Latestಕರಾವಳಿಕಾಸರಗೋಡುಕ್ರೈಂಮಂಗಳೂರು

ಮಂಗಳೂರಿನಿಂದ ತಿರುವನಂತಪುರಕ್ಕೆ ತೆರಳುತ್ತಿದ್ದ ರೈಲಿಗೆ ಕಲ್ಲೆಸೆದ ಆರೋಪಿ ಕಾಸರಗೋಡಿನಲ್ಲಿ ಅರೆಸ್ಟ್..! ರೈಲಿನೊಳಗೂ ಈತನಿಂದ ಯುವತಿಗೆ ಕಿರುಕುಳ..!

666
Pc Cr: Vartha bharati

ನ್ಯೂಸ್‌ ನಾಟೌಟ್: ಕಾಸರಗೋಡು: ರೈಲಿಗೆ ಕಲ್ಲೆಸೆದ ಆರೋಪಿಯನ್ನು ಕೆಲವೇ ಗಂಟೆಗಳ ಅವಧಿಯಲ್ಲಿ ರೈಲ್ವೆ ಪೊಲೀಸರು ಬಂಧಿಸಿದ ಘಟನೆ ಕಾಸರಗೋಡಿನಲ್ಲಿ(ಮಾ.31) ನಡೆದಿದೆ.

ತೆಕ್ಕಿಲ್ ಮೈಲಾಟಿ ಯ ಎಸ್ .ಅನಿಲ್ ಕುಮಾರ್ (41) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಆದಿತ್ಯವಾರ ರಾತ್ರಿ ಬೇಕಲ ರೈಲ್ವೆ ನಿಲ್ದಾಣದಲ್ಲಿ ಘಟನೆ ನಡೆದಿದೆ.

ಮಂಗಳೂರಿನಿಂದ ತಿರುವನಂತಪುರಕ್ಕೆ ತೆರಳುತ್ತಿದ್ದ ಮಲಬಾರ್ ಎಕ್ಸ್ ಪ್ರೆಸ್ ರೈಲಿಗೆ ಈತ ಕಲ್ಲೆಸೆದಿದ್ದಾನೆ. ರೈಲಿನಲ್ಲಿ ಪ್ರಯಾಣಿಸಿದ ಈತ ಇದೇ ರೈಲಿನಲ್ಲಿದ್ದ ಯುವತಿಗೆ ಕಿರುಕುಳ ನೀಡಲೆತ್ನಿಸಿದ್ದು, ಇದನ್ನು ಯುವತಿ ಜೊತೆ ಇದ್ದ ಯುವಕ ಪ್ರಶ್ನಿಸಿದ್ದಾನೆ. ಈ ಸಂದರ್ಭ ದಲ್ಲಿ ಈತ ಹಲ್ಲೆಗೆ ಮುಂದಾಗಿದ್ದಾನೆ. ಆರೋಪಿ ಪಾನಮತ್ತನಾಗಿದ್ದನು ಎನ್ನಲಾಗಿದೆ. ಬೇಕಲ ರೈಲ್ವೆ ನಿಲ್ದಾಣದಲ್ಲಿ ಇಳಿದ ಈತ ಮತ್ತೆ ದಾಂಧಲೆಗೆ ಮುಂದಾಗಿದ್ದು, ರೈಲಿಗೆ ಕಲ್ಲುಗಳನ್ನು ಎಸೆದಿದ್ದಾನೆ.

ಈ ಬಗ್ಗೆ ತನಿಖೆ ನಡೆಸಿದ ರೈಲ್ವೆ ಪೊಲೀಸರು ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿ ಆರೋಪಿಯನ್ನು ಇಂದು ಬಂಧಿಸಿದ್ದಾರೆ.

See also  ಬಿಸಿಸಿಐನಲ್ಲಿ ಹುದ್ದೆಗೆ ಅರ್ಜಿ ಆಹ್ವಾನ..! ಯಾರೆಲ್ಲ ಅರ್ಜಿ ಸಲ್ಲಿಸಬಹುದು..? ಇಲ್ಲಿದೆ ಸಂಪೂರ್ಣ ಮಾಹಿತಿ
  Ad Widget     Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget