ಕರಾವಳಿ

ಮಂಗಳೂರು: ಸೀಮೆ ಎಣ್ಣೆ ಸೇವಿಸಿ ವಿದ್ಯಾರ್ಥಿ ಮೃತ್ಯು! ಕಾರಣ ನಿಗೂಢ!

ನ್ಯೂಸ್‌ ನಾಟೌಟ್‌:  ಮಂಗಳೂರಿನಲ್ಲಿ ವಿದ್ಯಾರ್ಥಿಯೊಬ್ಬ ಸೀಮೆಎಣ್ಣೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ಮೃತಪಟ್ಟಿರುವುದಾಗಿ ವರದಿ ತಿಳಿಸಿದೆ. ಆಸ್ಪತ್ರೆಗೆ ದಾಖಲಾದರೂ ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಸಾವನ್ನಪ್ಪಿದ್ದಾನೆ. 

ನೈಮರ್ಮುಲಾ ತನ್ಸಿಯುಲ್ ಇಸ್ಲಾಂ ಹೈಯರ್ ಸೆಕೆಂಡರಿ ಶಾಲೆಯ 10ನೇ ತರಗತಿ ವಿದ್ಯಾರ್ಥಿ ಉಮರ್ ಅಫ್ರಾಬುದ್ದೀನ್ (15) ಪೆರುಂಬಳ ಚಾಳ ಜೆಟ್ಟಿ ಅಶ್ರಫ್ ಹಾಗೂ ಫಾಮಿನಿಯಾ ದಂಪತಿಯ ಪುತ್ರ ಸಾವನ್ನಪ್ಪಿದ ವಿದ್ಯಾರ್ಥಿಯಾಗಿದ್ದು, ಹಲವು ದಿನಗಳಿಂದ ತೀವ್ರ ಅಸ್ವಸ್ಥನಾಗಿದ್ದ ಉಮರ್ ಅಫ್ರಾಬುದ್ದೀನ್ ಸೀಮೆಎಣ್ಣೆ ಸೇವಿಸಿದ್ದಾಗಿ ಪತ್ತೆ ವೈದ್ಯಕೀಯ ಪರೀಕ್ಷೆಯಲ್ಲಿ ಬಯಲಾಗಿದೆ.

ಪರೀಕ್ಷೆಯಲ್ಲಿ ನಾಲ್ಕು ವಿಷಯಗಳಲ್ಲಿ ಕಷ್ಟವಾಯಿತು ಎಂದು ಹೇಳಿಕೊಂಡಿದ್ದ ಎನ್ನಲಾಗಿದೆ. ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ನಿಖರ ಕಾರಣ ಇನ್ನಷ್ಟೆ ತಿಳಿಯಬೇಕಿದೆ.

Related posts

ಗೋಳಿತೊಟ್ಟು ರಸ್ತೆಯಲ್ಲಿ ತಡರಾತ್ರಿ ಕಾಡಾನೆ ವಾಕಿಂಗ್..! ರಾತ್ರಿ ಸಂಚರಿಸುವ ನಾಗರೀಕರೇ ಎಚ್ಚರ..ಎಚ್ಚರ..!

ಮಂಗಳೂರು: 3 ಯುವತಿಯರ ಮೃತದೇಹ ಪೋಷಕರಿಗೆ ಹಸ್ತಾಂತರ, ರೆಸಾರ್ಟ್ ಮಾಲಕ ಮತ್ತು ಮ್ಯಾನೇಜರ್ ಅರೆಸ್ಟ್..!

ಮದ್ಯ ಸೇವಿಸಿ ಮಸೀದಿಯೊಳಗೆ ಪ್ರವೇಶಿಸಿದ್ದ ಅನ್ಯಕೋಮಿನ ವ್ಯಕ್ತಿ..!ಅಸಭ್ಯ ಮಾತನಾಡಿದ ಬಾಗಲಕೋಟೆ ಮೂಲದವನನ್ನು ಬಂಧಿಸಿದ ಪೊಲೀಸರು