ಕ್ರೈಂಮಂಗಳೂರುವೈರಲ್ ನ್ಯೂಸ್

ಮಂಗಳೂರು: ಸಮುದ್ರ ತೀರದಲ್ಲಿ ನಿಗೂಢವಾಗಿ ವ್ಯಕ್ತಿಯೊಬ್ಬರ ಮೃತದೇಹ ಪತ್ತೆ..! ಕೊಲೆಯಾಗಿರೋ ಶಂಕೆ..!

215

ನ್ಯೂಸ್ ನಾಟೌಟ್: ಸಮುದ್ರ ತೀರದಲ್ಲಿ ನಿಗೂಢವಾಗಿ ವ್ಯಕ್ತಿಯೊಬ್ಬರ ಮೃತದೇಹ ಪತ್ತೆಯಾಗಿದ್ದು, ಪಣಂಬೂರಿನ ತೋಟ ಬೆಂಗ್ರೆ ಅಳಿವೆಬಾಗಿಲು ಸಮೀಪ ಸಿಕ್ಕ ಈ ದೇಹದಲ್ಲಿನ ಗಾಯಗಳ ಪ್ರಕಾರ ಕೊಲೆ ಶಂಕೆ ವ್ಯಕ್ತವಾಗಿದೆ.

ಮೂಲತಃ ಬಾಗಲಕೋಟೆ ಜಿಲ್ಲೆಯ ಅಮೀನಗಡ ನಿವಾಸಿ ಮುತ್ತು ಬಸವರಾಜ್ ವಡ್ಡರ್ ಆಲಿಯಾಸ್ ಮುದುಕಪ್ಪ ಮೃತಪಟ್ಟವರು ಎಂದು ತಿಳಿದು ಬಂದಿದೆ. ಇವರು ಹಲವು ವರ್ಷಗಳಿಂದ ತೋಟ ಬೆಂಗ್ರೆ ಎಂಬಲ್ಲಿನ ಬಾಡಿಗೆ ಮನೆಯೊಂದರಲ್ಲಿ ಒಬ್ಬರೇ ವಾಸವಿದ್ದು, ಕೂಲಿ ಕೆಲಸ ಮಾಡಿಕೊಂಡಿದ್ದರು ಎಂದು ತಿಳಿದು ಬಂದಿದೆ.

ಮೃತದೇಹದ ಬಲ ಕಾಲು, ಬಲ ಕೈ ಹಾಗೂ ಹಣೆಯ ಭಾಗದಲ್ಲಿ ರಕ್ತ ಗಾಯ ಇದ್ದು, ಮೇಲ್ನೋಟಕ್ಕೆ ಕೊಲೆ ಮಾಡಿರುವ ರೀತಿ ಕಂಡುಬರುತ್ತಿದೆ. ಮೃತರು ವಿಪರೀತ ಕುಡಿತದ ಚಟ ಹೊಂದಿದ್ದು, ಯಾರೊಂದಿಗೋ ಜಗಳವಾಡಿಕೊಂಡು ಕೊಲೆಗೀಡಾಗಿರುವ ಸಾಧ್ಯತೆ ಇದೆ ಎಂದು ಪೊಲೀಸರು ಶಂಕಿಸಿದ್ದಾರೆ. ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

https://newsnotout.com/2024/09/digital-upi-payment-innovation-by-auto-driver-kannada-news/
See also  ಸಿ.ಟಿ.ರವಿ ಬಿಡುಗಡೆಯ ಬಳಿಕ ಸ್ವಾಗತ ಕೋರಿದ್ದ 7 ಆ್ಯಂಬುಲೆನ್ಸ್​ ವಿರುದ್ಧ FIR ದಾಖಲು..! ಏನಿದು ಘಟನೆ..?
  Ad Widget     Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget