ಕ್ರೈಂ

ಮಂಗಳೂರು: ಪ್ರೇಮ ವೈಫಲ್ಯ, ನೇಣಿಗೆ ಶರಣಾದ ವೈದ್ಯ ವಿದ್ಯಾರ್ಥಿನಿ

ಮಂಗಳೂರು ‌: ಮಂಗಳೂರಿನ ಖಾಸಗಿ ವೈದ್ಯಕೀಯ ಕಾಲೇಜಿನಲ್ಲಿ ಇಂಟರ್ನ್ ಶಿಪ್ ನಲ್ಲಿದ್ದ ಎಂಬಿಬಿಎಸ್ ವಿದ್ಯಾರ್ಥಿನಿಯೊಬ್ಬಳ ಶವ ತನ್ನ ಅಪಾರ್ಟ್ ಮೆಂಟ್ ನ ರೂಂ ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮೃತ ವಿದ್ಯಾರ್ಥಿನಿಯನ್ನು ವೈಶಾಲಿ ಗಾಯಕ್ವಾಡ್ (25) ವಿಜಯಕುಮಾರ್ ಗಾಯಕ್ವಾಡ್, ಆನಂದನಗರ ಬೀದರ್ ಜಿಲ್ಲೆ ಎಂದು ಗುರುತಿಸಲಾಗಿದೆ.

ನಗರದ ಖಾಸಗಿ ಕಣಚೂರು ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಎಂಬಿಬಿಎಸ್ ಇಂಟರ್ನ್ ಶಿಪ್ ನಲ್ಲಿದ್ದ ವಿದ್ಯಾರ್ಥಿನಿ, ಕುತ್ತಾರ್ ನ ಸಿಲಿಕೋನಿಯಾ ಅಪಾರ್ಟ್ ಮೆಂಟ್ ನಲ್ಲಿ ವಾಸವಾಗಿದ್ದಳು. ಸದ್ಯ ನೇಣು ಬಿಗಿದ ಸ್ಥಿತಿಯಲ್ಲಿ ವಿದ್ಯಾರ್ಥಿನಿಯ ಶವ ಪತ್ತೆಯಾಗಿದ್ದು, ಸಾವಿಗೆ ಪ್ರೇಮ ವೈಫಲ್ಯವೇ ಕಾರಣ ಎಂದು ಮೇಲ್ನೋಟಕ್ಕೆ ಕಂಡು ಬಂದಿದೆ. ಉಳ್ಳಾಲ ಪೊಲೀಸರು ತನಿಖೆ ಆರಂಭಿಸಿದ್ದಾರೆ.

Related posts

ಬಾಡಿಗೆಗಿದ್ದ ಮನೆಯ ಮಾಲಕಿಯನ್ನೇ ಕತ್ತು ಹಿಸುಕಿ ಕೊಂದ ಮೋನಿಕಾ..! ಇಲ್ಲಿದೆ ಸಂಪೂರ್ಣ ಕಹಾನಿ..!

ಗುಂಡು ಹಾರಿಸಿ ಸಿನಿಮಾ ನಿರ್ದೇಶಕನನ್ನು ಬೆದರಿಸಿದ ಸೀರಿಯಲ್ ನಟ..! ನಟ ಅರೆಸ್ಟ್, ಬಂದೂಕು ವಶಕ್ಕೆ..!

ಹಿಂದೂ ಯುವಕನನ್ನು ಪ್ರೀತಿಸಿ ಮದುವೆಯಾದ ಮುಸ್ಲಿಂ ಮಹಿಳೆ..! ಗಂಡ ಸತ್ತ ಮೇಲೆ ಯುವಕರಿಂದ ಲೈಂಗಿಕ ಕಿರುಕುಳ ಆರೋಪ..!