ಕರಾವಳಿಕ್ರೈಂದಕ್ಷಿಣ ಕನ್ನಡಮಂಗಳೂರುವೈರಲ್ ನ್ಯೂಸ್

ಮಂಗಳೂರು: ರಾತ್ರಿ ಕರ್ತವ್ಯದಲ್ಲಿದ್ದ ಪೊಲೀಸರ ವಾಕಿಟಾಕಿ ಕಳವು..! ಪ್ರಕರಣ ದಾಖಲು

ನ್ಯೂಸ್ ನಾಟೌಟ್ : ರಾತ್ರಿ ಪಾಳಿಯಲ್ಲಿ ಕರ್ತವ್ಯದಲ್ಲಿದ್ದ ಉಳ್ಳಾಲ ಠಾಣಾ ಪಿಎಸ್ ಐಯ ಪೊಲೀಸ್ ವಾಹನದಿಂದಲೇ ವಾಕಿಟಾಕಿ ಕಳವಾದ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಜ.22ರಂದು ಉಳ್ಳಾಲ ಪೊಲೀಸ್ ಠಾಣಾ ಪಿಎಸ್ಸೈ ಧನರಾಜ್ ಅವರು ರಾತ್ರಿ ಪಾಳಿ ಕರ್ತವ್ಯದಲ್ಲಿದ್ದರು. ಈ ವೇಳೆ ಅವರು ತಮ್ಮ ಇಲಾಖೆಗೆ ಸೇರಿರುವ ಬೀಟ್-3 ಎಂದು ಬರೆದಿದ್ದ ಮೋಟೊರೋಲ ಕಂಪೆನಿಯ ವಾಕಿಟಾಕಿಯನ್ನು ಕೊಂಡೊಯ್ದಿದ್ದರು. ಪಂಪ್ ವೆಲ್ ಗೆ ತೆರಳಿದ್ದ ಅವರು ಜೀಪನ್ನು ತಾನೇ ಚಲಾಯಿಸಿ ಮತ್ತೆ ಉಳ್ಳಾಲದ ಕಡೆಗೆ ಹಿಂತಿರುಗಿ ಬಂದಿದ್ದಾರೆ.

ಅದೇ ದಿನ ಮಧ್ಯರಾತ್ರಿ 11.45ರ ವೇಳೆ ದಾರಿ ಮಧ್ಯದ ಕಲ್ಲಾಪು ಗ್ಲೋಬಲ್ ಮಾರ್ಕೆಟ್ ಬಳಿಯ ಹೆದ್ದಾರಿ ಬದಿಯಲ್ಲಿ ಜನರು ಗುಂಪು ಸೇರಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಅಲ್ಲಿಗೆ ತೆರಳಲು ಧನರಾಜ್ ಪೊಲೀಸ್ ವಾಹನವನ್ನು ನಿಲ್ಲಿಸಿದ್ದಾರೆ. ಈ ಸಂದರ್ಭ ತನ್ನ ವಾಕಿಟಾಕಿಯನ್ನು ಪೊಲೀಸ್ ಜೀಪಿನ ಸೀಟಿನಲ್ಲಿ ಇಟ್ಟು ಪಿಎಸ್ ಐ ಧನರಾಜ್ ವಾಹನದಿಂದ ಇಳಿದು ಹೆದ್ದಾರಿಯಲ್ಲಿ ಜಮಾಯಿಸಿದ್ದ ಜನರನ್ನ ವಿಚಾರಿಸಿ ಮತ್ತೆ ಜೀಪ್ ಏರಿದಾಗ ವಾಕಿಟಾಕಿ ಕಳವಾಗಿದೆ ಎಂದು ವರದಿ ತಿಳಿಸಿದೆ.

ಬೀಟ್-3 ಎಂದು ಬರೆದಿದ್ದ (865EAF0143 ID)ಮೋಟೋರೋಲ ಕಂಪೆನಿಯ ವಾಕಿಟಾಕಿ ಕಳವಾಗಿರುವ ಬಗ್ಗೆ ಪಿಎಸ್ ಐ ಧನರಾಜ್ ತಾನು ಕರ್ತವ್ಯ ನಿರ್ವಹಿಸುತ್ತಿರುವ ಉಳ್ಳಾಲ ಠಾಣೆಗೆ ದೂರು ನೀಡಿದ್ದಾರೆ.

Related posts

ಬೆಂಗಳೂರು ಕಂಬಳದಲ್ಲಿ ಪಾಲ್ಗೊಳ್ಳುವ ಕೋಣಗಳಿಗೆ ದ.ಕ. ಜಿಲ್ಲೆಯಿಂದಲೇ ಟ್ಯಾಂಕರ್‌ ಮೂಲಕ ನೀರು ಪೂರೈಕೆ..!, ಸಂಘಟಕರು ಈ ನಿರ್ಧಾರ ಕೈಗೊಂಡಿದ್ದೇಕೆ..?

ಬೆಳ್ಳಾರೆಯತ್ತ ಮಸೂದ್ ಮೃತ ದೇಹ

ಬೆಂಕಿ ರಹಿತವಾಗಿ ಅಡುಗೆ ಮಾಡೋದು ಹೇಗೆ..? NMC ವಿದ್ಯಾರ್ಥಿಗಳಿಗೆ ಕಲಿಕೆಯ ಜೊತೆಗೆ ಹೊಸತನದ ಪ್ರಯೋಗ