Latestಕ್ರೈಂದೇಶ-ವಿದೇಶವಿಡಿಯೋವೈರಲ್ ನ್ಯೂಸ್

ಮದುವೆಯಲ್ಲಿ ವರನಿಗೆ ನೀಲಿ ಬಣ್ಣದ ಡ್ರಮ್ ಉಡುಗೊರೆ ಕೊಟ್ಟ ಸ್ನೇಹಿತರು..! ಕೊಲೆ ಪ್ರಕರಣ ನೆನಪಿಸಿದ ವೈರಲ್ ವಿಡಿಯೋ..!

916

ನ್ಯೂಸ್‌ ನಾಟೌಟ್‌: ಇತ್ತೀಚೆಗೆ ಉತ್ತರ ಪ್ರದೇಶದ ಮೀರತ್‌ನಲ್ಲಿ ಸೌರಭ್ ರಜಪೂತ್ ಎಂಬ ವ್ಯಕ್ತಿಯನ್ನು ಆತನ ಪತ್ನಿ ಮುಸ್ಕಾನ್ ರಸ್ತೋಗಿ ಮತ್ತು ಆಕೆಯ ಪ್ರಿಯಕರ ಸಾಹಿಲ್ ಶುಕ್ಲಾ ಭೀಕರವಾಗಿ ಕೊಲೆ ಮಾಡಿದ್ದು ದೇಶಾದ್ಯಂತ ಸಂಚಲನ ಮೂಡಿಸಿತು. ಪತಿಯನ್ನು ಕೊಂದು, ಮೃತ ದೇಹವನ್ನು 15 ತುಂಡುಗಳಾಗಿ ಕತ್ತರಿಸಿ, ನೀಲಿ ಬಣ್ಣದ ಡ್ರಮ್‌ ನಲ್ಲಿ ಹಾಕಿ ಸಿಮೆಂಟ್‌ನಿಂದ ಮುಚ್ಚಲಾಗಿತ್ತು. ಕೊನೆಗೆ, ಸೌರಭ್ ಅವರ ಕುಟುಂಬ ದೂರು ನೀಡಿದ ನಂತರ ಕೊಲೆ ಪ್ರಕರಣ ಬೆಳಕಿಗೆ ಬಂದಿತು.

ಈ ಕೊಲೆ ಪ್ರಕರಣ ಭಾರಿ ಸುದ್ದಿಯಾದಾಗಿನಿಂದ ನೀಲಿ ಡ್ರಮ್ ದೇಶಾದ್ಯಂತ ಭಯದ ಸಂಕೇತವಾಗಿದೆ. ನೀಲಿ ಬಣ್ಣದ ಡ್ರಮ್ ಖರೀದಿಸುವ ಯಾರಾದರೂ ಅನುಮಾನ ಎದುರಿಸುವಂತಾಗಿದೆ. ಕೆಲವು ಪ್ರದೇಶಗಳಲ್ಲಿ, ಈ ಕೊಲೆಯಿಂದಾಗಿ ನೀಲಿ ಡ್ರಮ್‌ಗಳಿಗೆ ಬೇಡಿಕೆ ಕಡಿಮೆಯಾಗಿದೆ. ಕೆಲವು ಸ್ಥಳಗಳಲ್ಲಂತೂ ಹೆಂಡತಿಯರು ನೀಲಿ ಬಣ್ಣದ ಡ್ರಮ್‌ ಹೆಸರೇಳಿ ತಮ್ಮ ಗಂಡಂದಿರನ್ನು ಬೆದರಿಸುತ್ತಿರುವುದಾಗಿ ದೂರುಗಳು ದಾಖಲಾಗಿವೆ.

ಇದನ್ನೇ ತಮಾಷೆಯಾಗಿ ಮದುವೆಯಲ್ಲಿ ಬಳಸಲಾಗಿದೆ. ವಧು-ವರರಿಗೆ ಸ್ನೇಹಿತರೆಲ್ಲರೂ ಜೊತೆಗೆ ನೀಲಿ ಬಣ್ಣದ ಡ್ರಮ್ ಅನ್ನು ಉಡುಗೊರೆಯಾಗಿ ನೀಡಿದ್ದು, ಈ ವಿಡಿಯೋವೊಂದು ವೈರಲ್ ಆಗುತ್ತಿದೆ. ಈ ಉತ್ತರ ಪ್ರದೇಶದ ಹಮೀರ್‌ಪುರದಲ್ಲಿ ನಡೆದ ಮದುವೆಯಲ್ಲಿ ಸ್ನೇಹಿತರು ಈ ರೀತಿ ಉಡುಗೊರೆ ನೀಡುವ ಮೂಲಕ ಸುದ್ದಿಯಾಗಿದ್ದಾರೆ.

@betabdilshad ಹೆಸರಿನ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ವೇದಿಕೆಯ ಮೇಲೆ ನೂತನ ವಧುವರರು ನಿಂತುಕೊಂಡಿದ್ದಾರೆ. ಶುಭಾಶಯ ತಿಳಿಸಲು ವರನ ಸ್ನೇಹಿತರ ದಂಡೇ ವೇದಿಕೆಯನ್ನು ಏರಿದ್ದು, ನೀಲಿ ಬಣ್ಣದ ಡ್ರಮ್ ನ್ನು ಉಡುಗೊರೆಯಾಗಿ ನವ ಜೋಡಿಗೆ ನೀಡಿದ್ದಾರೆ. ವರ ಒಂದು ಕ್ಷಣ ಈ ಉಡುಗೊರೆಯನ್ನು ನೋಡಿ ಗಾಬರಿಯಾಗಿದ್ದು, ಆದರೆ ತನ್ನ ಪತಿಯ ಸ್ನೇಹಿತರ ಈ ರೀತಿ ವಿಭಿನ್ನ ಉಡುಗೊರೆ ಕಂಡು ವಧುವು ಬಿದ್ದು ಬಿದ್ದು ನಕ್ಕಿದ್ದಾಳೆ.

 

See also  ಪುಣ್ಯಕ್ಷೇತ್ರಗಳ ನದಿ ತೀರದಲ್ಲಿ ಶಾಂಪೂ, ಸೋಪುಗಳ ಮಾರಾಟ ನಿಷೇಧ..! ಅರಣ್ಯ ಸಚಿವರಿಂದ ಆದೇಶ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget