ಕರಾವಳಿಕ್ರೈಂದೇಶ-ವಿದೇಶ

ಮರ್ಕಂಜ: ಸೇವಾಜೆಯ ಅಜ್ಜ ನಾಪತ್ತೆ ಪ್ರಕರಣಕ್ಕೆ ಜ್ಯೋತಿಷ್ಯನ ಟ್ವಿಸ್ಟ್..!, ಕಾಡಿನೊಳಗಿನ ನಿಗೂಢ ಮನೆಯಲ್ಲಿ ಹುಡುಕಲು ಹೋದವರಿಗೆ ಸಿಕ್ಕಿದ್ದೇನು..?

ನ್ಯೂಸ್ ನಾಟೌಟ್: ಮರ್ಕಂಜದ ಸೇವಾಜೆಯಿಂದ ನಿಗೂಢವಾಗಿ ನಾಪತ್ತೆಯಾಗಿರುವ ಸೇವಾಜೆಯ ಅಜ್ಜನ ಪ್ರಕರಣಕ್ಕೆ ಸಂಬಂಧಪಟ್ಟಂತೆ ತೀವ್ರ ಹುಡುಕಾಟ ಮುಂದುವರಿದಿದೆ. ಈ ನಡುವೆ ಜ್ಯೋತಿಷಿ ಹೇಳಿದಂತೆ ಕಾಡಿನೊಳಗಿನ ಮುರಿದ ಮನೆಯೊಂದರಲ್ಲಿ ಹುಡುಕಾಟ ನಡೆಸಲು ಹೋಗಿ ಅಲ್ಲಿ ಏನೂ ಸಿಗದೆ ವಾಪಸ್ ಮರಳಿ ಬಂದಿರುವ ಬಗ್ಗೆ ವರದಿಯಾಗಿದೆ.

ಸೆ.9ರಂದು ಸೇವಾಜೆಯ ಬೆಳ್ಯಪ್ಪ ಗೌಡ ಎಂಬುವವರು ಮನೆಯಿಂದ ಹಠಾತ್ ನಾಪತ್ತೆಯಾಗಿದ್ದರು. ಎಲ್ಲಿ ಹೋದರು ಅನ್ನುವುದೇ ಯಾರಿಗೂ ಗೊತ್ತಿರಲಿಲ್ಲ. ಈ ಬಗ್ಗೆ ಎಲ್ಲ ಕಡೆ ಹುಡುಕಾಟ ನಡೆದಿದ್ದರೂ ನಿಗೂಢವಾಗಿ ಕಾಣೆಯಾದ ಬೆಳ್ಯಪ್ಪ ಅವರ ಬಗ್ಗೆ ಯಾವ ಮಾಹಿತಿಯೂ ಸಿಕ್ಕಿರಲಿಲ್ಲ. ಸುಳ್ಯದ ಪ್ರಗತಿ ಆಂಬ್ಯುಲೆನ್ಸ್ ಚಾಲಕ ಅಚ್ಚು, ಮುತ್ತಪ್ಪನ್ ಆಂಬ್ಯುಲೆನ್ಸ್ ಚಾಲಕ ಅಭಿಲಾಷ್ ಹಾಗೂ ಶೌರ್ಯ ವಿಪತ್ತು ದಳದ ಚಿದಾನಂದ ಮೂಡನಕಜೆ ಒಳಗೊಂಡ ತಂಡ ಕಳೆದ 45 ದಿನಗಳಿಂದ ನಿರಂತರವಾದ ಹುಡುಕಾಟದಲ್ಲಿ ಇದ್ದಾರೆ. ಆದರೆ ಇದುವರೆಗೆ ಅಜ್ಜನ ಮಾಹಿತಿ ಸಿಕ್ಕಿರಲಿಲ್ಲ. ಕಾರ್ಯಾಚರಣೆಯಲ್ಲಿ ಅಜ್ಜನ ಮಗ ಸುಬ್ರಹ್ಮಣ್ಯ, ಸ್ಥಳೀಯರಾದ ಮಾವಿನ ಕೊಡ್ಲು ಭಾಗಿಯಾಗಿದ್ದಾರೆ.

