Latestಕರಾವಳಿಕ್ರೈಂಮಂಗಳೂರುವೈರಲ್ ನ್ಯೂಸ್

ಮಂಗಳೂರು: ತಡರಾತ್ರಿ ಅರೆ ಪ್ರಜ್ಞಾವಸ್ಥೆಯಲ್ಲಿ ಯುವತಿ ಪತ್ತೆ..! ಮೈ ಮೇಲೆಲ್ಲ ಗಾಯದ ಗುರುತು, ಅತ್ಯಾಚಾರದ ಶಂಕೆ..!

862

ನ್ಯೂಸ್ ನಾಟೌಟ್: ಹೊರರಾಜ್ಯದ ಯುವತಿಯೊಬ್ಬಳು ಅರೆ ಪ್ರಜ್ಞಾವಸ್ಥೆಯಲ್ಲಿ ಪತ್ತೆಯಾಗಿದ್ದು, ಇದೊಂದು ಸಾಮೂಹಿಕ ಅತ್ಯಾಚಾರ ಅಗಿರಬಹುದೆಂದು ಸಾರ್ವಜನಿಕರು ಅನುಮಾನ ವ್ಯಕ್ತಪಡಿಸಿದ್ದಾರೆ.

ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಸಂತ್ರಸ್ತ ಯುವತಿಯನ್ನು ದೇರಳಕಟ್ಟೆಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಲಾಗುತ್ತಿದೆ.

ನಿನ್ನೆ(ಮಾ.16) ತಡರಾತ್ರಿ ಸ್ಥಳೀಯರ ಮನೆಬಾಗಿಲಿಗೆ ಬಂದು ಯುವತಿ ನೀರು ಕೇಳಿ ಅಲ್ಲೇ ಪ್ರಜ್ಷೆ ತಪ್ಪಿ ಬಿದ್ದಿದ್ದಾಳೆ ಎನ್ನಲಾಗಿದೆ. ತಕ್ಷಣ ಮನೆಯವರು 112ಕ್ಕೆ ಕರೆ ಮಾಡಿ ಮಾಹಿತಿ ನೀಡಿದ್ದು, ಪೊಲೀಸರು ಯುವತಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಯುವತಿ ನಶೆಯಲ್ಲಿದ್ದು, ಆಕೆಯ ಮೈ ಮೇಲೆ ಗಾಯದ ಗುರುತುಗಳು ಕಾಣಿಸಿದ್ದು, ಇದೊಂದು ಅತ್ಯಾಚಾರ ಆಗಿರುವ ಅನುಮಾನ ವ್ಯಕ್ತವಾಗಿದೆ. ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ನಿರ್ಜನ ಪ್ರದೇಶವೊಂದರಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ.

ಈ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದು, ಚಿಕಿತ್ಸೆ ಪಡೆಯುತ್ತಿರುವ ಯುವತಿಯನ್ನು ವಿಚಾರಣೆ ನಡೆಸಬೇಕಾಗಿದೆ. ಆದರೆ, ಅರೆಪ್ರಜ್ಞಾವಸ್ಥೆ ಸ್ಥಿತಿಯಲ್ಲಿರುವಾಕೆ ಈವರೆಗೆ ಪೊಲೀಸರಿಗೆ ಯಾವುದೇ ಮಾಹಿತಿ ನೀಡಿಲ್ಲ. ಸ್ಥಳಕ್ಕೆ ಪೊಲೀಸ್ ಕಮೀಷನರ್ ಅನುಪಮ್ ಅಗರವಾಲ್ ಭೇಟಿ ನೀಡಿದ್ದಾರೆ.

10 ಬಾರಿ ಹಾವು ಕಚ್ಚಿ ಸತ್ತ ವ್ಯಕ್ತಿಯ ಪ್ರಕರಣಕ್ಕೆ ವಿಚಿತ್ರ ತಿರುವು..! ಕೊಲೆ ಎಂದ ವೈದ್ಯಕೀಯ ವರದಿ..!

See also  'ಆನಂದ ಗುರೂಜಿ'ಗೆ ಜೀವ ಬೆದರಿಕೆ ಹಾಕಿದ್ದ ದಿವ್ಯಾ ವಸಂತ ವಿರುದ್ಧ ದೂರು ದಾಖಲು..! ಈ ಹಿಂದೆಯೂ ಹನಿಟ್ರ್ಯಾಪ್ ಪ್ರಕರಣದಲ್ಲಿ ಅರೆಸ್ಟ್ ಆಗಿದ್ದ ದಿವ್ಯ ವಸಂತ ಗ್ಯಾಂಗ್..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget