Latestದೇಶ-ವಿದೇಶವಿಡಿಯೋವೈರಲ್ ನ್ಯೂಸ್

ಮದುವೆ ಮಂಟಪದಲ್ಲೂ ಭಾರತ – ಪಾಕಿಸ್ತಾನ ನಡುವಿನ ರೋಚಕ ಪಂದ್ಯದ ನೇರ ಪ್ರಸಾರ..! ಇಲ್ಲಿದೆ ವಿಡಿಯೋ

568

ನ್ಯೂಸ್ ನಾಟೌಟ್ : ಅದಿಲಾಬಾದ್ ಪಟ್ಟಣದಲ್ಲಿ ನಡೆದ ಮದುವೆ ಮನೆಯೊಂದರಲ್ಲಿ ಭಾನುವಾರ(ಫೆ.23) ನಡೆದ ಭಾರತ – ಪಾಕಿಸ್ತಾನ ನಡುವಿನ ರೋಚಕ ಪಂದ್ಯದ ವೀಕ್ಷಣೆಗೆ ಅವಕಾಶ ಮಾಡಿಕೊಡುವ ಮೂಲಕ ನವದಂಪತಿಗಳು ಗಮನ ಸೆಳೆದಿದ್ದಾರೆ. ಮಂಟಪದ ಎಲ್ ​ಇ ಡಿ ಸ್ಕ್ರೀನ್ ಮೂಲಕ ಮ್ಯಾಚ್ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿತ್ತು. ಮದುವೆಗೆ ಬಂದ ಅತಿಥಿಗಳು, ಹಿತೈಷಿಗಳು, ಸ್ನೇಹಿತರು, ಹೈವೋಲ್ಟೇಜ್ ಪಂದ್ಯ ವೀಕ್ಷಿಸಿ ನವದಂಪತಿಗೆ ಆಶೀರ್ವದಿಸಿದ್ದು ಕಂಡು ಬಂದಿತು.

ಅದಿಲಾಬಾದ್ ಜಿಲ್ಲೆಯ ಭೀಮಪುರ ಮಂಡಲದ ನಿಪಾಣಿ ಗ್ರಾಮದ ಮಸ್ಕಾರಿ ಮಣಿ ಶರ್ಮಾ ಮತ್ತು ಸಾಯಿ ಪ್ರಿಯಾ ಎಂಬುವರು ಭಾನುವಾರ ಅದಿಲಾಬಾದ್ ಪಟ್ಟಣದಲ್ಲಿ ಹಸೆಮಣೆ ಏರಿದ್ದು, ಅದಕ್ಕೂ ಮುನ್ನ ತಮ್ಮ ಮದುವೆ ಬಂದ ಅತಿಥಿಗಳಿಗೆ ಇಂಡೋ – ಪಾಕ್ ಪಂದ್ಯ​ ವೀಕ್ಷಣೆಗೆ ಅವಕಾಶ ಮಾಡಿಕೊಟ್ಟು ಗಮನ ಸೆಳೆದರು. ಮದುವೆ ಸಭಾಂಗಣದಲ್ಲಿ, ಮದುವೆ ವಿಡಿಯೋವನ್ನು ತೋರಿಸಬೇಕಿದ್ದ ಎಲ್​ಇಡಿ ಪರದೆಯ ಮೇಲೆ ಹೈವೋಲ್ಟೇಜ್ ಪಂದ್ಯದ ನೇರಪ್ರಸಾರ ವೀಕ್ಷಿಸಲು ಮಾಡಿಕೊಟ್ಟಿದ್ದು ವಿಶೇಷವಾಗಿತ್ತು.

ಮದುವೆ ಆಗಮಿಸಿದ್ದ ವರನ ಸ್ನೇಹಿತರು, ಸಂಬಂಧಿಕರು, ಹಿತೈಷಿಗಳು ವಿವಾಹದ ಜೊತೆ ಜೊತೆಗೆ ಹೈವೋಲ್ಟೇಜ್ ಕ್ರಿಕೆಟ್ ಪಂದ್ಯ ನೋಡಿ ಖುಷಿಪಟ್ಟರು. ಸಾಮಾಜಿಕ ಜಾಲತಾಣದಲ್ಲಿ ವರನ ಸ್ನೇಹಿತರೊಬ್ಬರು ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

See also  ಪ್ರಭು ಶ್ರೀರಾಮನಿಗೆ ಅಸ್ತಿತ್ವವೇ ಇಲ್ಲವೆಂದ ಡಿಎಂಕೆ ಮುಖಂಡ..!, ಎಸ್‌.ಎಸ್‌. ಶಿವಶಂಕರ್‌ ಹೇಳಿದ್ದೇನು…? ವಿಡಿಯೋ ವೀಕ್ಷಿಸಿ
  Ad Widget   Ad Widget   Ad Widget   Ad Widget   Ad Widget   Ad Widget   Ad Widget