Latestದಕ್ಷಿಣ ಕನ್ನಡಮಂಗಳೂರುರಾಜ್ಯ

ಮಂಗಳೂರು: ಶಾಲಾ ಕಾಲೇಜು ಬೇಸಿಗೆ ರಜೆ ಹಿನ್ನೆಲೆ ಕೆಲ ರೈಲುಗಳಿಗೆ ಹೆಚ್ಚುವರಿ ಬೋಗಿ ಅಳವಡಿಕೆ..! ಇಲ್ಲಿದೆ ಸಂಪೂರ್ಣ ಮಾಹಿತಿ

690

ನ್ಯೂಸ್‌ ನಾಟೌಟ್‌: ಶಾಲಾ ಕಾಲೇಜುಗಳಿಗೆ ಬೇಸಿಗೆ ರಜೆ ಆರಂಭವಾಗಿರುವುದರಿಂದ ರೈಲುಗಳಲ್ಲಿ ಪ್ರಯಾಣಿಕರ ದಟ್ಟಣೆಯನ್ನು ನಿರ್ವಹಿಸುವ ಸಲುವಾಗಿ ಪಾಲ್ಘಾಟ್ ರೈಲ್ವೇ ವಿಭಾಗವು ಕೆಲ ರೈಲುಗಳಲ್ಲಿ ಹೆಚ್ಚುವರಿ ಬೋಗಿಗಳನ್ನು ಅಳವಡಿಸಿದೆ.

ತಿರುವನಂತಪುರಂ ಸೆಂಟ್ರಲ್‌ ನಿಂದ ಆರಂಭವಾಗುವ ರೈಲು ಸಂಖ್ಯೆ 16604 ತಿರುವನಂತಪುರಂ ಸೆಂಟ್ರಲ್ ಮಂಗಳೂರು ಸೆಂಟ್ರಲ್ ಮಾವೇಲಿ ಎಕ್ಸ್‌ಪ್ರೆಸ್‌ ಗೆ ಎ. 25ರಂದು ಒಂದು ಹೆಚ್ಚುವರಿ ಸ್ಲೀಪರ್ ಕ್ಲಾಸ್ ಬೋಗಿ ಒದಗಿಸಲಾಗುತ್ತಿದೆ ಎಂದು ರೈಲ್ವೆ ಇಲಾಖೆ ಹೇಳಿದೆ.

ಮಂಗಳೂರು ಸೆಂಟ್ರಲ್‌ ನಿಂದ ಎ. 24ರಂದು ಹೊರಡುವ ರೈಲು ಸಂಖ್ಯೆ 16603 ಮಂಗಳೂರು ಸೆಂಟ್ರಲ್ ಮಾವೇಲಿ ಎಕ್ಸ್‌ಪ್ರೆಸ್ ರೈಲಿಗೆ ಒಂದು ಹೆಚ್ಚುವರಿ ಸ್ಲೀಪರ್ ಬೋಗಿ ಅಳವಡಿಸಲಾಗುತ್ತಿದೆ.
ತಿರುವನಂತಪುರಂ ಸೆಂಟ್ರಲ್‌ ನಿಂದ ಆರಂಭವಾಗುವ ರೈಲು ಸಂಖ್ಯೆ 16629 ತಿರುವನಂತಪುರಂ ಸೆಂಟ್ರಲ್ ಮಂಗಳೂರು ಸೆಂಟ್ರಲ್ ಮಲಬಾರ್ ಎಕ್ಸ್‌ಪ್ರೆಸ್ ರೈಲಿಗೆ ಎ. 24 ಮತ್ತು 25ರಂದು ಒಂದು ಹೆಚ್ಚುವರಿ ಸ್ಲೀಪರ್ ಕ್ಲಾಸ್ ಬೋಗಿ ನೀಡಲಾಗುತ್ತಿದೆ.

