ಕರಾವಳಿ

ಬಸ್ ಸ್ಟ್ಯಾಂಡ್ ನಲ್ಲಿ ಯುವತಿಯರಿಗೆ ಕೀಟಲೆ ಮಾಡಿದ್ರೆ ಹುಷಾರ್!!,ಸೈರನ್ ಮೊಳಗುತ್ತೆ,ಕ್ಷಣಾರ್ಧದಲ್ಲೇ ಪೊಲೀಸರು ಎಂಟ್ರಿ

ನ್ಯೂಸ್ ನಾಟೌಟ್ : ಇನ್ಮುಂದೆ ಬಸ್ ನಿಲ್ದಾಣದಲ್ಲಿ ನಿಂತ ಮಹಿಳೆಯರಿಗೆ ಕಿರುಕುಳ ನೀಡಿದರೆ, ಅಶ್ಲೀಲವಾಗಿ ನಡೆದುಕೊಂಡರೆ , ದುಷ್ಕರ್ಮಿಗಳೇನಾದರೂ ದಾಳಿ ಮಾಡಿದರೆ ಕ್ಷಣಾರ್ಧದಲ್ಲೇ ಸ್ಥಳೀಯ ಪೊಲೀಸರು ಬಸ್ ಸ್ಟ್ಯಾಂಡ್ ನಲ್ಲಿ ಹಾಜರಿರುತ್ತಾರೆ. ಹೌದು, ಈ ಹಿಂದೆ ಅವರಿಗೆ ಫೋನ್ ಮೂಲಕ ಸುದ್ದಿ ತಿಳಿಯುತ್ತಿತ್ತು. ಇದೀಗ ಬಸ್ ಸ್ಟ್ಯಾಂಡ್ ನಲ್ಲಿದ್ದ ಸೈರನ್ ದೊಡ್ಡದಾಗಿ ಸೌಂಡ್ ಮಾಡಲಿದೆ.

ಹೈಟೆಕ್‌ ಬಸ್‌ ನಿಲ್ದಾಣ:

ಈ ಹೈಟೆಕ್‌ ಬಸ್‌ ನಿಲ್ದಾಣದಲ್ಲಿ ಸೈರನ್ ಮೊಳಗಲಿದ್ದು, ಕ್ಷಣಾರ್ಧದಲ್ಲೇ ಆ ಸ್ಥಳಕ್ಕೆ ಸ್ಥಳೀಯ ಪೊಲೀಸರು ಅಥವಾ ತುರ್ತು ನಿಗಾ ವಾಹನ ಧಾವಿಸಿ ಬರಲಿದೆ. ಮಹಿಳೆಯರಿಗೆ ರಕ್ಷಣೆ ಸಿಗಲಿದೆ.ಮಾತ್ರವಲ್ಲ ದುಷ್ಕರ್ಮಿಗಳಿಂದ ಬಜಾವಾಗಲು ಈ ತಂಗುದಾಣ ಸಹಾಯಕ್ಕೆ ಬರಲಿದೆ. ಮಂಗಳೂರು ನಗರ ಪೊಲೀಸ್‌ ಕಮಿಷನರೇಟ್‌ ವ್ಯಾಪ್ತಿಯ ಸುರತ್ಕಲ್‌ನಲ್ಲಿ ಸ್ಮಾರ್ಟ್‌ ಆ್ಯಂಡ್‌ ಡಿಜಿಟಲ್‌ ಸುರತ್ಕಲ್‌ ಯೋಜನೆಯಡಿಯಲ್ಲಿ ರಾಜ್ಯದಲ್ಲೇ ಪ್ರಪ್ರಥಮ ಸುಸಜ್ಜಿತ ಹೈಟೆಕ್‌ ಬಸ್‌ ನಿಲ್ದಾಣವನ್ನು ನಿರ್ಮಿಸಲಾಗಿದ್ದು, ಎಲ್ಲರ ಗಮನ ಸೆಳೆಯುತ್ತಿದೆ.

112 ಕಂಟ್ರೋಲ್‌ ರೂಮ್‌ಗೆ ಸಂದೇಶ:

ಮಂಗಳೂರು ಸಮೀಪವಿರುವ ಸುರತ್ಕಲ್‌ ಗೋವಿಂದದಾಸ್‌ ಕಾಲೇಜು ಮುಂಭಾಗದಲ್ಲಿ ಈ ಬಸ್‌ ತಂಗುದಾಣವಿದ್ದು ವಿಭಿನ್ನವಾಗಿ ಎಲ್ಲರ ಗಮನ ಸೆಳಿತಿದೆ. ಯುವತಿಯರಿಗೆ , ಮಹಿಳೆಯರಿಗೆ ಏನಾದರೂ ತೊಂದರೆಯಾದರೆ ಬಸ್‌ ತಂಗುದಾಣದಲ್ಲಿರುವ ಸ್ವಿಚ್‌ (ಎಸ್‌ಒಎಸ್‌ ಬಟನ್‌) ವೊಂದನ್ನು ಹಾಕಬೇಕು. ಕೂಡಲೇ ಸಮೀಪದ ಸುರತ್ಕಲ್‌ ಪೊಲೀಸ್‌ ಠಾಣೆ, ಠಾಣೆ ಇನ್‌ಸ್ಪೆಕ್ಟರ್‌, ಪೊಲೀಸ್‌ ಕಮಿಷನರ್‌, ಕಾನೂನು ಸುವ್ಯವಸ್ಥಾ ವಿಭಾಗದ ಡಿಸಿಪಿ, 112 ಕಂಟ್ರೋಲ್‌ ರೂಮ್‌ಗೆ ಸಂದೇಶ ರವಾನೆಯಾಗುತ್ತದೆ.ಈ ಮೂಲಕ ಮಹಿಳೆಯರಿಗೆ ರಕ್ಷಣೆ ಸಿಗಲಿದೆ ಅನ್ನೋದು ಅಭಿಪ್ರಾಯ.

ಅಧಿಕಾರಿಗಳು ಕೂಡಲೇ ಮೊಬೈಲ್‌ ಮೂಲಕ ಬಸ್‌ ತಂಗುದಾಣದಲ್ಲಿರುವ ಸಿಸಿ ಕ್ಯಾಮೆರಾದ ಸಹಾಯ ಪಡೆದು ಆ ಸ್ಥಳದಲ್ಲಿ ಏನು ನಡೆಯುತ್ತಿದೆ ಎಂಬುವುದನ್ನು ನೇರವಾಗಿ ವೀಕ್ಷಣೆ ಮಾಡಲು ಸಾಧ್ಯವಿದೆ. ಸ್ಥಳೀಯ ಠಾಣೆ ಇನ್‌ಸ್ಪೆಕ್ಟರ್‌ ಬಂದು ಸೈರನ್‌ ಬಂದ್‌ ಮಾಡುವ ತನಕ ಸೈರನ್‌ ಮೊಳಗುತ್ತಲೇ ಇರುತ್ತದೆ.ಈ ಹೈಟೆಕ್ ಬಸ್ ಸ್ಟ್ಯಾಂಡ್ ಅನ್ನು ರಾಜ್ಯದೆಲ್ಲೆಡೆ ವಿಸ್ತರಿಸಿದರೆ ರಾಜ್ಯದೆಲ್ಲೆಡೆಯಿರುವ ಮಹಿಳೆಯರಿಗೆ ಅನುಕೂಲವಾದೀತು.

Related posts

ಧೂಮಾವತಿ ದೈವಸ್ಥಾನ ಹೊರೆಕಾಣಿಕೆ ವೇಳೆ ಜ್ಯೂಸ್‌ ಹಂಚಿದ ಮುಸ್ಲಿಮರು!! ಮಸೀದಿಯಲ್ಲಿ ಇಫ್ತಾರ್ ಕೂಟ ಆಯೋಜಿಸಿದ ಹಿಂದೂಗಳು!!

ಹಿಂದೂ ಹುಡುಗಿಯ ಹಿಂದೆ ಹೋದ ಕಲ್ಲುಗುಂಡಿಯ ಅನ್ಯಕೋಮಿನ ಹುಡುಗನಿಗೆ ಹಿಗ್ಗಾ ಮುಗ್ಗಾ ಥಳಿತ -ಗಂಭೀರ, ಆಸ್ಪತ್ರೆಗೆ ದಾಖಲು

ಮರ್ಕಂಜ: ರಿಕ್ಷಾದಲ್ಲಿ ಮದ್ಯ ಸಾಗಿಸಿದ ವ್ಯಕ್ತಿ ಸುಳ್ಯ ಪೊಲೀಸರ ಬಲೆಗೆ