Latest

ಕೊಟ್ಟಿಗೆಹಾರದಲ್ಲಿ ಕಡುಬು, ಮೀನು ಸಾರು ಊಟ ಮಾಡಿದ್ದ ಮಂಗಳೂರಿನ ವ್ಯಕ್ತಿ:35 ವರ್ಷಗಳ ಬಳಿಕ ಬಿಲ್ ಪಾವತಿಸಲು ಬಂದ ಮೊಹಮದ್!!

1.9k

 

ನ್ಯೂಸ್‌ ನಾಟೌಟ್: ಸಾಮಾನ್ಯವಾಗಿ ಹೊಟೇಲ್ ಗೆ ಹೋದಾಗ ಅಲ್ಲೇನಾದ್ರು ಸೇವಿಸಿದ್ರೆ ಅಲ್ಲೇ ಬಿಲ್ ಪಾವತಿ ಮಾಡಿ ಹಿಂತಿರುಗುವುದು ಸಾಮಾನ್ಯ ಆದ್ರೆ ಇಲ್ಲವೇ ಹಳ್ಳಿ ಕಡೆಗಳಲ್ಲಿ ಒಂದೆರಡು ದಿನ ಎಡ್ಜೆಸ್ಟ್ ಮಾಡಿ ಹಣ ಪೇ ಮಾಡಬಹುದು. ಆದರೆ ಇಲ್ಲೊಬ್ಬ ವ್ಯಕ್ತಿ ಹೊಟೇಲ್ ನಲ್ಲಿ ಊಟ ಮಾಡಿದ್ದರ ಬಿಲ್‌ನ್ನು ಬರೋಬ್ಬರಿ ೩೫ ವರ್ಷಗಳ ಬಳಿಕ ಕಟ್ಟಿದ್ದಾನೆ. ಏನಿದು ವಿಚಿತ್ರ ಘಟನೆ?

ಹೌದು, ಈ ಅಪರೂಪದ ಘಟನೆ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದಲ್ಲಿ ನಡೆದಿದೆ.35 ವರ್ಷಗಳ ಹಿಂದೆ ಹೋಟೆಲ್ ಒಂದರಲ್ಲಿ ಊಟ ಮಾಡಿ ಬಿಲ್ ನೀಡದೆ ಮರೆತು ಹೋಗಿದ್ದ ವ್ಯಕ್ತಿಯೊಬ್ಬರು ಅದನ್ನು ಮರೆಯದೆ ಅದೇ ಹೋಟೆಲ್ ಹುಡುಕಿಕೊಂಡು ಬಂದು ತಾನು ಊಟ ಮಾಡಿದ್ದ ಬಿಲ್ ಪಾವತಿಸಿ ಪ್ರಮಾಣಿಕತೆ ಮೆರೆದಿದ್ದಾರೆ. ಮಂಗಳೂರಿನ ದೇರಳಕಟ್ಟೆ ನಿವಾಸಿ ಮೊಹಮದ್ ಎಂಬವರು 35 ವರ್ಷಗಳ ಹಿಂದೆ ಕೆಲಸದ ನಿಮಿತ್ತ ಮೂಡಿಗೆರೆಗೆ ಬಂದಿದ್ದರು. ಬಳಿಕ ಮಂಗಳೂರಿಗೆ (Mangaluru) ಹಿಂದಿರುಗುವಾಗ ಹೊಟ್ಟೆ ಹಸಿವಿದ್ದರಿಂದ ಕೊಟ್ಟಿಗೆಹಾರದ ಹಳೆಯ ಭಾರತ್ ಹೋಟೆಲ್‌ನಲ್ಲಿ ಕಡುಬು, ಮೀನು ಸಾರು ಊಟ ಮಾಡಿದ್ದರಂತೆ..ಈ ವೇಳೆ ಊಟ ಮಾಡಿದ್ದ ಬಳಿಕ ಬಿಲ್ ನೀಡಲು ಮರೆತಿದ್ದರಂತೆ.. ಅವರು ಬಸ್ ಹತ್ತಿ ಮಂಗಳೂರಿಗೆ ಹೋಗಿದ್ದು, ಇದೀಗ ಬಂದು ಹೊಟೇಲ್ ಹುಡುಕಿ ಹಣ ನೀಡಿದ್ದಾರೆ!!

