ಕ್ರೈಂವೈರಲ್ ನ್ಯೂಸ್

2 ವರ್ಷದ ಪ್ರೀತಿ 2 ನಿಮಿಷದಲ್ಲಿ ದುರಂತ ಅಂತ್ಯ..! ಯುವತಿಯನ್ನು ಕೊಂದು ಮಣ್ಣಲ್ಲಿ ಹೂತಿಟ್ಟ ಯುವಕ..!

ನ್ಯೂಸ್ ನಾಟೌಟ್ : ಮದುವೆಯಾಗುವಂತೆ ಪೀಡಿಸುತ್ತಿದ್ದಳೆಂದು ಪ್ರಿಯತಮೆ ಮೇಲೆ ಹಲ್ಲೆ ನಡೆಸಿ ಆಕೆಯನ್ನು ಕೊಂದಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ಮೂಲದ ಯುವತಿ ಸೌಮ್ಯ ಕೊಲೆಯಾದವಳು ಎಂದು ಗುರುತಿಸಲಾಗಿದೆ. ಶಿವಮೊಗ್ಗ ಜಿಲ್ಲೆಯ ಸಾಗರ ಮೂಲದ ಯುವಕ ಸೃಜನ್ ಕೊಲೆ ಮಾಡಿದ ಆರೋಪಿ ಎನ್ನಲಾಗಿದೆ.

ಇವರಿಬ್ಬರು ಕಳೆದ ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದರು. ಮದುವೆಯಾಗುವಂತೆ ಯುವತಿಯಿಂದ ಒತ್ತಡ ಹೆಚ್ಚಾದ ಹಿನ್ನೆಲೆಯಲ್ಲಿ ಪ್ರಿಯಕರ ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ತೀರ್ಥಹಳ್ಳಿಯಲ್ಲಿ ಫೈನಾನ್ಸ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಯುವಕ ಕೊಪ್ಪಗೆ ಹಣ ವಸೂಲಿಗೆ ಹೋಗುತ್ತಿದ್ದ. ಯುವತಿ ನರ್ಸಿಂಗ್ ವ್ಯಾಸಂಗ ಮಾಡುತ್ತಿದ್ದಳು. ಇಬ್ಬರ ನಡುವೆ ಪರಿಚಯವಾಗಿ ಪ್ರೀತಿಗೆ ತಿರುಗಿತ್ತು. ಮದುವೆಯಾಗುವುದಾಗಿ ನಂಬಿಸಿ ಯುವಕ ಮೋಸ ಮಾಡಿದ್ದಾನೆ ಎನ್ನಲಾಗಿದೆ.

ಇಬ್ಬರದ್ದು ಬೇರೆ ಬೇರೆ ಸಮುದಾಯ ಆಗಿದ್ದರಿಂದ ಯುವಕನ ಮನೆಯವರು ಮದುವೆಗೆ ವಿರೋಧ ವ್ಯಕ್ತಪಡಿಸಿದ್ದರು. ತೀರ್ಥಹಳ್ಳಿಗೆ ಹೋಗುತ್ತೇನೆ ಅಂತಾ ಜು.2 ರಂದು ಕೊಪ್ಪದಿಂದ ಯುವತಿ ಬಂದಿದ್ದಳು. ಯುವಕನ ಮನೆಗೆ ಕರೆದುಕೊಂಡು ಹೋಗುವಂತೆ ಒತ್ತಡ ಹಾಕಿದ್ದಳು. ನಮ್ಮ ಮನೆಗೆ ಈಗ ಬರಬೇಡ, ನಿಮ್ಮ ಮನೆಗೆ ವಾಪಸ್ ಹೋಗು ಎಂದು ಪ್ರಿಯಕರ ಹೇಳಿದ್ದ. ಇದೇ ವಿಚಾರವಾಗಿ ಇಬ್ಬರ ನಡುವೆ ಜಗಳವಾಗಿದೆ. ಈ ವೇಳೆ ಯುವತಿ ಮೇಲೆ ಯುವಕ ಬಲವಾಗಿ ಹಲ್ಲೆ ಮಾಡಿದ್ದಾನೆ. ಹಲ್ಲೆಯ ಪರಿಣಾಮ ಯುವತಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ ಎಂದು ವರದಿ ತಿಳಿಸಿದೆ. ಇದರಿಂದ ಭಯಭೀತನಾದ ಯುವಕ, ಯುವತಿಯ ಶವವನ್ನು ಮುಂಬಾಳು ಬಳಿ ಹೂತಿಟ್ಟು ತೆರಳಿದ್ದ. ಇತ್ತ ತಮ್ಮ ಮಗಳು ನಾಪತ್ತೆಯಾಗಿದ್ದಾಳೆ ಎಂದು ಕೊಪ್ಪ ಪೊಲೀಸರಿಗೆ ಯುವತಿ ಪೋಷಕರು ದೂರು ನೀಡಿದ್ದರು. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Click

https://newsnotout.com/2024/07/pigeon-dove-and-boy-dddissue-electric-tragedy-viral-news/

Related posts

ಶ್ರದ್ದಾ ಪ್ರಕರಣವನ್ನೂ ಮೀರಿಸುವಂತಿದೆ ಬೆಂಗಳೂರು ಕೇಸ್..! 50 ತುಂಡುಗಳನ್ನು ಜೋಡಿಸಿ ವರದಿ ಸಿದ್ಧ ಪಡಿಸುವುದೇ ಸವಾಲು, ಬ್ಯೂಟಿ ಪಾರ್ಲರ್ ​ನಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಪರಾರಿ..!

ಯುವತಿಯಿಂದ ಲವ್ ಜಿಹಾದ್ ಸುಳ್ಳು ಆರೋಪ, ತನಿಖೆ ಆರಂಭಿಸಿದ ಪೊಲೀಸರೇ ಒಂದು ಕ್ಷಣ ಬೆಚ್ಚಿ ಬಿದ್ರು..!

ಮಂಗಳೂರು: ಸ್ವಾಮಿ ಕೊರಗಜ್ಜನ ದರ್ಶನ ಪಡೆದ ರಿಯಲ್ ಸ್ಟಾರ್ ಉಪೇಂದ್ರ, UI ಸಿನಿಮಾ ರಿಲೀಸ್‌ ಹಿನ್ನೆಲೆ ಕಟೀಲು ದೇಗುಲಕ್ಕೆ ಭೇಟಿ