ಕ್ರೈಂಬೆಂಗಳೂರುವೈರಲ್ ನ್ಯೂಸ್

ಪತ್ನಿಯನ್ನೇ ಕಾಲ್ ಗರ್ಲ್ ಎಂದು ಪೋಸ್ಟ್ ಮಾಡಿದ ಗಂಡ..! ಅಕ್ಕ ಮತ್ತು ತಮ್ಮನಿಗೆ ಎಡೆಬಿಡದೆ ಬರುತ್ತಿರುವ ಕರೆಗಳು..!

195

ನ್ಯೂಸ್ ನಾಟೌಟ್: ಪತ್ನಿ ಜೊತೆಗಿರದೆ ಬಿಟ್ಟು ಹೋಗಿದ್ದಾಳೆಂಬ ಕೋಪಕ್ಕೆ ಆಕೆಯ ಹೆಸರಿನಲ್ಲಿ ಫೇಸ್‌ಬುಕ್‌ ನಲ್ಲಿ ನಕಲಿ ಖಾತೆಯನ್ನು ಸೃಷ್ಟಿಸಿ ಅದರಲ್ಲಿ ಕಾಲ್‌ಗರ್ಲ್‌ ಎಂದು ಆಕೆಯ ಫೋಟೋ ಹಾಗೂ ಫೋನ್‌ ನಂಬರ್ ಹಾಕಿ ಕಿರುಕುಳ ನೀಡಿದ ಆರೋಪ ಕೇಳಿಬಂದಿದೆ. ಈ ಘಟನೆ ಬೆಂಗಳೂರಿನ ನಂದಿನಿ ಲೇಔಟ್‌ನಲ್ಲಿ ನಡೆದಿದೆ. ಮೋಸ ಹೋದ ಮಹಿಳೆಯನ್ನು ಆರೋಪಿ ಸತ್ಯನಾರಾಯಣ ರೆಡ್ಡಿ ಎನ್ನುವವನು 2019ರಲ್ಲಿ ಮದುವೆ ಆಗಿದ್ದರು. ಇಬ್ಬರೂ ಆರಂಭದಲ್ಲಿ ಚೆನ್ನಾಗಿಯೇ ಇದ್ದರು. ಇವರ ದಾಂಪತ್ಯಕ್ಕೆ ಒಂದು ಹೆಣ್ಣು ಮಗು ಕೂಡ ಇದೆ. ಎಲ್ಲವೂ ಸರಿಯಾಗಿದೆ ಎನ್ನುವಾಗ ಕಳೆದೊಂದು ವರ್ಷದಿಂದ ಗಂಡ ಹಾದಿ ತಪ್ಪಿದ್ದಾನೆ.

ಮನೆಯ ನಿರ್ವಹಣೆಗೂ ಸರಿಯಾಗಿ ಸಹಕಾರ ನೀಡದ ಕಾರಣ ಪತ್ನಿ ಪ್ರಶ್ನೆ ಮಾಡಿದ್ದಾಳೆ. ನಂತರ, ಹೆಂಡತಿ ಮೇಲೆ ಕಳೆದೊಂದು ವರ್ಷದಿಂದ ನಿರಂತರವಾಗಿ ಮಾನಸಿಕ ಮತ್ತು ದೈಹಿಕವಾಗಿ ಕಿರುಕುಳ ನೀಡುತ್ತಾ ಬಂದಿದ್ದಾನೆ ಎನ್ನಲಾಗಿದೆ. ಗಂಡನ ಕಿರುಕುಳವನ್ನು ಸಹಿಸಲಾಗದೇ ಹೆಂಡತಿ ಮನೆಯನ್ನು ಬಿಟ್ಟು ತವರು ಮನೆಗೆ ತೆರಳಿದ್ದಾಳೆ. ಈ ವೇಳೆ ಹೆಂಡತಿಯ ತಮ್ಮನೂ ಬಂದು ನಿನಗೆ ನಮ್ಮ ಅಕ್ಕನನ್ನು ಚೆನ್ನಾಗಿ ನೋಡಿಕೊಳ್ಳುವ ಯೋಗ್ಯತೆಯಿಲ್ಲವೆಂದು ಬೈದು ಅಕ್ಕನನ್ನು ಕರೆದುಕೊಂಡು ಮನೆಗೆ ಹೋಗುತ್ತಾನೆ. ಇದರಿಂದ ತೀವ್ರ ಕುಪಿತಗೊಂಡ ಗಂಡ ಏನು ಮಾಡಬೇಕೆಂದು ತಿಳಿಯದೇ ಸಾಮಾಜಿಕ ಜಾಲತಾಣದಲ್ಲಿ ಹೆಂಡತಿಯ ಹೆಸರಿನಲ್ಲಿ ಕಲಾ ಶಶಿ ಎಂದು ನಕಲಿ ಫೇಸ್‌ಬುಕ್ ಖಾತೆಯನ್ನು ಆರಂಭಿಸಿದ್ದಾನೆ. ಜೊತೆಗೆ, ಹೆಂಡತಿಯ ಫೋಟೋವನ್ನು ಕಾಲ್‌ಗರ್ಲ್‌ ಎಂದು ಅಪ್ಲೋಡ್‌ ಮಾಡಿದ್ದಾನೆ.

