ಕರಾವಳಿ

ಮಂಗಳೂರು : ಕುಡುಕನಿಗೆ ಬಿದ್ದು ಸಿಕ್ಕಿತು 10 ಲಕ್ಷ ರೂ..! ಆತ ತನಗೆ ಸಿಕ್ಕಿದ ನೋಟುಗಳನ್ನು ಏನು ಮಾಡಿದ ಗೊತ್ತಾ?

ನ್ಯೂಸ್ ನಾಟೌಟ್: ಸಾಮಾನ್ಯವಾಗಿ ದಾರಿಯಲ್ಲಿ ಸಣ್ಣ ಮಟ್ಟಿನ ಹಣ ಬಿದ್ದು ಸಿಕ್ಕುವುದಿದೆ. ಆದರೆ ಇಲ್ಲೊಬ್ಬ ಟೈಟ್ ಮಾಸ್ಟರ್‌ (ಕುಡುಕ)ಗೆ ಮಂಗಳೂರಿನ ಪಂಪ್‌ವೆಲ್ ಬಳಿ ನವೆಂಬರ್​ 27ರಂದು 2,000, 500 ರೂ. ಮುಖಬೆಲೆಯ ಗರಿ ಗರಿನೋಟಿನ ಹಣದ ಬಾಕ್ಸ್ ವೊಂದು ಸಿಕ್ಕಿದೆ.

ತೆರೆದು ನೋಡಿದರೆ ಅಟ್ಟಿ..ಅಟ್ಟಿ ಹಣ. ಆದರೆ ಕುಡುಕನ ಮನಸ್ಸು ಚಂಚಲವಾಗಲಿಲ್ಲ. ನೇರವಾಗಿ ಬಾಕ್ಸ್‌ ಹಿಡಿದುಕೊಂಡು ತೂರಾಡಿಕೊಂಡು ಬಾರ್ ಮುಂದೆ ಬಂದವನೇ ತನಗೆ ಬೇಕಾದಷ್ಟು ಮದ್ಯ ಕುಡಿದಿದ್ದಾನೆ. ಸಾಲದು ಎಂಬಂತೆ ಬಂದವರಿಗೆಲ್ಲ ಮದ್ಯದ ಅಭಿಷೇಕವನ್ನು ಬಿಟ್ಟಿಯಾಗಿ ಮಾಡಿದ್ದಾನೆ. ಈ ವಿಷಯ ತಿಳಿಯುತ್ತಿದ್ದಂತೆ ಕಂಕನಾಡಿ ಪೊಲೀಸರು ಸ್ಥಳಕ್ಕೆ ಬಂದು ಹಣದ ಬಾಕ್ಸ್​ ಸಮೇತ ತಮಿಳುನಾಡಿನ ಶಿವರಾಜ್ (೪೯)  ವಶಕ್ಕೆ ಪಡೆದಿದ್ದಾರೆ.ಮೂರು ದಿನಗಳ ಕಾಲ ಠಾಣೆಯಲ್ಲಿ ಇಟ್ಟುಕೊಂಡು ನಂತರ  ಬಿಟ್ಟು ಕಳಿಸಿದ್ದಾರೆ.​​ ಬಾಕ್ಸ್​ನಲ್ಲಿ 5ರಿಂದ 10 ಲಕ್ಷ ಇತ್ತು ಎಂದು ಹೇಳಿಕೆ ನೀಡಿದರು. ಆದರೆ, ಬಾಕ್ಸ್​ನಲ್ಲಿ 49 ಸಾವಿರ ರೂ ಮಾತ್ರ ಇತ್ತು ಎಂದು ಪೊಲೀಸರು ತಿಳಿಸಿದ್ದಾರೆ. ವಿಪರ್ಯಾಸವಂದರೆ ವಾರ ಕಳೆದರೂ ಹಣದ ವಾರಸುದಾರರು ಮಾತ್ರ ಯಾರು ಎಂದು ತಿಳಿದಿಲ್ಲ. ಈ ಬಗ್ಗೆ ಪೊಲೀಸರು ಕೂಡಾ ಯಾವುದೇ ದೂರು ದಾಖಲಿಸಿಕೊಂಡಿಲ್ಲ. ಪೊಲೀಸರ ಈ ವರ್ತನೆ ಹಲವು ಅನುಮಾನಗಳಿಗೆ ಕಾರಣವಾಗಿದೆ.

Related posts

ಗಾಳಿಮುಖ ‘ಪಂಚಶ್ರೀ ಮೆಡಿಕಲ್ಸ್ ‘ ಸ್ಥಳಾಂತರಗೊಂಡು ಶುಭಾರಂಭ,ದೀಪ ಬೆಳಗಿಸಿ ಸಂಸ್ಥೆಗೆ ಶುಭ ಹಾರೈಸಿದ ಗಣ್ಯರು

ಮಾರ್ಪಾಡಿ: ಮುಂಬೈನಲ್ಲಿರುವ ನಿಗೂಢ ವ್ಯಕ್ತಿಯೊಂದಿಗೆ ಕ್ರಿಕೆಟ್ ಬೆಟ್ಟಿಂಗ್ , ಮೂವರು ಪೊಲೀಸ್ ವಶಕ್ಕೆ

ಬೆಳ್ಳಾರೆಯ ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಪ್ರಕರಣ,ಆರೋಪಿ ನೌಷಾದ್ ಸುಳಿವು ನೀಡಿದವರಿಗೆ 2 ಲಕ್ಷ ರೂ. ಬಹುಮಾನ..!ಎನ್.ಐ.ಎ.‌ಘೋಷಣೆ