ಕರಾವಳಿಕ್ರೈಂವಿಡಿಯೋವೈರಲ್ ನ್ಯೂಸ್

ಸೌಜನ್ಯ ಪ್ರಕರಣ: ನ್ಯಾಯ ದೊರಕಿಸಿಕೊಡುವಂತೆ ಕದ್ರಿ ಶ್ರೀ ಮಂಜುನಾಥನಿಗೆ ಸಾಮೂಹಿಕ ಪ್ರಾರ್ಥನೆ! ಸೌಜನ್ಯಾ ತಾಯಿ ಕುಸುಮಾವತಿ ಸೇರಿದಂತೆ ನೂರಾರು ಮಂದಿ ಭಾಗಿ, ಇಲ್ಲಿದೆ ವಿಡಿಯೋ

294

11 ವರ್ಷ ಕಳೆದರೂ ಧರ್ಮಸ್ಥಳದಲ್ಲಿ ನಡೆದ ಸೌಜನ್ಯಾ ಅತ್ಯಾಚಾರಿಗಳು ಮತ್ತು ಹಂತಕರು ಯಾರೆಂದು ಇನ್ನೂ ಬಯಲಾಗಿಲ್ಲ. ಆದ್ದರಿಂದ ಅತ್ಯಾಚಾರ ಹಾಗೂ ಕೊಲೆ ಆರೋಪಿಗಳು ಯಾರೆಂದು ತಿಳಿಸಿಕೊಡಬೇಕೆಂದು ನೂರಾರು ಮಂದಿ ಇಂದು(೧೦ ಆಗಸ್ಟ್) ಮಂಗಳೂರಿನ ಕದ್ರಿ ಶ್ರೀ ಮಂಜುನಾಥ ದೇವರಿಗೆ ಪ್ರಾರ್ಥನೆ ಸಲ್ಲಿಸಿದರು.

ಸಾಮಾಜಿಕ ಕಾರ್ಯಕರ್ತೆ ಪ್ರಸನ್ನ ರವಿಯವರ ನೇತೃತ್ವದಲ್ಲಿ ಸೌಜನ್ಯಾ ತಾಯಿ ಕುಸುಮಾವತಿಯವರು ಸೇರಿದಂತೆ ನೂರಾರು ಮಂದಿ ಕದ್ರಿ ಶ್ರೀ ಮಂಜುನಾಥ ದೇವರ ಸನ್ನಿಧಾನದಲ್ಲಿ ಸಾಮೂಹಿಕ ಪ್ರಾರ್ಥನೆ ನೆರವೇರಿಸಿದರು. ಅತ್ಯಾಚಾರ ಹಾಗೂ ಕೊಲೆ ಮಾಡಿದವರು ಯಾರೆಂದು ಬಯಲಾಗಬೇಕು. ಅವರಿಗೆ ಶಿಕ್ಷೆಯಾಗಬೇಕು. ಈ ಮೂಲಕ ಮೃತ ಸೌಜನ್ಯಾಳಿಗೆ ನ್ಯಾಯ ಸಿಗಬೇಕೆಂದು ಎಲ್ಲರೂ ಕದ್ರಿ ಶ್ರೀ ಮಂಜುನಾಥ ದೇವರ ಮೊರೆ ಹೋಗಲಾಯಿತು.

ಕದ್ರಿ ಶ್ರೀ ಮಂಜುನಾಥ ಹಾಗೂ ಪರಿವಾರ ದೇವರಲ್ಲಿ ಎಲ್ಲರೂ ಸಾಮೂಹಿಕ ಪ್ರಾರ್ಥನೆ ಮಾಡಿ ಶೀಘ್ರ ನ್ಯಾಯ ಸಿಗಬೇಕು. ಅಲ್ಲದೆ ಇದೇ ಕ್ಷೇತ್ರದಲ್ಲಿ ಸಾಮೂಹಿಕ ಪ್ರಾರ್ಥನೆ ‌ಮಾಡುವುದು ಅಂತ್ಯವಾಗಬೇಕು. ಆ ರೀತಿಯಲ್ಲಿ ನ್ಯಾಯ ಸಿಗಬೇಕೆಂದು ಎಲ್ಲರೂ ಪ್ರಾರ್ಥನೆ ಮಾಡಿದರು.

See also  ಮಡಿಕೇರಿ: ಕರೆಂಟ್ ಕಂಬಕ್ಕೆ ಬೈಕ್ ಗುದ್ದಿ ಚಿಮ್ಮಿ ಬಿದ್ದ ಯುವಕರು,ಸ್ಥಳದಲ್ಲೇ ಯುವಕರಿಬ್ಬರು ದುರಂತ ಅಂತ್ಯ:ರಾತ್ರಿ ಘಟನೆ ನಡೆದಿದ್ದರೂ ಬೆಳಗ್ಗೆಯವರೆಗೂ ಗೊತ್ತೇ ಆಗಲಿಲ್ಲ..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget