ಕರಾವಳಿಕ್ರೈಂ

ಮಂಗಳೂರು: ಹಣ ಕದಿಯೋಕೆ ATMನೊಳಗೆ JCB ನುಗ್ಗಿಸಿದ ಕಳ್ಳರು..!, ಸೈರನ್ ಹೊಡೆಯುತ್ತಿದ್ದಂತೆ JCB ಸಹಿತ ಕಳ್ಳರು ಪರಾರಿ..!


ನ್ಯೂಸ್ ನಾಟೌಟ್: ಕಳ್ಳರು ಮನೆಗೆ ನುಗ್ಗುವುದು, ಬೀಗ ಒಡೆಯುವುದು ನಗನಾಣ್ಯ ದೋಚುವುದನ್ನು ನೋಡಿದ್ದೇವೆ. ಆದರೆ ಇಲ್ಲೊಂದು ಕಳ್ಳರ ತಂಡ ಹಣ ಕದಿಯುವುದಕ್ಕೆ ಜೆಸಿಬಿಯನ್ನೇ ಉಪಯೋಗಿಸಿ ಈಗ ಸುದ್ದಿಯಾಗಿದೆ. ಈ ಘಟನೆ ಮಂಗಳೂರಿನಿಂದ ವರದಿಯಾಗಿದೆ.

ಮಂಗಳೂರಿನ ಸುರತ್ಕಲ್ ಸಮೀಪದ ಎಟಿಎಂಗೆ ಕನ್ನ ಹಾಕುವುದಕ್ಕೆ ಕಳ್ಳರ ತಂಡ ಚಿಂತನೆ ನಡೆಸಿ, ಯಾವ ರೀತಿಯಲ್ಲಿ ಕದ್ದರೆ ಒಳ್ಳೆಯದು ಅನ್ನುವ ತಂತ್ರವನ್ನು ರೂಪಿಸುವುದರಲ್ಲಿ ನಿರತವಾಗಿದೆ. ಬೇರೆ ತಂತ್ರವನ್ನು ಕಾಣದೆ ಕೊನೆಗೆ ಜೆಸಿಬಿ ಮೂಲಕವೇ ಎಟಿಎಂ ಗೆ ನುಗ್ಗಿ ಹಣ ಕೊಳ್ಳೆ ಹೊಡೆಯುವುದಕ್ಕೆ ತಂತ್ರ ರೂಪಿಸಲಾಗಿದೆ.

ಈ ಎಲ್ಲ ಘಟನೆಗೆ ಸುರತ್ಕಲ್ ಸಮೀಪದ ವಿದ್ಯಾದಾಯಿನಿ ಶಾಲೆಯ ಮುಂಭಾಗದ ಜಯ ಶ್ರೀ ವಾಣಿಜ್ಯ ಸಂಕೀರ್ಣದಲ್ಲಿ ನಡೆದಿದೆ.

ವಾಣಿಜ್ಯ ಸಂಕೀರ್ಣದಲ್ಲಿ ಕಾರ್ಯಾಚರಿಸುತ್ತಿರುವ ಸೌತ್ ಇಂಡಿಯನ್ ಬ್ಯಾಂಕ್ ಬ್ರ್ಯಾಂಚ್‌ನ ATM ಮೆಶಿನ್‌ಗೆ ಕಳೆದ ರಾತ್ರಿ ಕಳ್ಳರು ಕನ್ನ ಹಾಕಿದ್ದರು. ಈ ವೇಳೆ ಎಟಿಎಂನ ಗಾಜು ಪುಡಿಯಾಗುತ್ತಿದ್ದಂತೆಯೇ ಎಮರ್ಜೆನ್ಸಿ ಸೈರನ್ ಆಗಿದ್ದು, ಕಳ್ಳರು ಜೆಸಿಬಿ ಸಹಿತ ಪರಾರಿಯಾಗಿದ್ದಾರೆ.

ಸದ್ಯ ಕಳ್ಳರ ಚಲನವಲನ ATMನ CCTVಯಲ್ಲಿ ದಾಖಲಾಗಿದ್ದು, ಪೊಲೀಸರು ತೀವ್ರ ತನಿಖೆ ನಡೆಸುತ್ತಿದ್ದಾರೆ. ಸ್ಥಳಕ್ಕೆ ಡಿಸಿಪಿ ದಿನೇಶ್ ಕುಮಾರ್ ಸಹಿತ ಶ್ವಾನದಳ, ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

ಪ್ರವೀಣ್ ನೆಟ್ಟಾರು ‘ಕನಸಿನ ಮನೆ’ ಗೃಹಪ್ರವೇಶಕ್ಕೆ ಜನಸಾಗರ,’ಪ್ರವೀಣ್ ನಿಲಯ’ ಸನಿಹದಲ್ಲೇ ಕಂಚಿನ ಪುತ್ಥಳಿಯೂ ಲೋಕಾರ್ಪಣೆ

ಜಾಸ್ತಿ ಮೊಬೈಲ್ ನೋಡಬೇಡ ಎಂದು ಬೈದಿದ್ದಕ್ಕೆ ಮನೆ ಬಿಟ್ಟು ಹೋಗಿದ್ದ ಬಾಲಕಿ ಶವವಾಗಿ ಪತ್ತೆ..! ನಿಗೂಢ ಸಾವಿನ ಹಿಂದಿದೆ ಹಲವು ಅನುಮಾನ..!

ವ್ಯಕ್ತಿಯ ಕನ್ನಡಕವನ್ನೇ ಕಿತ್ತುಕೊಂಡು ತಾನೂ ಧರಿಸಿದ ಕೋತಿ ,ಮಹಿಳೆ ಚಷ್ಮಾ ಹಿಂಪಡೆದ ಶೈಲಿಯೇ ರೋಚಕ!:ವಿಡಿಯೋ ವೈರಲ್