ಕರಾವಳಿವೈರಲ್ ನ್ಯೂಸ್ಸುಳ್ಯ

ಮಂಗಳೂರು: ಕುಡಿಯುವ ನೀರಿಗಾಗಿ ಸಹಾಯವಾಣಿ..! ಇಲ್ಲಿದೆ ಸಂಪೂರ್ಣ ಮಾಹಿತಿ

260

ನ್ಯೂಸ್ ನಾಟೌಟ್: ಮಂಗಳೂರಿನ ಗ್ರಾಮೀಣ ಪ್ರದೇಶಗಳಲ್ಲಿ ಪ್ರಸಕ್ತ ಸಾಲಿನ ಬೇಸಿಗೆಯಲ್ಲಿ ಸಂಭವಿಸಬಹುದಾದ ಕುಡಿಯುವ ನೀರಿನ ಸಮಸ್ಯೆ, ಬರಪರಿಸ್ಥಿತಿಯನ್ನು ಸಮರ್ಪಕವಾಗಿ ನಿರ್ವಹಿಸಲು ಜಿಲ್ಲೆಯ ಗ್ರಾಮೀಣ ಪ್ರದೇಶಗಳಿಗೆ ಅನ್ವಯವಾಗುವಂತೆ ಸಹಾಯವಾಣಿ ತೆರೆಯಲಾಗಿದೆ.

ಸಾರ್ವಜನಿಕರು ದೂ.ಸಂ: 0824-2951583 ಅಥವಾ ಮೊ.ಸಂ:7204653395ನ್ನು ಸಂಪರ್ಕಿಸಬಹುದು ದ.ಕ.ಜಿಪಂ ಸಿಇಒ ಪ್ರಕಟನೆಯಲ್ಲಿ ತಿಳಿಸಿದ್ದಾರೆ. ಈ ಬಾರಿಯ ಬೇಸಿಗೆ ಎಲ್ಲರನ್ನೂ ಸುಡುತ್ತಿದೆ. ಮಳೆಯಿಲ್ಲದೇ ಜನ ಕಂಗಾಲಾಗಿದ್ದಾರೆ. ಅಲ್ಲದೇ ಹಲವೆಡೆ ಕುಡಿಯುವ ನೀರಿಗೆ ಹಾಹಾಕಾರ ಶುರುವಾಗಿದೆ.

ಅಲ್ಲದೇ ಬೆಂಗಳೂರಲ್ಲೂ (Bengaluru) ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು, ಟ್ಯಾಂಕರ್ ನೀರನ್ನೇ ಜನರು ಅವಲಭಿಸಿದ್ದಾರೆ. ಇದೀಗ ಮನೆಯಲ್ಲಿ ಬಾಡಿಗೆ ಇರೋರಿಗೆ ಹೆಚ್ಚು ಬಾಡಿಗೆ ನೀಡುವಂತೆ ಮನೆ ಮಾಲಿಕರು ಕೇಳುತ್ತಿದ್ದಾರೆ ಎನ್ನಲಾಗಿದೆ. ಇಂತಹ ಪರಿಸ್ಥಿತಿ ಮಂಗಳೂರಿನಲ್ಲಿ ಸೃಷ್ಟಿಯಾಗದಂತೆ ಜಿಲ್ಲಾಡಳಿತ ಮುಂಜಾಗೃತೆ ವಹಿಸುತ್ತಿದೆ.

See also  ಎನ್ ಎಂಸಿಯ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ, ಪೇರಡ್ಕ ಎಂ.ಜೆ.ಎಂ ಹಾಗೂ ಎಸ್.ಕೆ.ಎಸ್.ಎಸ್.ಎಫ್ ನಿಂದ ಗೌರವ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget