ನ್ಯೂಸ್ ನಾಟೌಟ್: ಮದುವೆಯಾದ ಎರಡೇ ವಾರಕ್ಕೆ ಪತ್ನಿಯೊಬ್ಬಳು ಸುಪಾರಿ ನೀಡಿ ಪತಿಯನ್ನು ಹತ್ಯೆಗೈ ಮಾಡಿರುವ ಆಘಾತಕಾರಿ ಘಟನೆ ಉತ್ತರಪ್ರದೇಶದ ಔರಿಯಾ ಜಿಲ್ಲೆಯಲ್ಲಿ ನಡೆದಿದೆ.
ಹತ್ಯೆಯಾದ ವ್ಯಕ್ತಿಯನ್ನು ದಿಲೀಪ್ ಎಂದು ಗುರುತಿಸಲಾಗಿದೆ. ಘಟನೆಗೆ ಸಂಬಂಧಿಸಿ ಪತ್ನಿ ಪ್ರಗತಿ ಯಾದವ್(22) ಹಾಗೂ ಆಕೆಯ ಗೆಳೆಯ ಅನುರಾಗ್ ಯಾದವ್ ಸೇರಿ ಸುಪಾರಿ ಹಂತಕರನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರಗತಿ ಯಾದವ್ ಮತ್ತು ಅನುರಾಗ್ ಯಾದವ್ ಕಳೆದ ನಾಲ್ಕು ವರ್ಷಗಳಿಂದ ಪರಸ್ಪರ ಒಬ್ಬರಿಗೊಬ್ಬರು ಪ್ರೀತಿಸುತ್ತಿದ್ದರು ಈ ವಿಚಾರ ಪ್ರಗತಿ ಮನೆಯವರಿಗೆ ಗೊತ್ತಾಗಿದೆ, ಆದರೆ ಮನೆಯವರು ಈ ಸಂಬಂಧವನ್ನು ಒಪ್ಪಲಿಲ್ಲ ಅಲ್ಲದೆ ತರಾತುರಿಯಲ್ಲಿ ಮಾರ್ಚ್ 5 ರಂದು ದಿಲೀಪ್ ಎಂಬಾತನ ಜೊತೆ ಪ್ರಗತಿಯ ಮದುವೆಯನ್ನು ಬಲವಂತವಾಗಿ ಮಾಡಿಸಿದ್ದಾರೆ.
ಇದಾದ ಕೇವಲ ಎರಡು ವಾರದಲ್ಲಿ ಅಂದರೆ ಮಾರ್ಚ್ 19 ರಂದು ದಿಲೀಪ್ ಮೇಲೆ ಗುಂಡಿನ ದಾಳಿ ನಡೆದಿದೆ. ಘಟನೆಯಲ್ಲಿ ದಿಲೀಪ್ ಗಂಭೀರ ಗಾಯಗೊಂಡಿದ್ದ ಆತನನ್ನು ಕೂಡಲೇ ಸಮುದಾಯ ಆರೋಗ್ಯ ಕೇಂದ್ರಕ್ಕೆ ರವಾನಿಸಲಾಗಿತ್ತು. ಅಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಬಳಿಕ ಸೈಫಾಯಿ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಅಲ್ಲಿ ಕೂಡ ಅರೋಗ್ಯ ಹದಗೆಟ್ಟ ಪರಿಣಾಮ ಹೆಚ್ಚಿನ ಚಿಕಿತ್ಸೆಗೆ ಮಧ್ಯಪ್ರದೇಶದ ಗ್ವಾಲಿಯರ್ ಗೆ ಕರೆದೊಯ್ಯಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಾರ್ಚ್ 21 ರಂದು ದಿಲೀಪ್ ಕೊನೆಯುಸಿರೆಳೆದಿದ್ದಾನೆ. ಘಟನೆಗೆ ಸಂಬಂಧಿಸಿ ದಿಲೀಪ್ ಸಹೋದರ ಸಹರ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳ ಪತ್ತೆ ಮಾಡಿದ್ದಾರೆ.