ಬೇರೆ ದಾರಿ ಕಾಣದೆ ಮನೆಯವರು ಜ್ಯೋತಿಷಿ ಮೊರೆ ಹೋಗಿದ್ದಾರೆ. ಜ್ಯೋತಿಷಿ ಕವಡೆ ಹಾಕಿ ಹೇಳಿದ ಪ್ರಕಾರ ನಾಪತ್ತೆಯಾಗಿರುವ ಅಜ್ಜ ಉತ್ತರ ಮಾವಿನ ಕೊಡ್ಲು ಎಂಬಲ್ಲಿ ಇದ್ದಾರೆ. ಮನೆಯಿಂದ ಕಾಡಿನೊಳಗೆ ಸುಮಾರು 3 ಕಿ.ಮೀ. ದಾರಿ ಇದೆ. ಅಲ್ಲೊಂದು ಕಟ್ಟೆ ಇದ್ದು ಕಟ್ಟೆಯ ಹತ್ತಿರ ಪಾಳು ಬಿದ್ದ ಮನೆ ಇದೆ. ಅಲ್ಲಿ ಯಾರು ವಾಸವಿಲ್ಲ, ಅಲ್ಲಿ ಅಜ್ಜ ಇದ್ದಾರೆ ಎಂದು ಕಂಡು ಬಂದಿತ್ತು.

ಆ ಪ್ರಕಾರ ಮನೆಯವರು ಹುಡುಕಲು ಹೇಳಿದಂತೆ ಅಚ್ಚು, ಅಭಿಲಾಷ್ ಹಾಗೂ ಚಿದಾನಂದ ಮೂಡನಕಜೆ ಅವರು ಸ್ಥಳಕ್ಕೆ ಹೋಗಿ ಹುಡುಕಾಟ ನಡೆಸಿದ್ದಾರೆ. ಆದರೆ ಅಲ್ಲಿ ಯಾವುದೇ ಸುಳಿವು ದೊರಕಿರುವುದಿಲ್ಲ. ಇದೀಗ ಅಚ್ಚು ನೇತೃತ್ವದ ತಂಡ ಕುಕ್ಕೆ ಸುಬ್ರಹ್ಮಣ್ಯ ಪರಿಸರದಲ್ಲಿ ಹುಡುಕಾಟ ನಡೆಸುತ್ತಿದೆ. ಈ ಪ್ರಕರಣವನ್ನು ಸುಬ್ರಹ್ಮಣ್ಯ ಪೊಲೀಸರು ಕೂಡ ಗಂಭೀರವಾಗಿ ತೆಗೆದುಕೊಂಡು ಆದಷ್ಟು ಬೇಗ ಕಣ್ಮರೆಯಾಗಿರುವ ಅಜ್ಜನ ರಹಸ್ಯವನ್ನು ಭೇದಿಸುವ ಅಗತ್ಯತೆ ಇದೆ.

Related posts

ಬೆಕ್ಕನ್ನು ಹುಲಿಮರಿ ಎಂದು ಮಾರಾಟ ಮಾಡಲು ಯತ್ನಿಸಿದವ ಅರೆಸ್ಟ್..!

ಮಣ್ಣಿನ ಮಡಿಕೆ ರೆಡಿ ಮಾಡಲು ಬಂತು ಆಧುನಿಕ ಯಂತ್ರ..!,ಮೂಲೆ ಗುಂಪಾಗಿದ್ದ ಮಣ್ಣಿನ ಪಾತ್ರೆಗಳಿಗೆ ಕರಾವಳಿ ಜನರು ಮತ್ತೆ ಒಲವು ತೋರುತ್ತಿರುವುದೇಕೆ?

ಓವರ್‌ಟೇಕ್ ಭರದಲ್ಲಿ ಹಿಂಬದಿಯಿಂದ ಬಂದು ಬೈಕ್‌ಗೆ ಡಿಕ್ಕಿಯಾದ ಕಾರು,ಬೈಕ್ ಸವಾರನಿಗೆ ಗಂ*ಭೀರ ಗಾಯ