ಮಂಗಳೂರು ಸೆಂಟ್ರಲ್‌ನಿಂದ ಆರಂಭವಾಗುವ ರೈಲು ಸಂಖ್ಯೆ 16630 ಮಂಗಳೂರು ಸೆಂಟ್ರಲ್ ತಿರುವನಂತಪುರಂ ಸೆಂಟ್ರಲ್ ಅಲಬಾರ್ ಎಕ್ಸ್‌ಪ್ರೆಸ್ ರೈಲಿನ ಎ. 24ರ ಪ್ರಯಾಣಕ್ಕೆ ಒಂದು ಹೆಚ್ಚುವರಿ ಸ್ಲೀಪರ್ ಬೋಗಿ ನೀಡಲಾಗುತ್ತಿದೆ.
ತಿರುವನಂತಪುರಂ ಸೆಂಟ್ರಲ್‌ನಿಂದ ಆರಂಭವಾಗು ರೈಲು ಸಂಖ್ಯೆ 16343 ತಿರುವನಂತಪುರಂ ಸೆಂಟ್ರಲ್ ಮಧುರೈ ಜಂಕ್ಷನ್ ಅಮೃತ ಎಕ್ಸ್‌ಪ್ರೆಸ್ ರೈಲಿಗೆ ಎ. 24ರಂದು ಒಂದು ಹೆಚ್ಚುವರಿ ಸ್ಲೀಪರ್ ಕೋಚ್ ನೀಡಲಾಗುತ್ತಿದೆ.

ಮಧುರೈ ಜಂಕ್ಷನ್‌ನಿಂದ ಆರಂಭವಾಗುವ ರೈಲು ಸಂಖ್ಯೆ 16344 ಮಧುರೈ ಜಂಕ್ಷನ್ ತಿರುವನಂತಪುರಂ ಸೆಂಟ್ರಲ ಅಮೃತ ಎಕ್ಸ್‌ಪ್ರೆಸ್ ರೈಲಿನ ಎ. 24 ಮತ್ತು 25ರ ಪ್ರಯಾಣಕ್ಕೆ ಒಂದು ಹೆಚ್ಚುವರಿ ಸ್ಲೀಪರ್ ಕ್ಲಾಸ್ ಕೋಚ್ ನೀಡಲಾಗುತ್ತಿದೆ ಎಂದು ರೈಲ್ವೇ ಪ್ರಕಟಣೆ ತಿಳಿಸಿದೆ.  

ಹಳೆಯ ಮೊಬೈಲ್ ಫೋನ್‌ ಮೇಲೆ ಸ್ಟಿಕ್ಕರ್‌ ಅಂಟಿಸಿ ಹೊಸ ಫೋನ್‌ ಎಂದು ಮಾರಾಟ..!ಸ್ಮಾರ್ಟ್‌ಫೋನ್‌ ನ ಬಾಕ್ಸ್‌ ನಲ್ಲಿ ಬರುವ ಪೇಪರ್ ಸೀಲ್ ಮಾರುಕಟ್ಟೆಯಲ್ಲಿ 100 ರೂ.ಗೆ ಲಭ್ಯ..!

ದಾಳಿ ಮಾಡಿದ್ದ ಮೂವರು ಉಗ್ರರ ರೇಖಾಚಿತ್ರ ಬಿಡುಗಡೆ..! 3 ಶಂಕಿತ ಭಯೋತ್ಪಾದಕರ ಹೆಸರುಗಳನ್ನೂ ಬಹಿರಂಗ ಪಡಿಸಿದ ಎನ್.ಐ.ಎ..!

See also  ಮಂಗಳೂರು: ಮದರಂಗಿ ಹಾಕಿಸಿಕೊಂಡು ಬರಲು ಪಾರ್ಲರ್ ಗೆ ಹೋದ ವಧು ಮತ್ತೆ ಬರಲೇ ಇಲ್ಲ..! ಪ್ರೀ ವೆಡ್ಡಿಂಗ್ ಫೋಟೋ ಶೂಟ್ ಕೂಡ ಅದ್ದೂರಿಯಾಗಿ ನಡೆದಿತ್ತು..!
  Ad Widget   Ad Widget   Ad Widget   Ad Widget   Ad Widget   Ad Widget