ವಿಡಿಯೋವೈರಲ್ ನ್ಯೂಸ್

ಮದುವೆಯಾಗದೆ ಓದುವುದಿಲ್ಲವೆಂದು ಹಠ ಹಿಡಿದ ಬಾಲಕ..!13 ವರ್ಷಕ್ಕೇ ಮದುವೆ ನಿಶ್ಚಿತಾರ್ಥ..?

115

ನ್ಯೂಸ್ ನಾಟೌಟ್: ಬಾಲಕಿಯನ್ನು ಮದುವೆಯಾಗಲು ಅವಕಾಶ ನೀಡಿದರೆ ಮಾತ್ರ ಓದು ಮುಂದುವರಿಸುವುದಾಗಿ ಹುಡುಗ ಹಠ ಹಿಡಿದಿದ್ದು,ಈತನ ಹಠಕ್ಕೆ ಕುಟುಂಬಸ್ಥರು ನಿಶ್ಚಿತಾರ್ಥ ಮಾಡಿಸಿದ್ದಾರೆ ಎಂದು ವರದಿ ತಿಳಿಸಿದೆ.

@salaam_pakistan ಎಂಬ ಹೆಸರಿನ ಇನ್ಸ್ಟಾಗ್ರಾಮ್​​ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದ್ದು, ಸದ್ಯ ವಿಡಿಯೋ ಎಲ್ಲೆಡೆ ವೈರಲ್​​ ಆಗಿದೆ. ದೇಶದಲ್ಲಿ ಮದುವೆಗೆ ಕನಿಷ್ಠ ವಯಸ್ಸಿನ ಕಾನೂನು ನಿರ್ಬಂಧಗಳ ಹೊರತಾಗಿಯೂ, ಎರಡು ಕುಟುಂಬಗಳ ಒಪ್ಪಿಗೆಯಿಂದಲೇ ಈ ಪುಟ್ಟ ಮಕ್ಕಳಿಗೆ ನಿಶ್ಚಿತಾರ್ಥ ಮಾಡಲಾಗಿದೆ.

“ನನಗೆ ಮದುವೆ ಮಾಡಿಸಿದರೆ ಮಾತ್ರ ನಾನು ಸ್ಕೂಲಿಗೆ ಹೋಗುವೆ” ಎಂದು ಪಟ್ಟು ಹಿಡಿದು ಕೂತಿದ್ದರಿಂದ ಬಾಲಕನ ಆಸೆಯಂತೆ ಮದುವೆ ಮಾಡಿಸಲು ಮುಂದಾಗಿದ್ದೇವೆ ಎಂದು ಪೋಷಕರು ಹೇಳಿಕೊಂಡಿರುವುದು ವರದಿ ತಿಳಿಸಿದೆ.

ಬಾಲಕಿಯನ್ನು ಮದುವೆಯಾಗಲು ಅವಕಾಶ ನೀಡಿದರೆ ಮಾತ್ರ ಓದು ಮುಂದುವರಿಸುವುದಾಗಿ ಹುಡುಗ ಹಠ ಹಿಡಿದಿದ್ದು, ಇದರಿಂದ ಕುಟುಂಬಸ್ಥರು ನಿಶ್ಚಿತಾರ್ಥ ಮಾಡಿಸಿದ್ದಾರೆ ಎಂದು ವರದಿಯಾಗಿದೆ. ಈ ವಿಡಿಯೋ ಎಷ್ಟು ನಿಜ ಎಂಬುದನ್ನು ಇನ್ನಷ್ಟೇ ತಿಳಿಯಬೇಕಿದೆ.

See also  ಅಯೋಧ್ಯೆ ರಾಮಮಂದಿರದ ಬಳಿ ಹಾರಾಡುತ್ತಿದ್ದ ನಿಗೂಢ ಡ್ರೋನ್ ಹೊಡೆದುರುಳಿಸಿದ ಪೊಲೀಸರು..! ರಾಮಮಂದಿರದ ಸುತ್ತಲೂ ಗುಪ್ತಚರ ಸಂಸ್ಥೆ ಕಟ್ಟೆಚ್ಚರ..!
  Ad Widget   Ad Widget   Ad Widget   Ad Widget   Ad Widget   Ad Widget