ಕರಾವಳಿಕ್ರೈಂವೈರಲ್ ನ್ಯೂಸ್

ಮಂಗಳೂರು: ಸಮುದ್ರದಲ್ಲಿ ಮೀನು ಹಿಡಿಯಲು ಹೋದ ವಿದ್ಯಾರ್ಥಿ ದುರ್ಮರಣ..! ಗಾಳಿ ರಭಸಕ್ಕೆ 15 ರ ಯುವಕ ಬಲಿ

ನ್ಯೂಸ್ ನಾಟೌಟ್: ಕಡಲ ತೀರದಲ್ಲಿ ಮೀನು ಹಿಡಿಯಲೆಂದು ಹೋಗಿದ್ದ ವಿದ್ಯಾರ್ಥಿ ಗಾಳಿ ಹಾಗೂ ನೀರಿನ ರಭಸಕ್ಕೆ ಸಿಲುಕಿ ಮಂಗಳೂರಿನ ತೋಟಬೇಂಗ್ರೆ ಎಂಬಲ್ಲಿ ಕೊಚ್ಚಿಹೋದ ಘಟನೆ ಮಾ.22 ರಂದು ನಡೆದಿದೆ.

ಯುವಕನನ್ನು ಪ್ರಜೀತ್ ಎಂ ತಿಂಗಳಾಯ(15) ಎಂದು ಗುರುತಿಸಲಾಗಿದೆ. ಪ್ರಜೀತ್ ಬೆಂಗ್ರೆಯ ನಿವಾಸಿ ಮಿಥುನ್ ಎಂಬುವವರ ಪುತ್ರನಾಗಿದ್ದು, ಮನೆಯ ಬಡತನ ಹಾಗೂ ವಿದ್ಯಾಭ್ಯಾಸದ ಖರ್ಚಿಗೆಂದು ತಂದೆ ಜತೆಗೆ ಪ್ರಜೀತ್‌ ಮೀನುಗಾರಿಕೆಗೆ ಹೋಗುತ್ತಿದ್ದ. ಗುರುವಾರ ಸಂಜೆ ಮೀನುಗಾರಿಕೆಗೆ ತೆರಳಿದ್ದ ವೇಳೆ ಗಾಳಿ ಮತ್ತು ನೀರಿನ ರಭಸಕ್ಕೆ ಸಿಲುಕಿ ನೀರುಪಾಲಾಗಿದ್ದಾನೆ ಎನ್ನಲಾಗಿದೆ.

ಸ್ಥಳೀಯರು ಪ್ರಜೀತ್‌ಗಾಗಿ ಹುಡುಕಾಟ ನಡೆಸಿದ್ದಾರೆ. ಗಂಭೀರ ಸ್ಥಿತಿಯಲ್ಲಿ ಪತ್ತೆಯಾದ ಪ್ರಜೀತ್‌ನನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲು ಮುಂದಾಗಿದ್ದಾರೆ. ಆದರೆ ದಾರಿ ಮಧ್ಯೆ ಮೃತಪಟ್ಟಿದ್ದಾನೆ ಎಂದು ವರದಿ ತಿಳಿಸಿದೆ. ಪಣಂಬೂರು ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ನಡೆಸಲಾಗುತ್ತಿದೆ.

Related posts

ರೈಲಿನ ಬೋಗಿಯಡಿ ಮಲಗಿ 290 ಕಿ.ಮೀ. ಪ್ರಯಾಣಿಸಿದ ವ್ಯಕ್ತಿ ಅರೆಸ್ಟ್..! ರೈಲಿನ ಬೋಗಿಗಳ ತಪಾಸಣೆ ವೇಳೆ ಪತ್ತೆ..!

ಜೋ ಬೈಡನ್ ಬೆಂಗಾವಲು ಕಾರು ಚಾಲಕನನ್ನು ಬಂಧಿಸಿದ್ದೇಕೆ? ಅರೆಸ್ಟ್ ಆದ ಕಾರು ಚಾಲಕ ಹೇಳಿದ್ದೇನು? ಮುಂದೇನಾಯ್ತು?

ಕೊಳೆಗೇರಿಗಳಿಗೆ ಬಿಲ್ ಗೇಟ್ಸ್ ಭೇಟಿ ನೀಡಿದ್ದೇಕೆ..? ಸರ್ಕಾರಿ ಅಧಿಕಾರಿಯನ್ನು ಕರೆದೊಯ್ದ ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ..!