Uncategorized

ಮಂಗಳೂರು: ನಕಲಿ ದಾಖಲೆ ನೀಡಿ ಪಾಸ್‌ಪೋರ್ಟ್ ಪಡೆದ ಬಾಂಗ್ಲಾ ಪ್ರಜೆ..! ಪಶ್ಚಿಮ ಬಂಗಾಳದ ಮೂಲಕ ಭಾರತ ಪ್ರವೇಶಿಸಿ ಉಡುಪಿಗೆ ಬಂದಿದ್ದ ಆರೋಪಿ..!

ನ್ಯೂಸ್ ನಾಟೌಟ್: ನಕಲಿ ದಾಖಲಾತಿ ನೀಡಿ ಪಾಸ್‌ಪೋರ್ಟ್ ಮಾಡಿಸಿ ದುಬೈಗೆ ವಿಮಾನದಲ್ಲಿ ಪ್ರಯಾಣಿಸಲು ಯತ್ನಿಸಿದ ಬಾಂಗ್ಲಾದೇಶದ ಪ್ರಜೆಯೊಬ್ಬನನ್ನು ಬಂಧಿಸಿರುವ ಘಟನೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ನಡೆದಿರುವುದು ವರದಿಯಾಗಿದೆ.

ಬಾಂಗ್ಲಾದೇಶದ ರಾಜಶಾಹಿ ಜಿಲ್ಲೆಯ ಮಾಣಿಕ್ ಚೌಕ್‌ನ ಮಾಣಿಕ್ ಹುಸೈನ್ ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿ ಮಾಣಿಕ್ ಅ.10ರಂದು ಸಂಜೆ 5:45 ಗಂಟೆಗೆ ಮಂಗಳೂರು ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಮಿಗ್ರೇಶನ್ ವಿಭಾಗ ಕೌಂಟರ್ ನಿಂದ ದುಬೈಗೆ ಪ್ರಯಾಣಿಸಲು ಯತ್ನಿಸಿ ಅಧಿಕಾರಿಗಳ ಕೈಗೆ ಸಿಕ್ಕಿ ಬಿದ್ದಿರುವುದಾಗಿ ತಿಳಿದುಬಂದಿದೆ, ತನಿಖೆಯ ಬಳಿಕ ಅ.12 ರಂದು ಸಂಪೂರ್ಣ ಮಾಹಿತಿ ಬಯಲಾಗಿದೆ.

ಮಾಣಿಕ್ ಬಾಂಗ್ಲದೇಶದ ರಾಷ್ಟ್ರೀಯ ಗುರುತು ಚೀಟಿ ಸಂಖ್ಯೆ 601 ಆಗಿದ್ದು ಈತನು 2017 ರಲ್ಲಿ ಇಂಡೋ-ಬಾಂಗ್ಲಾ ಅಂತರ್‌ ರಾಷ್ಟ್ರೀಯ ಗಡೀರೇಖೆ ಪಶ್ಚಿಮ ಬಂಗಾಳದ ಲಾಲ್ ಗೊಲ್ ಮುರ್ಷಿದಬಾದ್ ಜಿಲ್ಲೆ ಮೂಲಕ ಭಾರತ ಪ್ರವೇಶಿಸಿ ಚೆನ್ನೈ ಮುಖಾಂತರ ಮಂಗಳೂರಿಗೆ ಆಗಮಿಸಿ ಬಳಿಕ ಉಡುಪಿಗೆ ಹೋಗಿ ಅಲ್ಲಿ ಭಾರತೀಯ ನಿವಾಸಿ ಪರ್ವೇಝ್ ಎಂಬಾತನ ಮುಖಾಂತರ ಪಾಸ್ ಪೋರ್ಟ್ ಮಾಡಿಸಿರುವುದಾಗಿ ವಿಚಾರಣೆ ವೇಳೆ ತಿಳಿದುಬಂದಿದೆ.
ಆರೋಪಿ ಮತ್ತು ಭಾರತೀಯ ಪಾಸ್ ಪೋರ್ಟ್ ಪಡೆಯಲು ಸಹಕರಿಸಿದ ಪರ್ವೇಝ್ ವಿರುದ್ಧ ಬಜ್ಪೆ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.

Click

https://newsnotout.com/2024/10/sanjay-datt-in-kateel-durgaparameshwari-temple
https://newsnotout.com/2024/10/vijayadashami-kannada-news-bjp-leader-distributed-sowrd-to-girls
https://newsnotout.com/2024/10/9-year-old-girl-nomore-kannada-news-deva-guli

Related posts

ನಟಿಯ ಅತ್ಯಾಚಾರ ಪ್ರಕರಣದಲ್ಲಿ ಮಲಯಾಳಂ ನಟನ ಬಂಧನ..! 3 ಗಂಟೆಗಳ ಕಾಲ ನಿರಂತರ ವಿಚಾರಣೆ..!

ಮಂಗಳೂರು ಡಿವೈಎಸ್ಪಿ ಪರಮೇಶ್ವರ್ ಗೆ ಕೇಂದ್ರ ಗೃಹ ಸಚಿವಾಲಯ ಪದಕ

ಎಸ್ ಎಸ್‌ ಎಲ್ ಸಿ ಫಲಿತಾಂಶ ಪ್ರಕಟಕ್ಕೆ ಕ್ಷಣಗಣನೆ