Latestಕರಾವಳಿಕ್ರೈಂದೇಶ-ವಿದೇಶಮಂಗಳೂರು

ಮಂಗಳೂರು: ಮಹಿಳಾ ಅಧಿಕಾರಿ ತನ್ನನ್ನು ಲೈಂಗಿಕವಾಗಿ ಬಳಸಿಕೊಂಡು ಮೋಸ ಮಾಡಿದ್ರು ಎಂದ ವ್ಯಕ್ತಿ..! ಲಾಡ್ಜ್‌ ನಲ್ಲಿ ಆತ ಆತ್ಮಹತ್ಯೆ..!

987
Spread the love

ನ್ಯೂಸ್ ನಾಟೌಟ್: ಸಿಐಎಸ್‌ ಎಫ್ (Central Industrial Security Force) ಮಹಿಳಾ ಅಧಿಕಾರಿಯೊಬ್ಬರು ತನ್ನನ್ನು ಲೈಂಗಿಕವಾಗಿ ಬಳಸಿಕೊಂಡು ಮೋಸ ಮಾಡಿದ್ದಾರೆ ಎಂದು ಆರೋಪಿಸಿ ಉತ್ತರ ಪ್ರದೇಶದ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಆಘಾತಕಾರಿ ಘಟನೆ ಮಂಗಳೂರಿನಲ್ಲಿ ಸೋಮವಾರ(ಮಾ.3) ನಡೆದಿದೆ.

ಮಂಗಳೂರಿನ ರಾವ್ ಆ್ಯಂಡ್ ರಾವ್ ಸರ್ಕಲ್ ಬಳಿಯ ಲಾಡ್ಜ್‌ ನಲ್ಲಿ ನೇಣಿಗೆ ಶರಣಾಗಿರುವ ವ್ಯಕ್ತಿಯನ್ನು ಉತ್ತರ ಪ್ರದೇಶದ ಘಾಜಿಪುರದ ಅಭಿಷೇಕ್ ಸಿಂಗ್(40) ಎಂದು ಗುರುತಿಸಲಾಗಿದೆ.
ಅಭಿಷೇಕ್ ಸಿಂಗ್ ಆತ್ಮಹತ್ಯೆಗೂ ಮುನ್ನ ವಿಡಿಯೋ ರೆಕಾರ್ಡ್ ಮಾಡಿ ಇನ್‌ ಸ್ಟಾಗ್ರಾಮ್‌ ನಲ್ಲಿ ಪೋಸ್ಟ್ ಮಾಡಿದ್ದು, “ಸಿಐಎಸ್ಎಫ್ ಸಹಾಯಕ ಕಮಾಂಡೆಂಟ್ ಮೋನಿಕಾ ಸಿಹಾಗ್ ಅವರು ತನ್ನನ್ನು ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಬಂಧ ಬೆಳೆಸಿ ವಂಚಿಸಿದ್ದಾರೆ” ಎಂದು ಆರೋಪಿಸಿದ್ದಾನೆ.

ಮೋನಿಕಾ ಸಿಹಾಗ್ ಈಗಾಗಲೇ ವಿವಾಹಿತೆಯಾಗಿದ್ದು, ಆ ವಿಷಯವನ್ನು ಮುಚ್ಚಿಟ್ಟು ತನ್ನೊಂದಿಗೆ ಸಂಬಂಧ ಬೆಳೆಸಿದ್ದರು ಎಂದು ಅಭಿಷೇಕ್ ಸಿಂಗ್ ವಿಡಿಯೋದಲ್ಲಿ ತಿಳಿಸಿದ್ದಾರೆ.
ಚೆನ್ನೈನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಅಭಿಷೇಕ್, ಕೆಲವು ದಿನಗಳ ಹಿಂದೆ ಸಹೋದ್ಯೋಗಿಗಳೊಂದಿಗೆ ಮಂಗಳೂರಿಗೆ ವಸ್ತುಪ್ರದರ್ಶನವೊಂದರಲ್ಲಿ ಭಾಗವಹಿಸಲು ಬಂದಿದ್ದರು. ಅವರು ನಗರದ ರಾವ್ & ರಾವ್ ವೃತ್ತದ ಬಳಿ ಇರುವ ಲಾಡ್ಜ್‌ವೊಂದರಲ್ಲಿ ತಂಗಿದ್ದರು ಎನ್ನಲಾಗಿದೆ.
ಘಟನೆ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

See also  ರಮ್ಮಿ ಜೊತೆ ಬ್ಯುಸಿಸೆನ್‌ ಪಾರ್ಟನರ್ ಆಗಿರುವುದು ಯಾಕೆ ಎಂದು ನಟ ಸುದೀಪ್ ಅನ್ನು ಪ್ರಶ್ನಿಸಿದ ಪತ್ರಕರ್ತ, ಗರಂ ಆಗಿ ಉತ್ತರಿಸಿದ ಕಿಚ್ಚ..!
  Ad Widget   Ad Widget   Ad Widget