ಕರಾವಳಿಕ್ರೈಂವೈರಲ್ ನ್ಯೂಸ್

ಮಂಗಳೂರು: ಅಪ್ರಾಪ್ತ ದಲಿತ ಯುವತಿಗೆ ಲೈಂಗಿಕ ಕಿರುಕುಳ..! ರಿಕ್ಷಾ ಚಾಲಕ ರಝೀನ್ ಬಾಡಿಗೆ ಮನೆಗೆ ಕರೆದೊಯ್ದಿದ್ದ ಎಂದ ಯುವತಿ!

ನ್ಯೂಸ್ ನಾಟೌಟ್: ದಲಿತ ಯುವತಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪದಲ್ಲಿ ಯುವಕನೋರ್ವನ ವಿರುದ್ಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಸೋಮವಾರ(ಜ.1) ಪೊಕ್ಸೊ ಪ್ರಕರಣ ದಾಖಲಾಗಿದೆ.

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಅಣಜೂರು ನಿವಾಸಿ, ರಿಕ್ಷಾ ಚಾಲಕ ರಝೀನ್ ಲೈಂಗಿಕ ಕಿರುಕುಳ ನೀಡಿರುವ ಆರೋಪಿ ಎನ್ನಲಾಗಿದೆ. ಈತ ವಿವಾಹವಾಗುವುದಾಗಿ ನಂಬಿಸಿ ಅಪ್ರಾಪ್ತ ವಯಸ್ಸಿನ ಯುವತಿಗೆ ಮೋಸ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.

ಉಳ್ಳಾಲ ಠಾಣಾ ವ್ಯಾಪ್ತಿಯ ಕುಂಪಲದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿರುವ ಆರೋಪಿ ಹಾಗೂ ಮೂಡಿಗೆರೆ ತಾಲೂಕಿನ ಅಣಜೂರು ಜನ್ನಪುರದ 17 ವರ್ಷದ ಯುವತಿಯೊಬ್ಬಳು ಕಳೆದ ನಾಲ್ಕು ತಿಂಗಳುಗಳಿಂದ ಪ್ರೀತಿಸುತ್ತಿದ್ದರು ಎನ್ನಲಾಗಿದೆ.

ಇದೇ ಸಲುಗೆಯಿಂದ ನಾಲ್ಕು ತಿಂಗಳ ಹಿಂದೆ ಯುವತಿಯನ್ನು ಮಂಗಳೂರಿಗೆ ಕರೆಸಿಕೊಂಡಿದ್ದ ಆರೋಪಿ, ಆಕೆಯನ್ನು ಕುಂಪಲದ ತನ್ನ ಬಾಡಿಗೆ ಮನೆಗೆ ಕರೆದೊಯ್ದಿದ್ದಾನೆ. ಅಲ್ಲಿ ವಿವಾಹವಾಗುವುದಾಗಿ ನಂಬಿಸಿ ಲೈಂಗಿಕ ಕಿರುಕುಳ ನೀಡಿರುವುದಾಗಿ ಪೊಲೀಸ್ ದೂರಿನಲ್ಲಿ ಆರೋಪಿಸಲಾಗಿದೆ.
ಸಂತ್ರಸ್ತೆ ಯುವತಿ ನೀಡಿದ ದೂರಿನಂತೆ ಆರೋಪಿ ರಝೀನ್ ವಿರುದ್ಧ ಉಳ್ಳಾಲ ಠಾಣೆಯಲ್ಲಿ ಪೊಕ್ಸೊ ಪ್ರಕರಣ ದಾಖಲಾಗಿದೆ ಎಂದು ವರದಿ ತಿಳಿಸಿದೆ.

https://newsnotout.com/2024/01/rashi-bhavishya-new-year-2024/

Related posts

ಮಂಗಳೂರಿನಲ್ಲಿ ಎರಡು ವರ್ಷದ ಹಸುಗೂಸಿನ ಮೇಲೆ ಲೈಂಗಿಕ ದೌರ್ಜನ್ಯ..!

ಸಿಎಂ ಬಡವರ ಖಾತೆಗೆ 5 ಸಾವಿರ ರೂ. ಹಾಕುತ್ತಾರೆ ಎಂದು ವಾಟ್ಸಪ್‌ ನಲ್ಲಿ ಸಂದೇಶ ಹರಿಬಿಟ್ಟ ಕಿಡಿಗೇಡಿಗಳು..! ವದಂತಿ ನಂಬಿ ಪೋಸ್ಟ್ ಆಫೀಸ್ ಮುಂದೆ ಕ್ಯೂ ನಿಂತ ನೂರಾರು ಜನ..!

ವಿಶ್ವ ಸ್ತನ್ಯಪಾನ ಸಪ್ತಾಹ-2024: ತಾಯಿ ಎದೆಹಾಲು ಶಿಶುಮರಣವನ್ನೂ ತಡೆಯಬಲ್ಲದು..! ಸ್ತನ್ಯಪಾನದ ಪ್ರಯೋಜನಗಳ ಬಗ್ಗೆ ವೈದ್ಯರು ಹೇಳಿದ್ದೇನು..?