ಕರಾವಳಿಕ್ರೈಂಮಂಗಳೂರು

ಮಂಗಳೂರು: ವಾಟ್ಸ್‌ ಆ್ಯಪ್ ಸಂದೇಶ ನಂಬಿ 1 ಕೋಟಿ ರೂ.ಗೂ ಅಧಿಕ ಹಣ ಹೂಡಿಕೆ ಮಾಡಿದ ವ್ಯಕ್ತಿ..! ಹಣ ಹಿಂಪಡೆಯಲಾಗದೆ ಪೊಲೀಸರಿಗೆ ದೂರು..!

ನ್ಯೂಸ್ ನಾಟೌಟ್: ಆನ್‌ ಲೈನ್ ಟ್ರೇಡಿಂಗ್ ಬಗ್ಗೆ ವಾಟ್ಸ್‌ ಆ್ಯಪ್ ಮೂಲಕ ಬಂದ ಸಂದೇಶವನ್ನು ನಂಬಿದ ವ್ಯಕ್ತಿಯೊಬ್ಬರು 1 ಕೋಟಿ ರೂ.ಗೂ ಅಧಿಕ ಹಣ ಕಳೆದುಕೊಂಡ ಬಗ್ಗೆ ಮಂಗಳೂರು ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಆ.16ರಂದು ತನಗೆ ವಾಟ್ಸ್‌ ಆ್ಯಪ್ ಮೂಲಕ ಬಂದ ಸಂದೇಶದಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ಬರುವುದಾಗಿ ತಿಳಿಸಲಾಗಿತ್ತು. ಅದನ್ನು ನಂಬಿದ ತಾನು ವಾಟ್ಸ್‌ಆ್ಯಪ್ ಗ್ರೂಪ್‌ಗೆ ಸೇರ್ಪಡೆಗೊಂಡೆ. ನಂತರ ಗ್ರೂಪ್ ಅಡ್ಮಿನ್ ಕಳುಹಿಸಿದ ಲಿಂಕ್ ಅದುಮಿ ಅದಕ್ಕೂ ಜಾಯಿನ್ ಆದೆ. ಸೆಪ್ಟಂಬರ್ 1ರಿಂದ ಹಣ ಪಾವತಿಸುತ್ತಾ ಬಂದಿದ್ದೇನೆ’ ಎಂದು ಹೇಳಿಕೊಂಡಿದ್ದಾರೆ.

ಬಳಿಕ ತಾನು ಹೂಡಿಕೆ ಮಾಡಿದ ಹಣವನ್ನು ಹಿಂಪಡೆಯಲು ಪ್ರಯತ್ನಿಸಿದಾಗ ಆಗಲಿಲ್ಲ. ಹಾಗೇ ತನ್ನ ಮನೆಯವರು ಮತ್ತು ಸ್ನೇಹಿತರಲ್ಲಿ ವಿಚಾರಿಸಿದಾಗ ತಾನು ಮೋಸ ಹೋಗಿರುವ ವಿಚಾರ ತಿಳಿಯಿತು. ಒಟ್ಟಿನಲ್ಲಿ ಸೆ.1ರಿಂದ ಅಕ್ಟೋಬರ್ 7ರವರೆಗೆ ಅಪರಿಚಿತರು ನಕಲಿ ಟ್ರೇಡಿಂಗ್ ಹೆಸರಿನಲ್ಲಿ ತನ್ನಿಂದ 1,25,67,726 ರೂ. ವನ್ನು ಆನ್‌ಲೈನ್ ಮೂಲಕ ಮೋಸ ಮಾಡಿರುವುದಾಗಿ ಹಣ ಕಳೆದುಕೊಂಡ ವ್ಯಕ್ತಿ ದೂರಿನಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Click

https://newsnotout.com/2024/10/mother-of-kiccha-sudeep-nomore-kannada-news-viral-news/

Related posts

ರಾಜ್ಯದಲ್ಲಿ ಝಿಕಾ ವೈರಸ್ ಪತ್ತೆ : ಆರೋಗ್ಯ ಇಲಾಖೆಯಿಂದ ಎಚ್ಚರಿಕೆ

ಯುವಕನನ್ನು ಮಾರಾಕಾಸ್ತ್ರಗಳಿಂದ ಕೊಚ್ಚಿ ಬರ್ಬರ ಹತ್ಯೆ,ಮಾಜಿ ಸೈನಿಕನ ಈ ಕೃತ್ಯಕ್ಕೆ ಕಾರಣವಾದರೂ ಏನು?

ನಾಪತ್ತೆಯಾಗಿದ್ದ ಶಾಲಾ ಬಾಲಕಿ ಚಿಕ್ಕಮಗಳೂರಿನಲ್ಲಿ ಪತ್ತೆ