ಕ್ರೈಂವೈರಲ್ ನ್ಯೂಸ್

ಭಯೋತ್ಪಾದಕರ ಜೊತೆ ನಡೆಯುತ್ತಿರುವ ಎನ್‌ಕೌಂಟರ್‌ನಲ್ಲಿ ಮಂಗಳೂರು ಮೂಲದ ಕ್ಯಾಪ್ಟನ್‌ ಹುತಾತ್ಮ ! ಹೇಗಿತ್ತು ಆ ಕೊನೆಯ ಕ್ಷಣ..?

ನ್ಯೂಸ್‌ ನಾಟೌಟ್‌: ಜಮ್ಮು ಮತ್ತು ಕಾಶ್ಮೀರದ (Jammu and Kashmir) ಗಡಿ ಜಿಲ್ಲೆ ರಜೌರಿಯಲ್ಲಿ ಬುಧವಾರ ಭಯೋತ್ಪಾದಕರ ಜೊತೆ ನಡೆಯುತ್ತಿರುವ ಎನ್‌ಕೌಂಟರ್‌ನಲ್ಲಿ ಇಬ್ಬರು ಅಧಿಕಾರಿಗಳು ಸೇರಿದಂತೆ ನಾಲ್ವರು ಸೇನಾ ಸಿಬ್ಬಂದಿ ಹುತಾತ್ಮರಾಗಿದ್ದಾರೆ.

ಭಯೋತ್ಪಾದಕರ ಬಗ್ಗೆ ನಿರ್ದಿಷ್ಟ ಮಾಹಿತಿ ಆಧರಿಸಿ ನವೆಂಬರ್ 19 ರಂದು ಕಲಾಕೋಟೆ ಪ್ರದೇಶದ ಗುಲಾಬ್ಗಢ ಅರಣ್ಯದಲ್ಲಿ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು ಎಂದು ಜಮ್ಮು ಮೂಲದ ರಕ್ಷಣಾ ವಕ್ತಾರರು ತಿಳಿಸಿದ್ದು, ನವೆಂಬರ್ 22 ರಂದು ಎನ್‌ಕೌಂಟರ್‌ ನಡೆದಿದೆ. ಕಾರ್ಯಾಚರಣೆ ಇನ್ನೂ ನಡೆಯುತ್ತಿದೆ ಎಂದು ಸೇನಾ ಮೂಲಗಳು ತಿಳಿಸಿವೆ.
ಹುತಾತ್ಮರಾದ ನಾಲ್ವರಲ್ಲಿ 63 ರಾಷ್ಟ್ರೀಯ ರೈಫಲ್ಸ್‌ನ ಕ್ಯಾಪ್ಟನ್ ಎಂ.ವಿ.ಪ್ರಾಂಜಲ್ ಸೇರಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈತ ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (MRPL) ನ ಮಾಜಿ ನಿರ್ದೇಶಕ ಎಂ.ವೆಂಕಟೇಶ್ ಎಂಬವರ ಪುತ್ರ ಎಮದು ತಿಳಿದುಬಂದಿದೆ. ಪ್ರಾಂಜಲ್, ದೆಹಲಿ ಪಬ್ಲಿಕ್ ಸ್ಕೂಲ್, MRPL ನ ಹಳೆಯ ವಿದ್ಯಾರ್ಥಿಯಾಗಿದ್ದರು ಎಂದು ವರದಿ ತಿಳಿಸಿದೆ.
ಶೋಧನಾ ತಂಡದ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದು, ಇಬ್ಬರು ಕ್ಯಾಪ್ಟನ್‌ಗಳು ಸೇರಿದಂತೆ ನಾಲ್ವರು ಸೇನಾ ಸಿಬ್ಬಂದಿಗೆ ಗಂಭೀರ ಗಾಯಗಳಾಗಿತ್ತು. ಆಸ್ಪತ್ರೆ ದಾಖಲಿಸಲಾಯಿತಾದರೂ ಕೊನೆಯುಸಿರೆಳೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.

Related posts

ಮೋದಿ ಪ್ರಧಾನಿಯಾಗ್ಬೇಕೆಂದು ಕಾಳಿಗೆ ಬೆರಳನ್ನೇ ಅರ್ಪಿಸಿದ ಅಭಿಮಾನಿ..! ಈ ಘಟನೆ ನಡೆದದ್ದೆಲ್ಲಿ..?

5 ತಿಂಗಳ ಹಸುಗೂಸಿನ ದುರಂತ ಅಂತ್ಯ..! ಕರುಳ ಕುಡಿಗೆ ವಿಷವುಣಿಸಿದಳೇ ತಾಯಿ? ಏನಿದು ಅಮಾನವಿಯ ಘಟನೆ?

ದೇವಸ್ಥಾನದಲ್ಲಿ ನಮಾಜ್ ಮಾಡಿದ ತಾಯಿ, ಮಗಳನ್ನು ಬಂಧಿಸಿದ್ದೇಕೆ ಪೊಲೀಸರು? ಮಹಿಳೆ ಮತ್ತು ಮಗಳಿಗೆ ಧರ್ಮಗುರು ಹೇಳಿದ್ದ ರಹಸ್ಯವೇನು? ಇಲ್ಲಿದೆ ವೈರಲ್ ವಿಡಿಯೋ