ಕರಾವಳಿಕ್ರೈಂವೈರಲ್ ನ್ಯೂಸ್

ಮಂಗಳೂರು: 90 ಲಕ್ಷ ಮೌಲ್ಯದ ಅಂಬರ್ ಗ್ರೀಸ್ ವಶಕ್ಕೆ, ಮೂವರು ಅರೆಸ್ಟ್! ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ ಇರುವ ಏನಿದು ಸಮುದ್ರ ನಿಧಿ?

236

ನ್ಯೂಸ್ ನಾಟೌಟ್ :  ಅಂತರಾಷ್ಟ್ರೀಯ ಮಾರುಕಟ್ಟೆ ಭಾರೀ ಬೇಡಿಕೆ ಇರುವ ಅಂಬರ್ ಗ್ರೀಸ್(ತಿಮಿಂಗಿಲ ವಾಂತಿ)ಯನ್ನು ಮಂಗಳೂರು ಪಣಂಬೂರು ಬೀಚ್ ಪರಿಸರದಲ್ಲಿ ಮಾರಾಟಕ್ಕೆ ಯತ್ನಿಸಿದ ಮೂವರನ್ನು ಸಿಸಿಬಿ ಪೊಲೀಸರು ಅರೆಸ್ಟ್ ಮಾಡಿದ ಘಟನೆ ನಿನ್ನೆ(ಸೋಮವಾರ) ನಡೆದಿದೆ.

ಅಂಬರ್‌ಗ್ರಿಸ್ ಎಂಬುದು ತಿಮಿಂಗಿಲ ವಾಂತಿ ಎಂದು ಕರೆಯಲಾಗಿದ್ದರೂ, “ಬಹಳ ವರ್ಷ ಜೀವಿಸಿದ ತಿಮಿಂಗಿಲದಿಂದ ಇದು ಮಲವಾಗಿ ಹೊರಹೋಗುತ್ತದೆ ಮತ್ತು ರೂಪುಗೊಳ್ಳಲು ವರ್ಷಗಳನ್ನು ತೆಗೆದುಕೊಳ್ಳುತ್ತದೆ” ಎಂದು ಹೇಳುತ್ತಾರೆ.

ಈ ವಸ್ತುವನ್ನು ತಿಮಿಂಗಿಲದ ಕರುಳಿನಲ್ಲಿ ಪಿತ್ತರಸ ಸ್ರವಿಸುವ ಪಿತ್ತರಸ ನಾಳದಿಂದ ಸೃಷ್ಟಿಯಾಗುತ್ತದೆ, ಮತ್ತು ಇದು ಆಗಾಗ್ಗೆ ನೀರಿನ ಮೇಲೆ ತೇಲುತ್ತಿರುವ ಅಥವಾ ಕರಾವಳಿಯಲ್ಲಿ ತೊಳೆಯುವುದು ಕಂಡುಬರುತ್ತದೆ. ಸತ್ತ ವೀರ್ಯ ತಿಮಿಂಗಿಲಗಳ ಹೊಟ್ಟೆಯಲ್ಲಿ ಅಂಬರ್ಗ್ರಿಸ್ ಅನ್ನು ಕಾಣಬಹುದು. ಇದು ವಜ್ರದಂತೆ ಅತ್ಯಂತ ಬೆಲೆಬಾಳುವ ಸಮುದ್ರ ನಿಧಿ ಎನ್ನಬಹುದು.

ಉಡುಪಿಯ ಸಾಲಿಗ್ರಾಮ ನಿವಾಸಿ ಜಯಕರ(29),ಶಿವಮೊಗ್ಗದ ಸಾಗರ ನಿವಾಸಿ ಆದಿತ್ಯ(25) ಹಾವೇರಿಯ ಶಿಗ್ಗಾಂ ಮೂಲದ ಲೋಹಿತ್ (39) ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದೆ.

900 ಗ್ರಾಂ ತೂಕದ 90 ಲಕ್ಷ ಬೆಲೆಬಾಳುವ ಅಂಬರ್ ಗ್ರೀಸನ್ನು ಈ ಮೂವರ ಬಳಿಯಿಂದ ವಶಪಡಿಸಿಕೊಳ್ಳಲಾಗಿದೆ. ಈ ದಾಳಿಯು ಮಂಗಳೂರು ನಗರದ ಪೊಲೀಸ್ ಆಯುಕ್ತರಾದ ಅನುಪಮ್ ಅಗರ್ವಾಲ್ ರವರ ಮಾರ್ಗದರ್ಶನದಲ್ಲಿ ಸಿ.ಸಿ.ಬಿ ಘಟಕದ ಅಧಿಕಾರಿ ಹಾಗೂ ಸಿಬ್ಬಂದಿಯವರು ನಡೆಸಿರುತ್ತಾರೆ.

ಮಂಗಳೂರು ನಗರದ ಪಣಂಬೂರು ಬೀಚ್ ಪರಿಸರದಲ್ಲಿ ಕೋಟ್ಯಾಂತರ ಬೆಲೆಬಾಳುವ ಅಪರೂಪದ ವನ್ಯ ಜೀವಿ ಉತ್ಪನ್ನವಾದ ಅಂಬರ್ ಗ್ರೀಸ್(ತಿಮಿಂಗಲ ವಾಂತಿ)ನ್ನು ಮಾರಾಟ ಮಾಡಲು ಯತ್ನಿಸುತ್ತಿರುವ ಮೂವರು ವ್ಯಕ್ತಿಗಳನ್ನು ಸಿ.ಸಿ.ಬಿ ಪೊಲೀಸರು ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿ ನಡೆಸಿ ಆರೋಪಿಗಳನ್ನು ಸೆರೆ ಹಿಡಿದಿದ್ದಾರೆ ಎಂದು ವರದಿ ತಿಳಿಸಿದೆ.

See also  ಅತ್ತೆಯನ್ನು ಸಾಯಿಸಲು ಮಾತ್ರೆ ಕೊಡಿ ಎಂದು ವೈದ್ಯರಿಗೆ ಸಂದೇಶ ಕಳುಹಿಸಿದ ಸೊಸೆ..! ವಾಟ್ಸಾಪ್ ಸಂದೇಶದ ಸ್ರ್ಕೀನ್ ಶಾಟ್ ಸಹಿತ ಪೊಲೀಸ್ ಠಾಣೆಗೆ ದೂರು ನೀಡಿದ ವೈದ್ಯ..!
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget