ಕರಾವಳಿಕಾಸರಗೋಡು

ಮುಸ್ಲಿಂ ಹುಡುಗರ ಜತೆ ಹಿಂದೂ ವಿದ್ಯಾರ್ಥಿನಿಯರ ವಾಕಿಂಗ್..ಸಮುದ್ರದಲ್ಲೇ ಹಲ್ಲೆ, ಪೊಲೀಸ್ ದೂರು ದಾಖಲು

199

ನ್ಯೂಸ್ ನಾಟೌಟ್:  ಮಂಗಳೂರಿನ ಸೋಮೇಶ್ವರ ಬೀಚ್ ನಲ್ಲಿ ಗುರುವಾರ ಸಂಜೆ ಮುಸ್ಲಿಂ ಯುವಕರ ಜತೆ ಮೂವರು ಹಿಂದೂ ಯುವತಿಯರು ವಾಯು ವಿಹಾರ ನಡೆಸಿರುವ ವಿಚಾರ ಬೆಳಕಿಗೆ ಬಂದಿದೆ. ಈ ವೇಳೆ ಕೆಲವರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಲ್ಲದೆ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದೆ ಅನ್ನುವ ದೂರು ದಾಖಲಾಗಿದೆ.

ಹಲ್ಲೆಗೊಳಗಾದವರು ಮಂಗಳೂರಿನ ಖಾಸಗಿ ಶಿಕ್ಷಣ ಸಂಸ್ಥೆಗೆ ಸೇರಿದ ವಿದ್ಯಾರ್ಥಿಗಳು ಎಂದು ತಿಳಿದು ಬಂದಿದೆ. ಮುಸ್ಲಿಂ ವಿದ್ಯಾರ್ಥಿಗಳ ಜತೆಗೆ ಹಿಂದೂ ಹುಡುಗಿಯರು ಸೇರಿಕೊಂಡು ವಾಯು ವಿಹಾರಕ್ಕೆ ಬಂದಿದ್ದರು. ಇದನ್ನು ಅರಿತು ಅವರನ್ನೇ ಫಾಲೋ ಮಾಡಿದ ಕೆಲವರು ಅವರನ್ನು ಪ್ರಶ್ನಿಸಿದ್ದಾರೆ. ಈ ವೇಳೆ ಮಾತಿನ ಚಕಮಕಿ ನಡೆದಿದೆ. ಸಿಟ್ಟಿಗೆದ್ದ ಕೆಲವರು ಅವರಿಗೆ ಹಲ್ಲೆ ಮಾಡಿದ್ದಾರೆಂದು ತಿಳಿದು ಬಂದಿದೆ.

ಹಲ್ಲೆಗೊಳಗಾದವರನ್ನು ಕೇರಳದ ಕಣ್ಣೂರಿನ ಯುವಕರು ಹಾಗೂ ಕಾಸರಗೋಡಿನ ಯುವತಿಯರು ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಮೂವರು ವಿದ್ಯಾರ್ಥಿಗಳು ಗಾಯಗೊಂಡಿದ್ದು, ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸದ್ಯ ಉಳ್ಳಾಲ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

See also  ಲೋಕಸಭಾ ಚುನಾವಣೆ ಗದ್ದಲದಲ್ಲಿ 'ಸೌಜನ್ಯ' ಹೆಸರು ಮರೆಯಾಗದಿರಲಿ, ದಕ್ಷಿಣ ಕನ್ನಡ ಜಿಲ್ಲೆಯ ಅಭ್ಯರ್ಥಿಗಳೇ ಓಟಿಗೆ ಮೊದಲು ನಿಮ್ಮ ನಿಲುವೇನು ತಿಳಿಸಿ..?
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget