ಕರಾವಳಿ

ವಿಶೇಷ ಚೇತನ ಮಹಿಳೆ ಮನೆಗೆ ನುಗ್ಗಿ 65 ವರ್ಷದ ವೃದ್ದನಿಂದ ಅತ್ಯಾಚಾರ,ಆರೋಪಿ ಪತ್ತೆಗಾಗಿ ಶೋಧ ಕಾರ್ಯ ಮುಂದುವರಿಸಿದ ಪೊಲೀಸರು

206

ನ್ಯೂಸ್ ನಾಟೌಟ್ : ವಿಶೇಷ ಚೇತನ ಮಹಿಳೆಯೊಬ್ಬರನ್ನು 65 ವರ್ಷದ ಮುದುಕನೋರ್ವ ಅತ್ಯಾಚಾರವೆಸಗಿದ ಘಟನೆ ದ.ಕ ಜಿಲ್ಲೆಯ ಮಂಗಳೂರಿನಿಂದ ವರದಿಯಾಗಿದೆ. ಸಂತ್ರಸ್ತೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ಈ ಕೃತ್ಯ ಎಸಗಿದ ಕಾಮುಕ ಮುದುಕ ನಾಪತ್ತೆಯಾಗಿದ್ದಾನೆ.ಪೊಲೀಸರು ಅತ್ಯಾಚಾರಿ ವೃದ್ಧನಿಗಾಗಿ ತೀವ್ರ ಶೋಧ ಕಾರ್ಯ ನಡೆಸುತ್ತಿದ್ದಾರೆ.

ಸೂರಿಂಜೆ ನಿವಾಸಿ ರಾಜಾ ಭಟ್ ವೃದ್ಧ ಅತ್ಯಾಚಾರಿ ಆರೋಪಿ ಎಂದು ತಿಳಿದು ಬಂದಿದೆ. ಈ ಸಂಬಂಧ ಮಂಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.ಸಂತ್ರಸ್ತೆ ತನ್ನ ಸಹೋದರನ ಕುಟುಂಬದೊಂದಿಗೆ ವಾಸಿಸುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಸಂತ್ರಸ್ತೆಯ ಸಹೋದರ ಮತ್ತು ಆಕೆಯ ಅತ್ತಿಗೆ ಕೆಲಸದ ನಿಮಿತ್ತ ಹೊರಗೆ ಹೋಗಿದ್ದ ವೇಳೆ ಆರೋಪಿ ಮನೆಗೆ ನುಗ್ಗಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಅನಾಹುತವಾಗಿದೆಯೆಂದು ಗಮನಿಸಿದ ನೆರೆಹೊರೆಯ ಮನೆಯವರು ಸಂತ್ರಸ್ತೆಯ ಕುಟುಂಬ ಸದಸ್ಯರಿಗೆ ತಿಳಿಸಿದ್ದಾರೆ.

ಆರೋಪಿ ರಾಜಾ ಭಟ್ ಬಾಡಿಗೆ ಮನೆಯಲ್ಲಿ ಒಂಟಿಯಾಗಿ ವಾಸವಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ವಿಶೇಷ ಸಾಮರ್ಥ್ಯವುಳ್ಳ ಮಹಿಳೆ ಹಗಲಿನಲ್ಲಿ ಮನೆಯಲ್ಲಿ ಒಬ್ಬಂಟಿಯಾಗಿರುವುದನ್ನು ಗಮನಿಸಿದ ನಂತರ, ಯೋಜನೆ ಹಾಕಿಕೊಂಡೇ ಈ ಅಪರಾಧ ಎಸಗಿದ್ದಾನೆ. ಈತನ ವಿರುದ್ಧ ದೂರು ದಾಖಲಾಗಿದ್ದು ಪ್ರಕರಣದ ತನಿಖೆ ನಡೆಯುತ್ತಿದೆ.ಆರೋಪಿ ಸಂತ್ರಸ್ತೆಯ ಮೇಲೆ ಅತ್ಯಾಚಾರವೆಸಗಿರುವುದು ತಿಳಿದ ಬಳಿಕ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ನಂತರ ಪ್ರಕರಣವನ್ನು ಮಹಿಳಾ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ ಎಂದು ತಿಳಿದು ಬಂದಿದೆ.

See also  ಕೆವಿಜಿ ಆಸ್ಪತ್ರೆಯ ರಕ್ತನಿಧಿ ಘಟಕದ ಅಧಿಕಾರಿ ನಿಧನ: ಹಲವರ ಬಾಳಿಗೆ ಬೆಳಕಾಗಿದ್ದ ಡಾ|ಮಹಂತದೇವ್ರು ಇನ್ನು ನೆನಪು ಮಾತ್ರ
  Ad Widget   Ad Widget     Ad Widget   Ad Widget   Ad Widget   Ad Widget