Uncategorizedಕ್ರೈಂದೇಶ-ಪ್ರಪಂಚದೇಶ-ವಿದೇಶವಿಡಿಯೋವೈರಲ್ ನ್ಯೂಸ್

ಮದುವೆಗೆ ಬಂದಿದ್ದ ಸ್ನೇಹಿತ ಮಂಟಪದಲ್ಲೇ ಕುಸಿದು ಬಿದ್ದು ಸಾವು..! ಇಲ್ಲಿದೆ ವೈರಲ್ ವಿಡಿಯೋ

ನ್ಯೂಸ್‌ ನಾಟೌಟ್: ತನ್ನ ಸ್ನೇಹಿತನ ಮದುವೆ ಸಮಾರಂಭಕ್ಕೆ ತೆರಳಿದ್ದ ಗೆಳೆಯನೋರ್ವ ಮದುವೆ ಸಮಾರಂಭದ ವೇದಿಕೆಯಲ್ಲೇ ವಧು-ವರರಿಗೆ ಶುಭಾಶಯ ಹೇಳಲು ಬಂದವ ಕುಸಿದು ಬಿದ್ದು ಮೃತಪಟ್ಟಿರುವ ಆಘಾತಕಾರಿ ಘಟನೆಯೊಂದು ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿ ನಡೆದಿದೆ.

ಬೆಂಗಳೂರಿನ ಅಮೆಜಾನ್ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದ ವಂಶಿಕುಮಾರ್ ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ.

ಇತ್ತೀಚಿಗೆ ವಂಶಿ ಆಂದ್ರಪ್ರದೇಶದ ಕರ್ನೂಲ್ ಜಿಲ್ಲೆಯ ಕೃಷ್ಣಗಿರಿ ಮಂಡಲದ ಪೆನುಮಾಡದಲ್ಲಿ ತನ್ನ ಸ್ನೇಹಿತನ ಮದುವೆ ಸಮಾರಂಭದಲ್ಲಿ ಭಾಗಿಯಾಗಿದ್ದ ಈ ವೇಳೆ ತನ್ನ ಸಹ ಸ್ನೇಹಿತರ ಜೊತೆ ವೇದಿಕೆಗೆ ತೆರಳಿ ನವ ದಂಪತಿಗಳಿಗೆ ಉಡುಗೊರೆ ನೀಡಿದ್ದಾರೆ, ನವದಂಪತಿಗಳು ಸಂಭ್ರಮದಿಂದ ಉಡುಗೊರೆಯ ಕವರ್ ತೆರೆಯುತ್ತಿದ್ದ ವೇಳೆ ವೇದಿಕೆ ಮೇಲಿದ್ದ ವಂಶಿಕುಮಾರ್ ಹೃದಯಾಘಾತದಿಂದ ಕುಸಿದು ಬಿದ್ದಿದ್ದಾನೆ. ಇದನ್ನು ಗಮನಿಸಿದ ಸ್ನೇಹಿತರು ತಕ್ಷಣ ಆತನನ್ನು ಹಿಡಿದಿದ್ದಾರೆ. ಬಳಿಕ ಆತನನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದಾರೆ, ಆದರೆ ದುರಾದೃಷ್ಟವಶಾತ್ ತಪಾಸಣೆ ನಡೆಸಿದ ವೈದ್ಯರು ವಂಶಿ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.

Click

https://newsnotout.com/2024/11/kasaragodu-family-issue-women-police-nomore-by-husband-kannada-news-fn/
https://newsnotout.com/2024/11/darshan-thugudeepa-kannada-news-highcourt-lawyer-kannada-news-d/
https://newsnotout.com/2024/11/bus-car-lorry-rayachur-kannada-news-bengaluru-viral-news-d/

Related posts

ಚಿತ್ರವೊಂದರಲ್ಲಿ ದೇಶಭಕ್ತಿ ಗೀತೆಗೆ ಧ್ವನಿ ನೀಡಿದ ಕೊಡಗಿನ ಚೆಲ್ವೆ..!ನಟಿಸುವುದರೊಂದಿಗೆ ಗಾಯನದಲ್ಲೂ ಸೈ ಎನಿಸಿಕೊಂಡ ಖ್ಯಾತ ನಟಿ ಪ್ರೇಮಾ..!ಹಾಡು ಯಾವುದು ಗೊತ್ತಾ?

ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಇದ್ದ ಹೆಲಿಕಾಪ್ಟರ್ ಪತನ: ಘಟನಾ ಸ್ಥಳದಲ್ಲಿ 4 ಮೃತದೇಹ ಪತ್ತೆ

ತಿರುಮಲದಲ್ಲಿ ಮತ್ತೆ ರಾತ್ರೋರಾತ್ರಿ ಚಿರತೆ, ಕರಡಿ ಪ್ರತ್ಯಕ್ಷ? ಭಕ್ತರಿಗೆ ದೇವಸ್ಥಾನದ ಟ್ರಸ್ಟ್ ನೀಡಿದ ಎಚ್ಚರಿಕೆ ಏನು..? ಸಂಚಾರ ನಿಯಮದಲ್ಲಿ ತಂದ ಬದಲಾವಣೆ ಏನು?