ಮನವಿ ಮಾಡಿದ್ದರು.

ಸೋಮವಾರ ಪಾರಿಶ್ವಾಡದ ದೇವಸ್ಥಾನವೊಂದರಲ್ಲಿ ಮದುವೆಯಾದರು. ಮದುವೆಯಾದ ಬಳಿಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಳಿ ಬಂದು ರಕ್ಷಣೆ ನೀಡುವಂತೆ ಕೋರಿದ್ದಾರೆ. ಜೀವಭಯವಿದೆ ರಕ್ಷಣೆ ಕೊಡಿ ಎಂದೂ ದೂರು ನೀಡಿದ್ದಾರೆ. ದೂರು ಸ್ವೀಕರಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರು, ರಕ್ಷಣೆ ನೀಡುತ್ತೇವೆ ಎಂದು ಭರವಸೆ ನೀಡಿದ್ದಾರೆ. ಆಸ್ತಿ ದಾಖಲೆಗಳಿಗೆ ಸಂಬಂಧಿಸಿದಂತೆ ಸಂಬಂಧಿತ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬಗೆಹರಿಸಿಕೊಳ್ಳುವಂತೆ ತಿಳಿಸಿದ್ದಾರೆ.ಈ ಪ್ರಕರಣ ತನಿಖೆ ನಡೆಸಿದ ಪೊಲೀಸರಿಗೆ ಶಾಕ್‌ ಆಗಿದ್ದು, ಪ್ರಿಯಾಂಕಾ ಗೌಡಗೆ ಇದು ಮೂರನೇ ಮದುವೆಯಾಗಿದೆ. ಪೊಲೀಸರ ಬಳಿ ಸ್ವತಃ ಪ್ರಿಯಾಂಕಾ ಇದನ್ನು ಒಪ್ಪಿಕೊಂಡಿದ್ದು, ಬೆಳಗಾವಿಯಿಂದ ಬೆಂಗಳೂರಿಗೆ ವಾಪಸ್‌ ತೆರಳುವಾಗ ಪೊಲೀಸರಿಗೆ ನೀಡಿದ ಹೇಳಿಕೆ ಪತ್ರದಲ್ಲಿ ಸುಧಾಕರ್‌ ನನ್ನ ಗಂಡ ನಾನು ಅವನ ಜೊತೆಗೆ ತೆರಳುತ್ತಿದ್ದೇನೆ. ಯಾವುದೇ ಒತ್ತಾಯ ಇಲ್ಲ ಎಂದು ಬರೆದು ಸಹಿ ಹಾಕಿ ನೀಡಿರುವ ಪತ್ರ ವೈರಲ್‌ ಆಗಿದೆ.

Click

https://newsnotout.com/2024/08/village-of-wayanad-kannada-news-flood-viral-videos-kananda-news/
https://newsnotout.com/2024/08/shiradi-ghant-landslide-kannada-news-vehicles-viral-news/
https://newsnotout.com/2024/08/cyclinder-lpg-kannada-news-price-hike-kannada-news-viral-mews/
https://newsnotout.com/2024/08/court-and-custody-darshan-and-gang-viral-news/
https://newsnotout.com/2024/08/wayanad-landslide-kannadanews-santhosh-lad-to-kerala/

Related posts

ಸಲ್ಮಾನ್ ಮನೆ ಮುಂದಿನ ಗುಂಡಿನ ದಾಳಿಗೆ ಬಿಗ್ ಟ್ವಿಸ್ಟ್..! ಸೂರತ್‌ ನ ತಾಪಿ ನದಿಯಲ್ಲಿ ಗನ್ ಪತ್ತೆ..!

ಕೊಡಗು: ವಿದ್ಯುತ್ ಸ್ಪರ್ಶಿಸಿ ಲೈನ್ ಮ್ಯಾನ್ ಸ್ಥಳದಲ್ಲೇ ಸಾವು, ಕಣ್ಣೀರಾದ ಕುಟುಂಬ

ಮರ್ಕಂಜ: ರಿಕ್ಷಾದಲ್ಲಿ ಮದ್ಯ ಸಾಗಿಸಿದ ವ್ಯಕ್ತಿ ಸುಳ್ಯ ಪೊಲೀಸರ ಬಲೆಗೆ