ಕ್ರೈಂರಾಜ್ಯವಿಡಿಯೋವೈರಲ್ ನ್ಯೂಸ್

ಫಸ್ಟ್ ನೈಟ್ ವಿಡಿಯೋ ಮಾಡಿಟ್ಟುಕೊಂಡು ಪತ್ನಿಯನ್ನೇ ಬ್ಲ್ಯಾಕ್ ​ಮೇಲ್ ಮಾಡಿದ ಸರ್ಕಾರಿ ಅಧಿಕಾರಿ..! ಮ್ಯಾಟ್ರಿಮೋನಿಯಲ್ಲಿ ಪರಿಚಯವಾಗಿದ್ದ ಗುರುರಾಜ್..!

196

ನ್ಯೂಸ್ ನಾಟೌಟ್: ಮೊದಲ ರಾತ್ರಿಯ ವಿಡಿಯೋ ಮಾಡಿ ಇಟ್ಟುಕೊಂಡು ಪತ್ನಿಯನ್ನೇ ಬ್ಲ್ಯಾಕ್​ಮೇಲ್ ಮಾಡುತ್ತಿದ್ದ ಆರೋಪ ರಾಯಚೂರಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸರ್ಕಾರಿ ಅಧಿಕಾರಿಯೊಬ್ಬರ ವಿರುದ್ಧ ಕೇಳಿಬಂದಿದೆ. ಈ ಸಂಬಂಧ ಇದೀಗ ರಾಯಚೂರು ಜಿಲ್ಲೆ ಮಾನ್ವಿ ಮೂಲದ ಮಹಿಳೆಯೊಬ್ಬರು ಪೊಲೀಸರಿಗೆ ದೂರು ನೀಡಿದ್ದಾರೆ.

ಫಸ್ಟ್ ನೈಟ್ ವಿಡಿಯೋ ರೆಕಾರ್ಡ್ ಮಾಡಿ ಇಟ್ಟುಕೊಂಡಿರುವ ಪತಿ, ತನ್ನ ವಿರುದ್ಧ ಮಾತನಾಡಿದರೆ ಖಾಸಗಿ ಕ್ಷಣದ ವಿಡಿಯೋ ವೈರಲ್ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದಾರೆ ಎಂದು ದೂರಿನಲ್ಲಿ ಮಹಿಳೆ ಉಲ್ಲೇಖಿಸಿದ್ದಾರೆ.

ಮಾನ್ವಿ ವಿಭಾಗದ ಜೆಸ್ಕಾಂನಲ್ಲಿ ಮೇಲ್ವಿಚಾರಕ ಹುದ್ದೆಯಲ್ಲಿ ಗುರುರಾಜ್ ಎಂಬ ಈತ ಕೆಲಸ ಮಾಡುತ್ತಿದ್ದ.
ಮ್ಯಾಟ್ರಿಮೋನಿಯಲ್ಲಿ ಪರಿಚಯವಾಗಿದ್ದ ಗುರುರಾಜ್ ​ನನ್ನು ನಂಬಿ ಮದುವೆಯಾಗಿದ್ದಾಗಿ ಸಂತ್ರಸ್ತೆ ಹೇಳಿಕೊಂಡಿದ್ದಾರೆ. ಗುರುರಾಜ್ ತನ್ನ ಚಾಲಕನನ್ನು ಬಳಸಿಕೊಂಡು ಸಾಕಷ್ಟು ಜನರಿಗೆ ಪತ್ನಿಯ ಜತೆಗಿನ ಲೈಂಗಿಕ ಕ್ರಿಯೆಯ ವಿಡಿಯೋ ತೋರಿಸಿದ್ದಾನೆ ಎಂದೂ ಆರೋಪಿಸಲಾಗಿದೆ. ಕೆಲವು ಮಂದಿ ಬೇರೆ ಹೆಣ್ಣುಮಕ್ಕಳಿಗೂ ಇದೇ ರೀತಿ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ತಮಗೆ ಯಾರ ಬಳಿ ಕೆಲಸ ಆಗತ್ತದೆಯೋ ಅಂಥವರ ಬಳಿ ಹೋಗು ಎಂದು ಗುರುರಾಜ್ ಪತ್ನಿಗೆ ಟಾರ್ಚರ್ ಕೊಟ್ಟಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈಗಾಗಲೇ ಪತಿ ಗುರುರಾಜ್ ನಾಲ್ಕು ಮದುವೆ ಆಗಿದ್ದಾರೆ ಎಂದು ಆರೋಪಿಸಲಾಗಿದೆ. ನನಗೆ ರಕ್ಷಣೆ ಕೊಡಿ, ಪತಿ ಗುರುರಾಜ್ ವಿರುದ್ಧ ಕ್ರಮಕೈಗೊಳ್ಳಿ ಎಂದು ಮಾನ್ವಿ ಠಾಣೆ ಪೊಲೀಸರಿಗೆ ಮಹಿಳೆ ದೂರು ನೀಡಿದ್ದಾರೆ.

Click

https://newsnotout.com/2024/10/lawyer-and-cigarate-kannada-news-mangaluru-bengaluru-issue-cm-statement/
https://newsnotout.com/2024/10/kannada-news-renukaswamy-sahana-kannada-news-darshan/
https://newsnotout.com/2024/10/mangaluru-kananda-news-bus-conductor-kannada-news-viral/
https://newsnotout.com/2024/10/omar-abdulla-kannada-news-rahul-gandhi-mallikarjuna-karge/
https://newsnotout.com/2024/10/juice-theef-kannada-news-police-kannada-news-bengaluru/
https://newsnotout.com/2024/10/youtube-videos-trainning-from-online-police-investigation/
See also  ಕೊಡಗು: ಬೊಲೆರೋ ಜೀಪ್ ಮತ್ತು ಎಸ್ ಕ್ರಾಸ್ ಕಾರಿನ ನಡುವೆ ಭೀಕರ ಅಪಘಾತ..! ಓರ್ವ ಪ್ರಯಾಣಿಕನ ಎರಡೂ ಕಾಲುಗಳು ಕಟ್..!
  Ad Widget   Ad Widget   Ad Widget   Ad Widget   Ad Widget   Ad Widget   Ad Widget   Ad Widget