ನನಗೆ ಯಾವಾಗ ಬೇಕಾದರೂ ಕರೆ ಮಾಡಿ ಎಂದು ಪತ್ನಿ ಹಾಗೂ ಆಕೆಯ ತಮ್ಮನ (ಭಾವಮೈದ) ಮೊಬೈಲ್‌ ನಂಬರ್ ಅನ್ನು ಹಾಕಿ ಪೋಸ್ಟ್‌ ಮಾಡಿದ್ದಾನೆ ಎನ್ನಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಫೇಸ್‌ಬುಕ್‌ನಲ್ಲಿ ಈ ತರಹದ ಪೋಸ್ಟ್ ಹಾಕಿದಾಕ್ಷಣ ಹಲವರು ಅದರಲ್ಲಿ ಹಾಕಿದ್ದ ನಂಬರ್‌ಗೆ ಕರೆ ಮಾಡಿದ್ದಾರೆ. ಜೊತೆಗೆ, ವಾಟ್ಸಾಪ್ ಮೆಸೇಜ್‌ ಮಾಡಿ ಕಿರುಕುಳ ನೀಡಲು ಆರಂಭಿಸಿದ್ದಾರೆ. ನಿನ್ನ ರೇಟ್ ಎಷ್ಟು? ಎಷ್ಟು ಸಮಯ? ಎಂದೆಲ್ಲಾ ಕರೆ ಮಾಡಿ ಕೇಳಿದ್ದಾರೆ. ಆಗ ಫೇಸ್‌ಬುಕ್ ಪರಿಶೀಲನೆ ಮಾಡಿದಾಗ ಕಲಾ ಶಶಿ ಎಂದು ನಕಲಿ ಖಾತೆಯನ್ನು ತೆರೆದಿರುವುದು ಗಮನಕ್ಕೆ ಬಂದಿದೆ. ಇದು ಗಂಡನೇ ಮಾಡಿರುವ ಕಿತಾಪತಿ ಎಂಬುದೂ ತಿಳಿದಿದೆ. ಇದಾದ ನಂತರ ಅಕ್ಕ ಮತ್ತು ತಮ್ಮನಿಗೆ ಇಬ್ಬರಿಗೂ ತೀವ್ರವಾಗಿ ಕರೆಗಳು ಬರಲು ಆರಂಭಿಸಿವೆ. ಈ ಕಿರುಕುಳ ತಾಳಲಾರದೇ ನಂದಿನಿ ಲೇಔಟ್‌ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇನ್ನು ಪೊಲೀಸರು ದೂರು ದಾಖಲಿಸಿಕೊಂಡ ನಂತರ ಆರೋಪಿ ಸತ್ಯನಾರಾಯಣ ರೆಡ್ಡಿಯನ್ನು ಹುಡುಕಲು ಮುಂದಾಗಿದ್ದಾರೆ. ಆದರೆ, ಆರೋಪಿ ವಿದೇಶಕ್ಕೆ ತೆರಳಿದ್ದು, ಅಲ್ಲಿಂದಲೇ ನಕಲಿ ಖಾತೆಯನ್ನು ಹ್ಯಾಂಡಲ್ ಮಾಡುತ್ತಿದ್ದಾನೆ ಎನ್ನಲಾಗಿದೆ. ಪೊಲೀಸರು ಆತನನ್ನು ಸೆರೆಹಿಡಿಯಲು ಕಾರ್ಯಾಚರಣೆ ತೀವ್ರಗೊಳಿಸಿದ್ದಾರೆ.

  Ad Widget   Ad Widget   Ad Widget   Ad Widget   Ad Widget   Ad Widget   Ad Widget