ಬಸ್ ಹತ್ತಿದ ಬಳಿಕ ಅವರಿಗೆ ತಾನು ಕೊಟ್ಟಿಗೆಹಾರದಲ್ಲಿ ಊಟ ಮಾಡಿದ್ದ ಬಿಲ್ ನೀಡದಿರುವುದು ಅರಿವಾಗಿತ್ತು. ಈ ಬಗ್ಗೆ ಅವರಿಗೆ ಬೇಸರವೂ ಆಗಿತ್ತು. ಮತ್ತೆ ಕೊಟ್ಟಿಗೆಹಾರ ಹೋದಾಗ ಬಿಲ್ ನೀಡೋಣ ಎಂದುಕೊಂಡಿದ್ದರು. ಆದರೆ, ಅವರಿಗೆ ಕೊಟ್ಟಿಗೆಹಾರದ ಕಡೆ ಬರುವ ಸಂದರ್ಭವೇ ಬಂದಿರಲಿಲ್ಲ. ಆದ್ದರಿಂದ ಅವರು ಈ ಬಿಲ್ ವಿಚಾರ ಮರೆತಿದ್ದರು.

ಹೀಗಾಗಿ ಮೊನ್ನೆ ಭಾನುವಾರ (ಫೆ.17) ಕೆಲಸದ ನಿಮಿತ್ತ ಕೊಟ್ಟಿಗೆಹಾರಕ್ಕೆ ಬಂದಿದ್ದ ಅವರು, ತಾನು 35 ವರ್ಷದ ಹಿಂದೆ ಊಟ ಮಾಡಿ ಬಿಲ್ ನೀಡದೆ ಹೋಗಿದ್ದ ವಿಚಾರ ನೆನಪಾಗಿ ಕೊಟ್ಟಿಗೆಹಾರದ ಭಾರತ್ ಹೊಟೇಲ್ ಹೋಗಿ ವಿಷಯ ತಿಳಿಸಿ ಬಿಲ್ ನೀಡಿದ್ದಾರೆ. ಈ ವೇಳೆ ಭಾರತ್ ಹೋಟೆಲ್ ಮಾಲೀಕರ ಮಗ ಅಬ್ದುಲ್ ಅಜೀದ್ ಎಂಬವರು ಅಲ್ಲಿದ್ದರು. ಅವರ ಬಳಿ ತನ್ನ ಬಿಲ್ ನ ವಿಚಾರ ಹೇಳಿದ್ದಲ್ಲದೆ, ಕ್ಷಮೆ ಕೂಡ ಕೇಳಿ, ಬಿಲ್ ಪಾವತಿ ಮಾಡಿ ಮತ್ತೆ ಅಲ್ಲೇ ಅದೇ ಕಡುಬು, ಮೀನು ಸಾರು ಊಟ ಮಾಡಿ ತೆರಳಿದ್ದಾರೆ.ಮೊಹಮದ್ ಅವರ ಈ ಕಾರ್ಯಕ್ಕೆ ಪ್ರಶಂಸೆ ವ್ಯಕ್ತವಾಗಿದೆ.

See also  ಬಾಡಿಗೆ ಮನೆ ಮಾಲಕಿ ಜೊತೆ ಅಕ್ರಮ ಸಂಬಂಧ..! ಬಾಡಿಗೆದಾರನನ್ನ ಜೀವಂತವಾಗಿ ಹೂತುಹಾಕಿದ ಆಕೆಯ ಪತಿ..!
  Ad Widget   Ad Widget   Ad Widget   Ad Widget   Ad Widget   Ad Widget   Ad Widget