ನ್ಯೂಸ್ ನಾಟೌಟ್: ಮದುವೆ ಮಾಡಬೇಕೆಂದು ಒತ್ತಾಯಿಸಿ ವಿದ್ಯುತ್ ಕಂಬ ಏರಿದ ಯುವಕ ಕೊನೆಗೆ 66 ಸಾವಿರ ಕೆ.ವಿ. ವಿದ್ಯುತ್ ತಂತಿ ಹಿಡಿದು ಸಾವನಪ್ಪಿದ ಘಟನೆ ಕೊಳ್ಳೇಗಾಲದ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಟಿ ಸಿ ಹಂಡಿಯಲ್ಲಿ ಮಾ.18ರ ಮಂಗಳವಾರ ನಡೆದಿದೆ.
ಮಧುವನಹಳ್ಳಿ ಗ್ರಾಮದ ಮಸಣ ಶೆಟ್ಟಿ ಎಂಬವರ ಪುತ್ರ 27 ವರ್ಷದ ಯುವಕ ಮೃತಪಟ್ಟ ವ್ಯಕ್ತಿ ಎಂದು ಗುರುತಿಸಲಾಗಿದೆ.
ಗ್ರಾಮಾಂತರ ಪೊಲೀಸರು ಮತ್ತು ಅಗ್ನಿಶಾಮಕ ದಳ ಹಾಗೂ ಚೆಸ್ಕಾಂ ಇಲಾಖೆಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಶವವನ್ನು ಇಳಿಸಿದ್ದಾರೆ.
ರೈತ ದೊಡ್ಡಮಲ್ಲ ಎಂಬವರ ಜಮೀನಿನಲ್ಲಿ ಹಾಕಿರುವ ವಿದ್ಯುತ್ ಟವರ್ ಅನ್ನು ಬೆಳಗ್ಗೆ ಮಸಣಶೆಟ್ಟಿ ಏರಿದ್ದ. ಇದನ್ನು ನೋಡಿದ ಸ್ಥಳೀಯರು ಹಾಗೂ ಅಕ್ಕಪಕ್ಕದ ಜಮೀನಿನ ರೈತರು ಕೆಳಗಿಳಿಯಲು ಹೇಳಿದ್ದಾರೆ. ಕೊಳ್ಳೇಗಾಲ ಪಟ್ಟಣ ಪೊಲೀಸರು ಹಾಗೂ ಗ್ರಾಮಾಂತರ ಠಾಣಾ ಪೊಲೀಸರು ಲೈನ್ ಮ್ಯಾನ್ಗಳು, ಅಗ್ನಿ ಶಾಮಕದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಕೆಳಗೆ ಇಳಿಯುವಂತೆ ಕೇಳಿಕೊಂಡರು.
ಆದರೆ, ಮಸಣಶೆಟ್ಟಿ ನನ್ನ ತಾಯಿಯನ್ನು ಕರೆಸಿ ನಾನು ಆಕೆಯೊಂದಿಗೆ ಮಾತನಾಡಬೇಕು ಎಂದ. ಸ್ಥಳಕ್ಕೆ ತಾಯಿ ಸಿದ್ದರಾಜಮ್ಮ ಧಾವಿಸಿದರು. ಈ ವೇಳೆ ಕೆಳಗೆ ಇಳಿಯುವಂತೆ ಪರಿ ಪರಿಯಾಗಿ ಕೇಳಿಕೊಂಡರೂ ನೋಡು ನೋಡುತ್ತಿದ್ದಂತೆ ವಿದ್ಯುತ್ ತಂತಿ ಹಿಡಿದು ಮೃತಪಟ್ಟಿದ್ದಾನೆ.