ಕರಾವಳಿಕ್ರೈಂಮಂಗಳೂರು

ಮಂಗಳೂರು: 3 ಯುವತಿಯರ ಮೃತದೇಹ ಪೋಷಕರಿಗೆ ಹಸ್ತಾಂತರ, ರೆಸಾರ್ಟ್ ಮಾಲಕ ಮತ್ತು ಮ್ಯಾನೇಜರ್ ಅರೆಸ್ಟ್..!

254

ನ್ಯೂಸ್‌ ನಾಟೌಟ್‌: ಉಳ್ಳಾಲದ ಉಚ್ಚಿಲ ವಾಝ್ಕೋ ಬೀಚ್ ರೆಸಾರ್ಟ್ ನ ಈಜುಕೊಳದಲ್ಲಿ ಮುಳುಗಿ ಮೂವರು ಯುವತಿಯರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ರೆಸಾರ್ಟ್ ಮಾಲೀಕ ಮನೋಹರ್ ಹಾಗೂ ಮ್ಯಾನೇಜರ್ ಭರತ್ ಎಂದು ಗುರುತಿಸಲಾಗಿದೆ. ಅವರ ನಿರ್ಲಕ್ಷ್ಯ ಧೋರಣೆಯಿಂದ ಈ ಅನಾಹುತ ಸಂಭವಿಸಿದ್ದು, ಅವರನ್ನು ಇಂದು(ನ.18) ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಈಜು ಕೊಳದಲ್ಲಿ ಮೃತಪಟ್ಟ ಕೀರ್ತನ, ನಿಶಿತಾ ಹಾಗೂ ಪಾರ್ವತಿ ಎಂಬ ಮೂವರು ಯುವತಿಯರ ಪೋಷಕರು ರವಿವಾರ ತಡರಾತ್ರಿ ಆಗಮಿಸಿದ್ದು, ಮೂವರ ಮೃತದೇಹ ವನ್ನು ಪೋಷಕರಿಗೆ ಹಸ್ತಾಂತರಿಸಲಾಗಿದೆ.
ಈ ಘಟನೆಗೆ ಸಂಬಂಧಿಸಿದಂತೆ ಬಂಧಿತ ಇಬ್ಬರನ್ನು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

See also  ಕೊಡಗು ಜಿಲ್ಲೆಗೆ ನೂತನ ಜಿಲ್ಲಾಧಿಕಾರಿಯಾಗಿ ವೆಂಕಟ್‍ ರಾಜಾ ನೇಮಕ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget