ಕ್ರೈಂ

ಬಸ್ ಸ್ಟ್ಯಾಂಡ್‌ಗೆ ಗುದ್ದಿದ ಪೊಲೀಸ್ ಜೀಪ್: ಮಹಿಳಾ ಇನ್ಸ್ ಪೆಕ್ಟರ್ ಗೆ ಗಾಯ

ಕುಪ್ಪೆಪದವು:ಮಂಗಳೂರು ಪಾಂಡೇಶ್ವರ ಮಹಿಳಾ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ರೇವತಿ ಅವರಿದ್ದ ಪೊಲೀಸ್ ಜೀಪ್ ಎಡಪದವು ವಿವೇಕಾನಂದ ಜೂನಿಯರ್ ಕಾಲೇಜು ಮುಂಭಾಗದಲ್ಲಿರುವ ಬಸ್ ಸ್ಟಾಂಡ್ ಗೆ ನುಗ್ಗಿದ ಘಟನೆ ಇಂದು ಬೆಳಗ್ಗೆ ನಡೆದಿದೆ. ಅಪಘಾತದಲ್ಲಿ ಇನ್ಸ್ ಪೆಕ್ಟರ್ ರೇವತಿ ಅವರ ಕೈಗೆ ಗಾಯವಾಗಿದೆ. ಘಟನೆ ನಡೆಯುತ್ತಿದ್ದಂತೆ ಧಾವಿಸಿ ಬಂದ ಎಡಪದವು ಪಂಚಾಯತ್ ಅಧ್ಯಕ್ಷ ಸುಕುಮಾರ್ ದೇವಾಡಿಗ ಮತ್ತು ಸ್ಥಳೀಯರು ರೇವತಿ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿದ್ದಾರೆ, ಅಪಘಾತದಲ್ಲಿ ಪೊಲೀಸ್ ಜೀಪ್ ಜಖಂ ಗೊಂಡಿದ್ದು ಬಸ್ ಸ್ಟಾಂಡ್ ಪುಡಿ ಪುಡಿಯಾಗಿದೆ.

Related posts

ಮಹಿಳೆಗೆ ಮದ್ಯ ಕುಡಿಸಿ, ಹಾಡಹಗಲೇ ಫುಟ್ಪಾತ್ ನಲ್ಲಿ ಅತ್ಯಾಚಾರ..! ತಡೆಯದೆ ವಿಡಿಯೋ ಮಾಡುತ್ತಾ ನಿಂತ ಜನ..!

ಸುಬ್ರಹ್ಮಣ್ಯ ಪೊಲೀಸರ ಮಿಂಚಿನ ಕಾರ್ಯಾಚರಣೆ, ಒಂದೇ ವಾರದಲ್ಲಿ ಕಳವಾದ 6 ಮೊಬೈಲ್‌ ಗಳನ್ನ ಪತ್ತೆ ಹಚ್ಚಿದ್ದು ಹೇಗೆ..?

ಸಾಹಿತಿಗಳಿಗೆ ಜೀವ ಬೆದರಿಕೆ ಪತ್ರ ಬರೆಯುತ್ತಿದ್ದವ ಸಿಸಿಬಿ ಬಲೆಗೆ ಬಿದ್ದದ್ದೇ ರೋಚಕ..! ಯಾರೀ ಹಿಂದೂ ಸಂಘಟನೆಯ ಕಾರ್ಯಕರ್ತ? ಈ ಬಗ್ಗೆ ಪೊಲೀಸರು ಹೇಳಿದ್ದೇನು?