ಕರಾವಳಿಕ್ರೈಂದಕ್ಷಿಣ ಕನ್ನಡಮಂಗಳೂರುವೈರಲ್ ನ್ಯೂಸ್

ಮಂಗಳೂರು: ಪಾರ್ಕಿಂಗ್ ಸ್ಥಳಗಳಲ್ಲಿಂದಲೇ ವಾಹನಗಳ ಕಳವು..! 25 ದಿನಗಳೊಳಗೆ 7 ಪ್ರಕರಣ ದಾಖಲು..!

ನ್ಯೂಸ್ ನಾಟೌಟ್: ಮಂಗಳೂರಿನ ಹಲವೆಡೆ ಪಾರ್ಕಿಂಗ್ ಏರಿಯಾಗಳಲ್ಲಿ ಪಾರ್ಕ್ ಮಾಡಲಾದ ವಾಹನ ಕಳವು ಪ್ರಕರಣಗಳ ಹೆಚ್ಚಾಗಿದ್ದು, ಪೊಲೀಸರಿಗೆ ಸಾಲು ಸಾಲು ದೂರುಗಳು ಬರುತ್ತಿವೆ. ವಿವಿಧೆಡೆ ಪಾರ್ಕ್ ಮಾಡಲಾಗಿದ್ದ 7 ದ್ವಿಚಕ್ರ ವಾಹನಗಳು 25 ದಿನಗಳ ಒಳಗೆ ಕಳವಾಗಿರುವುದು ವರದಿಯಾಗಿದೆ. ಕೆಲವರು ದೂರು ಕೊಡಲು ಹಿಂದೇಟು ಹಾಕುವ ಕಾರಣದಿಂದ ಹಲವು ಕಳವು ಪ್ರಕರಣಗಳು ಬೆಳಕಿಗೆ ಬಂದಿಲ್ಲ ಎನ್ನಲಾಗಿದೆ.

ದ್ವಿಚಕ್ರ ಸವಾರರ ನಿರ್ಲಕ್ಷ್ಯವೂ ಕಳವು ಆರೋಪಿಗಳಿಗೆ ವರದಾನವಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ. ಅಂದರೆ ಕೀಯನ್ನು ವಾಹನದಲ್ಲಿಯೇ ಬಿಟ್ಟು ಹೋಗುವುದು, ಸಾರ್ವಜನಿಕ ಸ್ಥಳಗಳಲ್ಲಿ ರಾತ್ರಿ ವೇಳೆ ದ್ವಿಚಕ್ರ ವಾಹನ ಪಾರ್ಕ್ ಮಾಡಿ ಮರುದಿನ ಅಥವಾ ಕೆಲವು ದಿನ ಬಿಟ್ಟು ಬಂದು ನೋಡುವುದು, ಹ್ಯಾಂಡ್‌ ಲಾಕ್ ಹಾಕದಿರುವುದು ಇದಕ್ಕೆ ಕಾರಣ ಎನ್ನಲಾಗಿದೆ. ಈ ಬಗ್ಗೆ ಸಾರ್ವಜನಿಕರು ಎಚ್ಚರ ವಹಿಸುವಂತೆ ಪೊಲೀಸರು ಸೂಚನೆ ನೀಡಿದ್ದಾರೆ.

Click 👇

https://newsnotout.com/2024/06/congress-meeting-and-govt-forming-issue
https://newsnotout.com/2024/06/narendra-modi-and-oath-taking-date-fix
https://newsnotout.com/2024/06/meloni-modi-wish-by-meloni-itali-to-narendra-modi

Related posts

ಮಾರ್ಚ್ 11, 12ರಂದು ದೊಡ್ಡಡ್ಕ ಶ್ರೀ ಆದಿ ಬ್ರಹ್ಮ ಮೊಗೇರ್ಕಳ ಮತ್ತು ಸ್ವಾಮಿಕೊರಗಜ್ಜನ 42 ನೇ ವರ್ಷದ ನೇಮೋತ್ಸವ

ಕ್ಯಾನ್ಸರ್ ರೋಗಿಗಳಿಗೆ ೨ ವರ್ಷದ ಮಗುವಿನಿಂದ ಕೂದಲು ದಾನ

ರಾಹುಲ್‌ ದ್ರಾವಿಡ್‌ ಕಾರಿಗೆ ಗುದ್ದಿದ ಗೂಡ್ಸ್‌ ಆಟೋ..! ದೂರು ನೀಡದ ಟೀಂ ಇಂಡಿಯಾದ ಮಾಜಿ ಕೋಚ್‌..!