ಕರಾವಳಿಕ್ರೈಂಮಂಗಳೂರುರಾಜಕೀಯರಾಜ್ಯ

ಮಂಗಳೂರು: ಮೂಡಾ ಹಗರಣದಲ್ಲಿ ಸಿಎಂ ಪರವಾಗಿ ಪ್ರತಿಭಟನೆ ವೇಳೆ ಹಿಂಸಾಚಾರ..! ಬಸ್ಸಿನ ಗಾಜು ಒಡೆದ ಮೂವರ ಬಂಧನ..!

229

ನ್ಯೂಸ್ ನಾಟೌಟ್ : ಮುಡಾ ಹಗರಣದ ಕಿಡಿ ಎಲ್ಲಡೆ ವ್ಯಾಪಿಸಿದ್ದು, ಸಿಎಂ ಪರವಾಗಿ ಮಂಗಳೂರು ನಗರದಲ್ಲಿ ಇಂದು(ಆ.19) ಕಾಂಗ್ರೆಸ್‌ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯ ಬಳಿಕ ನಡೆದ ಬಸ್‌ ಗೆ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿ ಶಾಹುಲ್ ಅಮಿದ್, ಅನ್ವರ್ ಮತ್ತು ಕಿಶೋರ್ ಶೆಟ್ಟಿ ಎಂಬ ಮೂರು ಜನ ಆರೋಪಿಗಳನ್ನು ಬಂಧಿಸಲಾಗಿದೆ. ಇನ್ನುಳಿದ ಆರೋಪಿಗಳನ್ನು ಪತ್ತೆಹಚ್ಚುವ ಸಲುವಾಗಿ ಸಿಬ್ಬಂದಿಗಳನ್ನು ನೇಮಕ ಮಾಡಲಾಗಿದೆ ಎಂದು ಮಂಗಳೂರು ಪೊಲೀಸರು ಮಾಹಿತಿ ನೀಡಿದ್ದಾರೆ.

ಮಂಗಳೂರು ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರು ನಗರ ಪಾಲಿಕೆಯ ಮುಂಭಾಗ ಪ್ರತಿಭಟನೆ ಮಾಡುತ್ತಿದ್ದ ಸಂದರ್ಭದಲ್ಲಿ ಮಧ್ಯಾಹ್ನ 12 ಗಂಟೆ ಸುಮಾರಿಗೆ ಘಟನೆ ನಡೆದಿದೆ. ಖಾಸಗಿ ಸಿಟಿ ಬಸ್ಸೊಂದಕ್ಕೆ 10-15 ಜನ ಕಿಡಿಗೇಡಿಗಳು ಬಸ್ಸನ್ನು ತಡೆದು ಕಲ್ಲುಗಳಿಂದ ಬಸ್ಸಿನ ಮುಂಬಾಗದ ಗಾಜನ್ನು ಒಡೆದು ದಾಂದಲೆ ನಡೆಸಿದ್ದರು. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Click

https://newsnotout.com/2024/08/press-meet-heart-attack-kannada-news-viral-news-kuruba/
https://newsnotout.com/2024/08/benngaluru-issue-dance-choreographer-arrest-kannada-news/
https://newsnotout.com/2024/08/raksha-bandana-kananda-news-arrest-viral-news-police-investigation/
https://newsnotout.com/2024/08/cctv-video-ac-machine-ac-fell-on-the-head-boy-nomore/
See also  'ಅಂದು ನನ್ನನ್ನು ಸಿಎಂ ಮಾಡಿ ಅಂದಾಗ ಕುಮಾರಸ್ವಾಮಿ ಹೂ ಅನ್ನಲಿಲ್ಲ' ಎಂದ ಡಿಸಿಎಂ..! ಹಳೆಯ ಗುಟ್ಟನ್ನು ಬಯಲು ಮಾಡಿದ ಡಿಕೆಶಿ ಹೇಳಿದ್ದೇನು?
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget