ಕ್ರೀಡೆ/ಸಿನಿಮಾವೈರಲ್ ನ್ಯೂಸ್

ಮದುವೆಯಾಗದೇ ತಾಯಿಯಾಗಲು ನಿರ್ಧರಿಸಿದ್ರಾ ಸಮಂತಾ? ಮಕ್ಕಳನ್ನು ದತ್ತು ಪಡೆಯುವ ಬಗ್ಗೆ ನಟಿ ಹೇಳಿದ್ದೇನು?

ನ್ಯೂಸ್‌ ನಾಟೌಟ್‌: ಸಮಂತಾ (Samantha) ಸದ್ಯಕ್ಕೆ ಯಾವುದೇ ಸಿನಿಮಾದಲ್ಲಿ ನಟಿಸುತ್ತಿಲ್ಲ. ಊರೂರು ಸುತ್ತುತ್ತಾ ಇದ್ದಾರೆ. ಆರೋಗ್ಯದತ್ತ ಗಮನ ಕೊಡುತ್ತಿದ್ದಾರೆ. ಈ ಸಮಯದಲ್ಲಿಯೇ ಸಮಂತಾಗೆ ಮತ್ತೆ ಮದುವೆ ಆಗುವ ಒತ್ತಾಯ ಹೆಚ್ಚಾಗಿದೆ. ಆದರೆ ಸ್ಯಾಮ್ ಲಗ್ನ ಬೇಡ, ಮಕ್ಕಳು ಬೇಕು ಎನ್ನುತ್ತಿದ್ದಾರಂತೆ ಎಂಬ ಸುದ್ದಿ ಹೊರಬಿದ್ದಿದೆ.
ಇನ್ನು ಕೆಲವು ತಿಂಗಳು ಸಮಂತಾ ವೆಕೇಷನ್ ಮಾಡುತ್ತಾ ಆರೋಗ್ಯಕ್ಕೆ ಸಂಬಂಧಿಸಿದ ಟ್ರೀಟ್‌ಮೆಂಟ್ ಪಡೆಯುತ್ತಿದ್ದಾರೆ.

ಈಗ ಮನೆಯಲ್ಲಿ ಮತ್ತೊಂದು ಮದುವೆ ಆಗುವಂತೆ ಒತ್ತಡ ಹೇರುತ್ತಿದ್ದಾರಂತೆ. ಮೂವತ್ತಾರು ವಯಸ್ಸು. ಈಗಲೇ ಇನ್ನೊಂದು ಜೋಡಿ ನೋಡಿಕೋ ಎನ್ನುವುದು ತಪ್ಪಲ್ಲ. ಆದರೆ ಸ್ಯಾಮ್ ಮಾತ್ರ ಮದುವೆಯ (Wedding) ಬಗ್ಗೆ ಹೇಳಿಕೊಂಡಿದ್ದಾರೆ. ಇಬ್ಬರು ಮಕ್ಕಳನ್ನು ದತ್ತು ಪಡೆಯುತ್ತೇನೆ. ನೋ ಮ್ಯಾರೇಜ್ ಎಂದು ತಿಳಿಸಿದ್ದಾರೆ ಎನ್ನಲಾಗಿದೆ.
ಒಂದು ಸಲ ಹೊಡೆತ ಬಿದ್ದರೆ ಮನಸು ಹೀಗೊಂದು ತೀರ್ಮಾನಕ್ಕೆ ಬರುತ್ತದೆ. ಬಹುಶಃ ಸಮಂತಾಗೂ ಅದೇ ಆಗಿರಬೇಕು.

ಇನ್ನೊಂದು ಹುಡುಗ ಇನ್ನೊಂದು ಕನಸು ಹೊಸ ಕಿತ್ತಾಟ? ಬೇಕಾ? ಬೇಡವಾ ಎನ್ನುತ್ತಾ ಸ್ವಂತ ಟ್ರಸ್ಟ್ನಿಂದ ಸಮಾಜ ಸೇವೆ ಮಾಡೋದು. ಮಕ್ಕಳನ್ನು ದತ್ತು ಪಡೆದು ಸಾಕೋದು. ಇದೇ ಗುರಿ ಮಾಡಿಕೊಳ್ಳುವ ಆಸೆ ಇದೆ. ಆದರೆ ಸಮಂತಾ ನಿಲುವನ್ನು ಅಮ್ಮ ಅಪ್ಪ ಒಪ್ಪುತ್ತಾರಾ? ಎಂದ ಬಗ್ಗೆ ಹೊಂದಲದಲ್ಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

Related posts

10 ರೂಪಾಯಿಯ ಆಸೆ ತೋರಿಸಿ ಬಾಲಕಿಗೆ ಲೈಂಗಿಕ ದೌರ್ಜನ್ಯ..! 70 ವರ್ಷದ ವೃದ್ಧನನ್ನು ಬಂಧಿಸಿದ ಪೊಲೀಸರು

ನವಿಲು ಮಾಂಸದ ರೆಸಿಪಿಯ ವಿಡಿಯೋ ಮಾಡಿದ ಯೂಟ್ಯೂಬರ್..! ಆತನನ್ನು ವಶಕ್ಕೆ ಪಡೆದು, ‘ನವಿಲು ಕರಿ’ ಮಾದರಿಯನ್ನು ವಿಧಿವಿಜ್ಞಾನ ಇಲಾಖೆಗೆ ಕಳುಹಿಸಿದ ಅಧಿಕಾರಿಗಳು..!

ಹಿಂದೂ ಯುವಕನನ್ನು ಅಡ್ಡಗಟ್ಟಿ ನಾಯಿಯಂತೆ ಬೊಗಳು ಎಂದು ಹಿಂಸೆ ಕೊಟ್ಟ ಮುಸ್ಲಿಂ ಯುವಕರು! ಯುವಕ ಬಿಚ್ಚಿಟ್ಟ ರಹಸ್ಯವೇನು? ಇಲ್ಲಿದೆ ವೈರಲ್ ವಿಡಿಯೋ