ಕ್ರೈಂ

ಮಂಗಳೂರು: ದೇವಸ್ಥಾನದ ಆವರಣದೊಳಗೆ ಚಪ್ಪಲಿ ಧರಿಸಿ ಮೆರೆದಿದ್ದ ಅನ್ಯಮತೀಯ ಪುಂಡರ ಹೆಡೆಮುರಿ ಕಟ್ಟಿದ ಪೊಲೀಸರು

1.1k

ಮಂಗಳೂರು: ದೇವಸ್ಥಾನದ ಆವರಣದಲ್ಲಿ ಚಪ್ಪಲಿ ಧರಿಸಿ ಓಡಾಡಿ ಅಸಭ್ಯ ವರ್ತನೆ ಮೆರೆದ ಪ್ರಕರಣಕ್ಕೆ ಸಂಬಂಧಿಸಿ ಪೂಂಜಾಲಕಟ್ಟೆ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಉಳ್ಳಾಲದ ಬುಶೇರ್ ರೆಹಮಾನ್(20), ಇಸ್ಮಾಯಿಲ್ ಅರ್ಹ ಮಾಜ್ (22), ಮಹಮ್ಮದ್ ತಾನಿಶ್ (19), ಮೊಹಮ್ಮದ್ ರಶಾದ್(19) ಬಂಧಿತರು.

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಶ್ರೀ ಕಾರಿಂಜೇಶ್ವರ ದೇವಸ್ಥಾನದಲ್ಲಿ 4 ಪುಂಡರು ಚಪ್ಪಲಿ ಹಾಕಿಕೊಂಡೆ ದೇವಸ್ಥಾನದ ಆವರಣದಲ್ಲಿ ಓಡಾಡುತ್ತ ಅಸಭ್ಯವಾಗಿ ವರ್ತಿಸಿದ್ದರು. ದೇವಸ್ಥಾನದ ಗರ್ಭಗುಡಿ ಆವರಣ, ಮೆಟ್ಟಿಲಿನ ಬಳಿ ಪುಂಡಾಟ ಮೆರೆದಿದ್ದರು. ದೇವಸ್ಥಾನ ಪ್ರವೇಶಿಸಿ ದೇವಸ್ಥಾನದ ಪಾವಿತ್ರ್ಯತೆಗೆ ಧಕ್ಕೆ ತಂದಿದ್ದರು. ದೇವಸ್ಥಾನಕ್ಕೆ ಅಪಚಾರ ಎಸಗಿ ವಿಡಿಯೋ ಮಾಡಿ ಸಾಮಾಜಿಕ ತಾಣಗಳಲ್ಲಿ ಹರಿಬಿಟ್ಟಿದ್ದರು. ಈ ವಿಡಿಯೋ ತುಂಬಾ ವೈರಲ್ ಆಗಿತ್ತು. ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಪುಂಡರ ವಿರುದ್ದ ಕಾನೂನು ಕ್ರಮಕ್ಕೆ ಪೋಲಿಸ್ ಇಲಾಖೆಗೆ ಸೂಚನೆ ನೀಡಿದ್ದರು. ಸದ್ಯ ಆರೋಪಿಗಳನ್ನು ಅರೆಸ್ಟ್ ಮಾಡಲಾಗಿದೆ.

See also  ಉಪ್ಪಿನಂಗಡಿ: ಮಗಳ ಮದುವೆಗೆ ಚಿನ್ನಾಭರಣ ಖರೀದಿಸಲು ತೆರಳುತ್ತಿದ್ದ ವೇಳೆ 10 ಲಕ್ಷ ರೂ ದರೋಡೆ ಪ್ರಕರಣ, ಆರೋಪಿ ಪೊಲೀಸ್ ಬಲೆಗೆ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget