ಕ್ರೈಂಸುಳ್ಯ

ಮಂಗಳೂರು: ಪಿಜಿಯಲ್ಲಿ ಯುವ ವೈದ್ಯೆ ಸಾವು, ರಾತ್ರಿ ತಾಯಿ ಜೊತೆ ಮೊಬೈಲ್ ನಲ್ಲಿ ಮಾತನಾಡಿದ್ದ ಹುಡುಗಿಗೆ ಇದ್ದಕ್ಕಿದ್ದಂತೆ ಆಗಿದ್ದೇನು..?

194

ನ್ಯೂಸ್ ನಾಟೌಟ್: ವೈದ್ಯಕೀಯ ಲೋಕದಲ್ಲಿ ಮಿಂಚಬೇಕಿದ್ದ ಯುವ ವೈದ್ಯೆಯೊಬ್ಬರು ಮಂಗಳೂರಿನ ಪಾಂಡೇಶ್ವರದ ಪಿಜಿಯೊಂದರೆಲ್ಲಿ ಸಾವಿಗೀಡಾಗಿರುವ ದುರ್ಘಟನೆ ನಿನ್ನೆ (ಮಂಗಳವಾರ) ನಡೆದಿದೆ. ದಂತ ವೈದ್ಯಕೀಯ ಪದವೀಧರೆಯಾಗಿರುವ ಉಳ್ಳಾಲ ತಾಲೂಕಿನ ನರಿಂಗಾನ ನಿವಾಸಿ ಸ್ವಾತಿ ಶೆಟ್ಟಿ (24) ಮೃತಪಟ್ಟವರು. ಬಿಡಿಎಸ್ ಪದವಿಧರೆಯಾಗಿರುವ ಸ್ವಾತಿ ಪಾಂಡೇಶ್ವರದ ಕ್ಲಿನಿಕ್‌ವೊಂದರಲ್ಲಿ ಮಂಗಳವಾರದಿಂದ ಕೆಲಸಕ್ಕೆ ಹಾಜರಾಗಬೇಕಿತ್ತು.

ಸೋಮವಾರ ತಾಯಿ ಜತೆಗೆ ಪಾಂಡೇಶ್ವರ ಕ್ಲಿನಿಕ್‌ಗೆ ಬಂದಿದ್ದರು. ತಮ್ಮ ಕೆಲಸದ ಬಗ್ಗೆ ಮಾತನಾಡಿದ್ದರು. ಬಳಿಕ ಪಾಂಡೇಶ್ವರ ಪೊಲೀಸ್‌ ಠಾಣೆ ಹಿಂಭಾಗದ ಪಿಜಿಯಲ್ಲಿ ಸೋಮವಾರ ಸಂಜೆಯಿಂದ ಉಳಿದುಕೊಂಡಿದ್ದರು. ರಾತ್ರಿ ತಾಯಿ ಜತೆಗೆ ಮೊಬೈಲ್‌ನಲ್ಲಿ ಮಾತನಾಡಿ ವಿಪರೀತ ತಲೆನೋವು ಎಂದು ಹೇಳಿದ್ದರು. ಆ ನಂತರ ಏನಾಯಿತು ಅನ್ನುವುದು ನಿಗೂಢವಾಗಿದೆ.

See also  ಶಿರಸಿ: ಜಲಪಾತ ವೀಕ್ಷಣೆಗೆ ಹೋದ ಯುವಕ ಕಾಲು ಜಾರಿ ಕಣ್ಮರೆ..! ಕೊಚ್ಚಿ ಹೋಗಿರುವ ಯುವಕನಿಗಾಗಿ ಹುಡುಕಾಟ..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget