ಕ್ರೈಂ

ಬೈಕ್ ಗೆ ಗುದ್ದಿದ ಲಾರಿಯನ್ನು ಸಿನಿಮೀಯ ಶೈಲಿಯಲ್ಲಿ ಬೆನ್ನಟ್ಟಿದ್ರು..!

128
Spread the love

ಮರ್ಕಂಜ: ಇಲ್ಲಿನ ಅಂಗಡಿಮಜಲು ಬಳಿ ದ್ವಿಚಕ್ರ ವಾಹನವೊಂದಕ್ಕೆ ಮರ್ಕಂಜದಿಂದ ಜಲ್ಲಿ ಹೇರಿಕೊಂಡು ಬರುತ್ತಿದ್ದ ಲಾರಿಯೊಂದು ಗುದ್ದಿ ನಿಲ್ಲಿಸದೆ ಪರಾರಿಯಾದ ಘಟನೆ ನಡೆದಿದೆ. ಈ ವಿಷಯ ಗೊತ್ತಾಗುತ್ತಿದ್ದಂತೆ ಸ್ಥಳೀಯರು ಸಿನಿಮೀಯ ಶೈಲಿಯಲ್ಲಿ ಲಾರಿಯನ್ನು ಬೆನ್ನಟ್ಟಿದರು. ಸೇವಾಜೆ ಬಳಿ ತಡೆದು ನಿಲ್ಲಿಸಿ ಲಾರಿ ಚಾಲಕನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಮಡಪ್ಪಾಡಿ ಕಡೆಯಿಂದ ಬರುತ್ತಿದ್ದ ದ್ವಿಚಕ್ರ ವಾಹನಕ್ಕೆ ಅಂಗಡಿಮಜಲು ಬಳಿ ಲಾರಿ ಗುದ್ದಿದೆ. ಆದರೆ ಚಾಲಕ ಲಾರಿ ನಿಲ್ಲಿಸದೆ ಪರಾರಿಯಾಗಲು ಯತ್ನಿಸಿದ್ದಾನೆ. ತಕ್ಷಣ ಯುವಕರು ಲಾರಿಯನ್ನು ಹಿಂಬಾಲಿಸಿಕೊಂಡು ಹೋಗಿ ತಡೆದಿದ್ದಾರೆ. ಢಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನ ಜಖಂಗೊಂಡಿದ್ದು, ಸವಾರ ಅಲ್ಪ ಸ್ವಲ್ಪ ಗಾಯಗಳೊಂ ದಿಗೆ ಪಾರಾಗಿದ್ದಾರೆ. ಪ್ರಕರಣ ರಾಜಿಯಲ್ಲಿ ಇತ್ಯರ್ಥಪಡಿಸಲಾಯಿತೆಂದು ತಿಳಿದು ಬಂದಿದೆ.

See also  14 ವರ್ಷಗಳ ಬಳಿಕ ಜನಾರ್ಧನ ರೆಡ್ಡಿಗೆ ಬಳ್ಳಾರಿ ಪ್ರವೇಶಕ್ಕೆ ಅನುಮತಿ..! ಸುಪ್ರೀಂ ಕೋರ್ಟ್‌ ಆದೇಶ
  Ad Widget   Ad Widget   Ad Widget