ಕ್ರೈಂವಿಡಿಯೋವೈರಲ್ ನ್ಯೂಸ್

ಬೋಳು ತಲೆಯ ವಿಷಯ ಮುಚ್ಚಿಟ್ಟು ಎರಡನೇ ಮದುವೆಗೆ ಯತ್ನ..! ಸುಳ್ಳು ಹೇಳಿ ಸಿಕ್ಕಿಬಿದ್ದ ವರನಿಗೆ ವಧುವಿನ ಕಡೆಯವರು ಮಾಡಿದ್ದೇನು? ಇಲ್ಲಿದೆ ವೈರಲ್ ವಿಡಿಯೋ

273

ನ್ಯೂಸ್‌ ನಾಟೌಟ್‌: ಮದುವೆಯಾಗುವ ಯುವಕನಿಗೆ ಸರ್ಕಾರಿ ನೌಕರಿ, ಆಸ್ತಿ-ಪಾಸ್ತಿ, ನೋಡಲು ಸುಂದರವಾಗಿರಬೇಕು ಜೊತೆಗೆ ತಲೆ ತುಂಬಾ ಕೂದಲು ಇರಬೇಕು ಹೀಗೆ ಹಲವಾರು ಡಿಮ್ಯಾಂಡ್‍ಗಳಿರುತ್ತವೆ. ಆದರೆ, ಇಲ್ಲೊಬ್ಬ ತನ್ನ ಬೋಳು ತಲೆಯ ವಿಷಯವನ್ನು ಮುಚ್ಚಿಟ್ಟು ಮದುವೆಯಾಗಲು ಹೋಗಿ ಒದೆ ತಿಂದಿರುವ ಘಟನೆ ಬಿಹಾರದ ಗಯಾ ಜಿಲ್ಲೆಯಲ್ಲಿ ನಡೆದಿದೆ.

ಮದುವೆ ಸಮಾರಂಭದಲ್ಲಿ ವರನಿಗೆ ಬೋಳು ತಲೆ ಎನ್ನುವ ವಿಚಾರ ಗೊತ್ತಾದ ತಕ್ಷಣ ಆತನನ್ನು ಮನಬಂದಂತೆ ಥಳಿಸಲಾಗಿದೆ. ವರನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ವರನು ಕೈಮುಗಿದು ಬೇಡಿಕೊಳ್ಳುತ್ತಿದ್ದರೂ ವಧುವಿನ ಮನೆಯವರು ಯಾವುದೇ ಕರುಣೆ ತೋರಿಸಿಲ್ಲ.

ಈ ಬೋಳು ತಲೆಯ ವರ ಗಯಾದ ಇಕ್ಬಾಲ್‌ಪುರ ಪ್ರದೇಶದ ನಿವಾಸಿಯಾಗಿದ್ದು, ಬಜೌರಾ ಗ್ರಾಮದಲ್ಲಿ 2ನೇ ಮದುವೆಗೆ ಸಿದ್ಧನಾಗಿದ್ದ. ಮದುವೆ ಸಮಾರಂಭದಲ್ಲಿ ಆತ ವಿಗ್ ಬಳಸಿ ತನ್ನ ಬೋಳು ತಲೆಯನ್ನು ಮರೆಮಾಚಿದ್ದ. ಆದರೆ ಆತನಿಗೆ ಬೋಳು ತಲೆಯಿದೆ ಎಂದು ವಧುವಿನ ಸಂಬಂಧಿಕರಿಗೆ ಗೊತ್ತಾಗಿದೆ. ಆತನ ಬೋಳುತಲೆಯ ಬಗ್ಗೆ ಅನುಮಾನಗೊಂಡ ಅವರು ಅವನ ಕೂದಲನ್ನು ಎಳೆಯಲು ಪ್ರಾರಂಭಿಸಿದರು. ಈ ವೇಳೆ ತನ್ನ ತಪ್ಪಿಗೆ ಕ್ಷಮೆಯಾಚಿಸುತ್ತಿದ್ದರೂ ಆತನಿಗೆ ಥಳಿಸಿದ್ದಾರೆ ಎನ್ನಲಾಗಿದೆ.

See also  ಸ್ವಾಮೀಜಿ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲು..! 10 ಲಕ್ಷಕ್ಕೆ 'ಸೆಟಲ್ ಮೆಂಟ್' ಆರೋಪ..!
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget