ಕ್ರೈಂಜೀವನ ಶೈಲಿ/ಆರೋಗ್ಯಮಹಿಳೆ-ಆರೋಗ್ಯರಾಜಕೀಯ

ತನ್ನ ಮೆಹಂದಿ ಕಾರ್ಯಕ್ರಮದಲ್ಲಿ ಡ್ಯಾನ್ಸ್ ಮಾಡುತ್ತಿದ್ದ ವಧು ಕುಸಿದು ಬಿದ್ದು ಸಾವು..! ಈ ಬಗ್ಗೆ ವೈದ್ಯರು ಹೇಳಿದ್ದೇನು..?

237

ನ್ಯೂಸ್ ನಾಟೌಟ್ : ಯುವತಿ ತನ್ನ ಮದುವೆಯನ್ನು ಸಂಭ್ರಮಿಸುತ್ತಲೇ ಹೊಸ ಬದುಕಿನ ಕನಸು ಕಾಣುತ್ತಲೇ ಕೊನೆಯುಸಿರೆಳೆದ ಘಟನೆ ಉತ್ತರಾಖಂಡದ ಡೆಹ್ರಾಡೂನ್‌ನಲ್ಲಿ ನಡೆದಿದೆ. ಮೃತರನ್ನು ಶ್ರೇಯಾ ಜೈನ್ (28) ಎಂದು ಗುರುತಿಸಲಾಗಿದೆ.

ಈಕೆ ಎಂಬಿಎ ಪದವಿದರೆಯಾಗಿದ್ದರು. ವರ ಲಕ್ನೋದ ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ದೆಹಲಿ ಮೂಲದ ಶ್ರೇಯಾ ಅವರ ಕುಟುಂಬ ಡೆಹ್ರಾಡೂನ್‌ನಲ್ಲಿ ಮದುವೆ ಕಾರ್ಯಕ್ರಮಕ್ಕಾಗಿ ಐಷಾರಾಮಿ ರೆಸಾರ್ಟ್ ಅನ್ನು ಬುಕ್ ಮಾಡಿತ್ತು. ಮದುವೆಗೆ ಎರಡು ದಿನಗಳ ಮೊದಲು, ಶ್ರೇಯಾ ಜೈನ್ ತನ್ನ ಕುಟುಂಬ ಮತ್ತು ಸ್ನೇಹಿತರೊಂದಿಗೆ ನಕುಚಿಯಾಟಲ್‌ ನಲ್ಲಿರುವ ಐಷಾರಾಮಿ ರೆಸಾರ್ಟ್‌ಗೆ ತಲುಪಿದ್ದಾರೆ. ವಿವಾಹದ ನಿಮಿತ್ತ ಅದ್ಧೂರಿಯಾಗಿ ಮೆಹಂದಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಅದರಂತೆ ಸಂಗೀತ ಕಾರ್ಯಕ್ರಮಗಳೊಂದಿಗೆ ಮೆಹೆಂದಿ ಕಾರ್ಯಕ್ರಮ ಆರಂಭವಾಗಿತ್ತು. ಆದರೆ ಮೆಹಂದಿ ದಿನದಂದು ಡ್ಯಾನ್ಸ್ ಮಾಡುವಾಗ ವಧು ಕುಸಿದು ಬಿದ್ದು ಸಾವನ್ನಪ್ಪಿದ್ದಾಳೆ. ಕೂಡಲೇ ಆಕೆಯನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಅದಾಗಲೇ ಯುವತಿ ಸಾವನ್ನಪ್ಪಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ. ಹೃದಯ ರಕ್ತನಾಳದ ತೊಂದರೆಯಿಂದ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ದೃಢಪಡಿಸಿದ್ದಾರೆ.

Click 👇

https://newsnotout.com/2024/06/darshan-and-vijayalakshmi-court-issue-stay-order-against-media
https://newsnotout.com/2024/06/real-hero-mahesh-babu-helps-poor-family-and-taken-for-granted
https://newsnotout.com/2024/06/ramayana-stage-play-fine-due-to-misleading-content-and-parts
https://newsnotout.com/2024/06/alchohol-kannada-news-tamil-nadu-case-25-people-nomore
See also  ಪೊಲೀಸ್ ಮತ್ತು ಆರೋಪಿಯ ನಡುವೆ ಬೀದಿ ಜಗಳ..! ಇಲ್ಲಿದೆ ವಿಡಿಯೋ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget