ಕರಾವಳಿಕ್ರೈಂಮಂಗಳೂರುವೈರಲ್ ನ್ಯೂಸ್

ಮಂಗಳೂರು: ಎರಡು ಶಾಲೆಗಳಿಗೆ ನುಗ್ಗಿ ನಗದು ಕಳವುಗೈದ ಕಳ್ಳರು..! ಘಟನಾ ಸ್ಥಳಕ್ಕೆ ಉಳ್ಳಾಲ ಪೊಲೀಸರು ಭೇಟಿ..!

258
Pc Cr: Vartha bharati

ನ್ಯೂಸ್ ನಾಟೌಟ್: ಎರಡು ಖಾಸಗಿ ಶಾಲೆಗಳಿಗೆ ನುಗ್ಗಿದ ಕಳ್ಳರು ಪಿಕ್ನಿಕ್ ಗಾಗಿ ವಿದ್ಯಾರ್ಥಿಗಳಿಂದ ಸಂಗ್ರಹಿಸಿಟ್ಟಿದ್ದ 26,000 ರೂ. ಸೇರಿದಂತೆ ಉಳಿದ ನಗದು ಕಳವು ಮಾಡಿದ ಘಟನೆ ಮಂಗಳೂರಿನ ಉಳ್ಳಾಲ ಠಾಣಾ ವ್ಯಾಪ್ತಿಯ ಕೋಟೆಕಾರ್, ಕೊಲ್ಯದಲ್ಲಿ ಮುಂಜಾನೆ 4.30 ರ ಸುಮಾರಿಗೆ (ನ.27) ನಡೆದಿದೆ.

ಕೊಲ್ಯದ ಸಂತ ಜೋಸೆಫರ ಜಾಯ್ ಲ್ಯಾಂಡ್ ಆಂಗ್ಲ ಮಾಧ್ಯಮ ಶಾಲೆ ಮತ್ತು ಕೋಟೆಕಾರಿನ ಸ್ಟೆಲ್ಲಾ ಮೇರಿಸ್ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಈ ಕಳ್ಳತನ ನಡೆದಿದೆ.
ಕೊಲ್ಯ ಜಾಯ್ ಲ್ಯಾಂಡ್ ಶಾಲೆಯ ಸಿಸಿಟಿವಿ ಕ್ಯಾಮರ ಕಳ್ಳರೇ ತಿರುಚಿದ್ದಾರೆ ಎನ್ನಲಾಗಿದೆ. ಕಳ್ಳರು, ಪ್ರಾಂಶುಪಾಲರ ಕಚೇರಿ, ಕಪಾಟುಗಳ ಬೀಗ ಒಡೆದಿದ್ದಾರೆ. ಪುಸ್ತಕ, ದಾಖಲೆ ಪತ್ರೆಗಳನ್ನೆಲ್ಲ ಚೆಲ್ಲಾಪಿಲ್ಲಿ ಮಾಡಿದ್ದಾರೆ. ವಿದ್ಯಾರ್ಥಿಗಳಿಂದ ಪಿಕ್ನಿಕ್ ಗಾಗಿ ಸಂಗ್ರಹಿಸಿಟ್ಟಿದ್ದ ಸುಮಾರು 26,000 ರೂ. ನಗದನ್ನು ಕಳವುಗೈದಿದ್ದಾರೆ ಎಂದು ತಿಳಿದು ಬಂದಿದೆ.

ಕೋಟೆಕಾರಿನ ಸ್ಟೆಲ್ಲಾ ಮೇರೀಸ್ ಶಾಲೆಗೆ ಬುಧವಾರ ಮುಂಜಾನೆ 4:30 ಗಂಟೆಗೆ ಕಳ್ಳರು ನುಗ್ಗಿರುವುದು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಕಳ್ಳನು ಸಿಸಿಟಿವಿ ಕ್ಯಾಮರಾದಲ್ಲಿ ಮುಖ ಚಹರೆ ಕಾಣದಿರಲು ಮ್ಯಾಟನ್ನು ಅಡ್ಡ ಹಿಡಿದು ಪ್ರವೇಶಿಸಿರುವ ದೃಶ್ಯವು ಸಿಸಿಟಿವಿಯಲ್ಲಿ ದಾಖಲಾಗಿದೆ. ಶಾಲಾ ಕಚೇರಿ, ಸ್ಟಾಪ್ ರೂಂನ ಕಪಾಟುಗಳನ್ನು ಒಡೆದು ತಡಕಾಡಿದ ಕಳ್ಳ ನಗದು ಕಳವುಗೈದಿದ್ದಾರೆ.
ಘಟನಾ ಸ್ಥಳಕ್ಕೆ ಉಳ್ಳಾಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತನಿಖೆ ಮುಂದುವರಿದಿದೆ.

Click

https://newsnotout.com/2024/11/central-jail-protest-by-accued-kannada-nbews-viral-news/
https://newsnotout.com/2024/11/police-and-baby-issue-thief-viral-news-kannada-news-f/
See also  ಸುಳ್ಯ: ಆರಂಭದಲ್ಲೇ ಮುನ್ನಡೆ ಕಾಯ್ದುಕೊಂಡ ಬಿಜೆಪಿ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget