ಕರಾವಳಿಕ್ರೈಂವೈರಲ್ ನ್ಯೂಸ್

ಮಂಗಳೂರಿನಲ್ಲಿ ವಿದ್ಯಾರ್ಥಿನಿ ನಾಪತ್ತೆ ಪ್ರಕರಣಕ್ಕೆ ಟ್ವಿಸ್ಟ್..! ಅನ್ಯಕೋಮಿನ ಯುವಕನಿಂದ ಡ್ರಗ್ಸ್ ನಂಟು..?

240

ನ್ಯೂಸ್ ನಾಟೌಟ್: ಮಂಗಳೂರಿನ ವಿದ್ಯಾರ್ಥಿನಿ ನಾಪತ್ತೆಯಾದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು, ಪುತ್ತೂರಿನ ಪುರುಷರ ಕಟ್ಟೆಯ ವಿದ್ಯಾರ್ಥಿನಿ ಕಳೆದ ಒಂದು ವಾರದಿಂದ ನಾಪತ್ತೆಯಾಗಿದ್ದು, ಪ್ರಕರಣದ ಹಿಂದೆ ಡ್ರಗ್ಸ್ ಮಾಫಿಯಾದ ಕೈವಾಡ ಇರುವ ಶಂಕೆ ವ್ಯಕ್ತವಾಗಿದೆ ಎಂದು ಹೇಳಲಾಗಿದೆ.

ಆಕೆಯ ಪತ್ತೆಗೆ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ. ವಿದ್ಯಾರ್ಥಿನಿಯ ತಂದೆ ಸಾವನ್ನಪ್ಪಿದ್ದು, ಮಂಗಳೂರಿನ ಕದ್ರಿಯಲ್ಲಿರುವ ಆಕೆಯ ದೊಡ್ಡಪ್ಪ ಶಿಕ್ಷಣದ ಜವಾಬ್ದಾರಿ ಹೊತ್ತಿದ್ದರು. ಮಾಡೂರು ಎಂಬಲ್ಲಿನ ಪಿಜಿಯಲ್ಲಿ ತಂಗಲು ಯುವತಿಗೆ ವ್ಯವಸ್ಥೆ ಮಾಡಿದ್ದರು. ಪಿಜಿಗೆ ಅನ್ಯಕೋಮಿನ ಯುವಕನೋರ್ವ ಬರುತ್ತಿದ್ದು ಆತ ಡ್ರಗ್ಸ್ ಚಟ ಹತ್ತಿಸಿದ್ದ ಎಂಬ ಆರೋಪ ಕೇಳಿ ಬಂದಿದೆ.

ಈ ಬಗ್ಗೆ ಬಜರಂಗದಳ ಕಾರ್ಯಕರ್ತರು ಯುವತಿಯ ದೊಡ್ಡಪ್ಪನಿಗೆ ಮಾಹಿತಿ ನೀಡಿದ್ದರು ಎನ್ನಲಾಗಿದೆ. ಇದಾಗ ಬಳಿಕ ಆಕೆ ತನ್ನ ಸ್ಕೂಟರ್‌ನೊಂದಿಗೆ ನಾಪತ್ತೆಯಾಗಿದ್ದು, ಆಕೆಯ ಮೊಬೈಲ್ ಸ್ವಿಚ್ ಆಫ್ ಆಗಿದೆ. ಆಕೆಯ ಖಾತೆಯಿಂದ ಸುರತ್ಕಲ್‍ನ ಎಟಿಎಂ ಒಂದರಲ್ಲಿ ಹಣ ವಿಥ್ ಡ್ರಾ ಮಾಡಿದ್ದಾಳೆ. ಯುವತಿಯ ಅಕೌಂಟ್‍ನಲ್ಲಿ ಲಕ್ಷಾಂತರ ರೂ. ಹಣ ಇದ್ದು, ಇದೀಗ ಪೊಲೀಸರು ಅಕೌಂಟ್ ಬ್ಲಾಕ್ ಮಾಡಿದ್ದಾರೆ. ಇದೀಗ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಅನ್ಯಕೋಮಿನ ಯುವಕನೊಬ್ಬನ ಜೊತೆ ಬೆಂಗಳೂರಿಗೆ ಯುವತಿ ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದೆ. ಈ ಸಂಬಂಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ವರದಿ ತಿಳಿಸಿದೆ.

See also  ಪುತ್ತೂರು: ಗೃಹಿಣಿಯೊಬ್ಬರ ಮೃತದೇಹ ನೀರಿನ ತೊಟ್ಟಿಯೊಳಗೆ ಪತ್ತೆ, ಅಷ್ಟಕ್ಕೂ ನಡೆದಿದ್ದೇನು..?
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget