ಮಂಗಳೂರುವೈರಲ್ ನ್ಯೂಸ್

ಮಂಗಳೂರಿನ ಸುಮುದ್ರದ ತಳದಲ್ಲಿ ಬೆಲೆ ಬಾಳುವ ರಂಜಕ ಪತ್ತೆ, ಕಡಲಿನ ಆಳದಲ್ಲೂ ಇದೆ ಪಾಸ್ಫರೈಟ್ ನಿಕ್ಷೇಪ

217

ನ್ಯೂಸ್ ನಾಟೌಟ್: ಕೃಷಿಯನ್ನೇ ನೆಚ್ಚಿ ಮೆಚ್ಚಿ ಬದುಕುತ್ತಿರುವವರು ಭಾರತೀಯರು. ದುಡಿಮೆ ದೇವರು ಕಾಯಕವೇ ಕೈಲಾಸ ಇದೆಲ್ಲವೂ ನಮ್ಮ ಜನರ ಬಲ. ಅಂತಹ ದೇಶದಲ್ಲಿ ಅದರಲ್ಲೂ ನಮ್ಮ ಕುಡ್ಲದಲ್ಲಿ (ಮಂಗಳೂರು) ರಸಗೊಬ್ಬರ ತಯಾರಿಕೆಗೆ ಬಳಸುವ ಪಾಸ್ಪೋರಸ್ (ರಂಜಕ) ಇದೀಗ ಸಾಗರಗರ್ಭದಲ್ಲೂ ಸಿಗುತ್ತದೆ ಅನ್ನುವ ಸಿಹಿ ಸುದ್ದಿ ದೊರೆತಿದೆ.

ಸಾಗರದಾಳದ ಪರ್ವತದಲ್ಲಿ ಪಾಸ್ಪೋರೈಟ್ ಇರೋದನ್ನು ಭಾರತೀಯ ಭೂಸರ್ವೇಕ್ಷಣಾ ಸಂಸ್ಥೆ (ಜಿಎಸ್ಐ) ಖಚಿತಪಡಿಸಿದೆ. ಅಧ್ಯಯನ ನಡೆಸಿದ್ದು ಹೇಗೆ..? ಜಿಎಸ್ ಐ ಸಾಗರ ಮತ್ತು ಕರಾವಳಿ ಸಮೀಕ್ಷೆ ವಿಭಾಗದವರು ಸರ್ವೇಕ್ಷಣೆ ನೌಕೆಗಳನ್ನು ಬಳಸಿಕೊಂಡು ಜಂಟಿಯಾಗಿ ಅಧ್ಯಯನ ನಡೆಸಿದರು. ಅಧ್ಯಯನಗಳಲ್ಲಿ ರತ್ನಗಿರಿ, ಕಾರವಾರ, ಮಂಗಳೂರು ಮತ್ತು ಕೋಯಿಕ್ಕೋಡ್ ಗಳಲ್ಲಿ ರಂಜಕ ಇರುವುದನ್ನು ಪತ್ತೆ ಹಚ್ಚಲಾಗಿದೆ.

ಮಂಗಳೂರಿನಲ್ಲಿ ಪತ್ತೆಯಾಗಿದ್ದೆಲ್ಲಿ..? ಮಂಗಳೂರಿನಲ್ಲಿ ಸಾಗರ ಪರ್ವತಗಳಲ್ಲಿ ಪಾಸ್ಫರೈಟ್ ನಿಕ್ಷೇಪವನ್ನು ಪತ್ತೆ ಮಾಡಲಾಗಿದೆ. ಮಂಗಳೂರಿನ ಸಮುದ್ರದಲ್ಲಿ ನಡೆಸಲಾದ ಸಮೀಕ್ಷೆಯ ವೇಳೆ 1800 ಮೀಟರ್‌ನಷ್ಟು ಕೆಳಭಾಗದ ಸಾಗರ ಪರ್ವತದಿಂದ ಪಾಸೆಟಿಕ್ ಮಾದರಿಗಳನ್ನು ಪಡೆಯಲಾಗಿದೆ. ಶೇ. 20ರಿಂದ 30ರ ವರೆಗಿನ ಪಾಸ್ಫೋರಸ್ ಇರುವುದಾಗಿ ತಿಳಿದು ಬಂದಿದೆ.

See also  ರಾಘವೇಂದ್ರ ಮಠದಲ್ಲಿ ವರ್ತೂರ್ ಸಂತೋಷಗೆ ಕ್ಷಮೆ ಕೇಳಿದ್ರಾ ಜಗ್ಗೇಶ್..? ​ ​ ಸಾಮಾಜಿಕ ಜಾಲತಾಣದಲ್ಲಿ ಲೈವ್ ಬಂದ ನಟ ಹೇಳಿದ್ದೇನು..?
  Ad Widget   Ad Widget   Ad Widget     Ad Widget   Ad Widget   Ad Widget Ad Widget     Ad Widget   Ad Widget   Ad Widget