ಕರಾವಳಿಕ್ರೈಂ

ಮಂಗಳೂರು: ರೈಲಿನಲ್ಲಿ ಕತ್ತಿಯಿಂದ ದಾಂಧಲೆ ನಡೆಸಿದ ಪುಂಡರು..! ಟಿಕೆಟ್ ಎಕ್ಸಾಮಿನರ್ ಆರೋಪಿಗಳನ್ನು ಹಿಡಿದದ್ದು ಹೇಗೆ..?

313

ನ್ಯೂಸ್ ನಾಟೌಟ್: ರೈಲಿನಲ್ಲಿ ಕತ್ತಿಯಲ್ಲಿ ದಾಂಧಲೆನಡೆಸಿದ ಇಬ್ಬರನ್ನು ಮಂಗಳೂರಿನಲ್ಲಿ ಪೊಲೀಸ್ ವಶಕ್ಕೆ ಪಡೆದ ಘಟನೆ ಇಂದು(ಜುಲೈ 1) ಬೆಳಕಿಗೆ ಬಂದಿದೆ.

ರೈಲಿನಲ್ಲಿ ಕುಡಿದ ಮತ್ತಿನಲ್ಲಿ ಕತ್ತಿಯಿಂದ ದಾಳಿ ನಡೆಸಿ ಆತಂಕ ಸೃಷ್ಟಿಸಿದ್ದು, ಜೂನ್ 30 ರಂದು ಶುಕ್ರವಾರ ದಾದರ್‌ನಿಂದ ತಿರುನಲ್ವೇಲಿಗೆ ತೆರಳುತ್ತಿದ್ದ ರೈಲಿನಲ್ಲಿ ಘಟನೆ ನಡೆದಿದ್ದು, ಇಬ್ಬರು ವ್ಯಕ್ತಿಗಳಿಂದ ಸುರತ್ಕಲ್ ಮತ್ತು ತೋಕೂರು ರೈಲ್ವೆ ಹಳಿಗಳ ನಡುವೆ ಕತ್ತಿಗಳಿಂದ ದಾಳಿ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪೊಲೀಸರು ಇಬ್ಬರನ್ನು ಬಂಧಿಸಿ ಎರಡು ಕತ್ತಿಗಳನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತರು ತಮಿಳುನಾಡಿನ ಜಯಪ್ರಭು ಮತ್ತು ಪ್ರಸಾದ್ ಎಂದು ಗುರುತಿಸಲಾಗಿದ್ದು, ಗೋವಾದಿಂದ ತಿರುನಲ್ವೇಲಿ ಗೆ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ.

ರೈಲು ಸಂಖ್ಯೆ 22629 ರಲ್ಲಿ ಈ ಘಟನೆ ನಡೆದಿದ್ದು, ಆರೋಪಿಗಳು ತಮಿಳು ಭಾಷೆಯಲ್ಲಿ ಮಾತನಾಡುತ್ತಿದ್ದರು, ಎಸ್ 7 ರಿಸರ್ವೇಶನ್ ಕಂಪಾರ್ಟ್‌ಮೆಂಟ್‌ನಿಂದ ಜನರಲ್ ಕಂಪಾರ್ಟ್‌ಮೆಂಟ್ ಕಡೆಗೆ ಪ್ರಯಾಣಿಕರು ಓಡಿದ್ದು, ಟ್ರಾವೆಲಿಂಗ್ ಟಿಕೆಟ್ ಎಕ್ಸಾಮಿನರ್ (ಟಿಟಿಇ) ಬಾಬು ಕೆ, ಶ್ರೀನಿವಾಸ್ ಶೆಟ್ಟಿ ಮತ್ತು ತಿಮ್ಮಪ್ಪ ಗೌಡ ಆರೋಪಿಗಳನ್ನು ಹಿಡಿದಿದ್ದಾರೆ.

ಇಬ್ಬರು ವ್ಯಕ್ತಿಗಳ ಕೈಯಿಂದ ಕತ್ತಿಗಳನ್ನು ತೆಗೆದುಕೊಂಡು ಅವರಿಬ್ಬರನ್ನು ಹಿಡಿದಿಟ್ಟುಕೊಂಡಿದ್ದಾರೆ. ನಂತರ ಅವರನ್ನು ಮಂಗಳೂರಿನ ರೈಲ್ವೆ ಪೊಲೀಸರಿಗೆ ಹಸ್ತಾಂತರ ಮಾಡಲಾಗಿದೆ. ಘಟನೆಯಲ್ಲಿ ರೈಲಿನ ಸೀಟು ಕಿಟಕಿ ಗಾಜುಗಳಿಗೆ ಹಾನಿಯಾಗಿದೆ ಎಂದು ವರದಿ ತಿಳಿಸಿದೆ.

See also  ಈ ವಿಶ್ವವಿದ್ಯಾಲಯದಲ್ಲಿ ಮುಟ್ಟಿನ ಸಮಯದಲ್ಲೂ ರಜೆ ಸಿಗುತ್ತೆ,ದೇಶದಲ್ಲೇ ಮೊದಲ ಬಾರಿಗೆ ರಜೆ ಘೋಷಿಸಿದ ಕೇರಳ ಶಿಕ್ಷಣ ಇಲಾಖೆ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget