ಕರಾವಳಿಕ್ರೈಂಮಂಗಳೂರು

ದಯವಿಟ್ಟು ನನ್ನನ್ನು ಕ್ಷಮಿಸಿ, ಇನ್ಮುಂದೆ ಹಾಗೆ ಆಗಲ್ಲ..! ಯುವಕನ ಹುಚ್ಚಾಟದ ವಿಡಿಯೋ ವೈರಲ್ ಬೆನ್ನಲ್ಲೇ ಹಿಂದೂಗಳಲ್ಲಿ ಕ್ಷಮೆ ಕೇಳಿದ ಮಂಗಳ ಮುಖಿ

ನ್ಯೂಸ್ ನಾಟೌಟ್: ಇತ್ತೀಚೆಗೆ ಕರಾವಳಿಯಲ್ಲಿ ನಡೆದ ಕೃಷ್ಣಾಷ್ಟಮಿ ಮೆರವಣಿಗೆಯ ಡ್ಯಾನ್ಸ್ ವೇಳೆ ಮಂಗಳಮುಖಿ ಮೇಲೆ ಕೇಸರಿ ಶಾಲು ಹಾಕಿದ ಯುವಕನಿಂದ ಅನುಚಿತ ವರ್ತನೆಗೆ ಹೊಸ ಟ್ವಿಸ್ಟ್ ದೊರಕಿದೆ.

ಇದೀಗ ಅನುಚಿತ ವರ್ತನೆಗೆ ಒಳಗಾದ ಮಂಗಳಮುಖಿಯೇ ಕ್ಷಮೆ ಕೇಳಿದ್ದಾಳೆ. ‘ಮೊನ್ನೆ ಕೃಷ್ಣಾಷ್ಟಮಿ ಮೆರವಣಿಗೆಯ ವೇಳೆ ಸ್ನೇಹಿತರ ಜೊತೆಗೂಡಿ ಹೋಗಿದ್ದೆ. ಅಲ್ಲಿ ಎಲ್ಲರೂ ಡ್ಯಾನ್ಸ್ ಮಾಡುತ್ತಿದ್ದರು, ನಾನೂ ಕೂಡ ಅವರೊಂದಿಗೆ ಸೇರಿಕೊಂಡಿದ್ದೇನೆ. ದೇವರ ಮೇಲಿನ ಭಕ್ತಿಯಿಂದ ಡ್ಯಾನ್ಸ್ ಮಾಡಿದ್ದೆ. ಡ್ಯಾನ್ಸ್ ಮಾಡುವಾಗ ಕೇಸರಿ ಶಾಲು ಹಾಕಿದ ಯುವಕ ನನ್ನ ಮೇಲೆ ಬಿದ್ದಿದ್ದಾನೆ. ಇದು ಘಟನೆ ಆಗಬಾರದಿತ್ತು. ಆದರೆ ನಡೆದು ಹೋಗಿದೆ, ದಯವಿಟ್ಟು ಎಲ್ಲರೂ ಕ್ಷಮಿಸಬೇಕು, ಹಿಂದೂ ಬಾಂಧವರಲ್ಲಿ ನಾನು ಕ್ಷಮೆಯಾಚಿಸುತ್ತಿದ್ದೇನೆ, ಮುಂದೆ ಹೀಗೆ ಆಗುವುದಿಲ್ಲ’ ಎಂದು ತಿಳಿಸಿದ್ದಾರೆ.

ಎರಡು ದಿನಗಳ ಹಿಂದೆ ಘಟನೆಗೆ ಸಂಬಂಧಪಟ್ಟಂತೆ ವಿಡಿಯೋ ವೈರಲ್ ಆಗಿತ್ತು. ಯುವಕನ ಅನುಚಿತ ವರ್ತನೆಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಟೀಕೆ ವ್ಯಕ್ತವಾಗಿತ್ತು. ಆದರೆ ತಪ್ಪು ಮಾಡಿದ ಯುವಕ ಕ್ಷಮೆ ಕೇಳದೆ ಮಂಗಳಮುಖಿ ಕ್ಷಮೆ ಕೇಳಿದ್ದು ಭಾರಿ ಚರ್ಚೆಗೆ ಕಾರಣವಾಗಿದೆ.

Related posts

ಮಗು ಬಿದ್ದಾಗ ಪೆನ್ನು ತಲೆಗೆ ಚುಚ್ಚಿ ಸಾವು..! ಪುಟ್ಟ ಕಂದನ ಭವಿಷ್ಯ ಬೆಳಗಬೇಕಿದ್ದ ಪೆನ್ನು ಜೀವ ತೆಗೆದದ್ದೇಗೆ..?

ನಿಶ್ಚಿತಾರ್ಥದ ರಿಂಗ್ ಗಾಗಿ ಪ್ರಾಣವನ್ನೇ ಕಳೆದುಕೊಂಡನಾ ಯುವಕ? ಅಷ್ಟಕ್ಕೂ ಅಂದು ಸ್ನಾನಕ್ಕೆ ತೆರಳಿದ್ದ ಯುವಕನ ಬಾಳಲ್ಲಿ ನಡೆದದ್ದೇನು?

ಆಟೋಗೆ ಬೆಂಕಿ ಹಚ್ಚಿದ್ದೇಕೆ ಹುಡುಗಿ ಕಡೆಯವರು..? ಪ್ರೇಮ ವಿವಾಹಕ್ಕೆ ಬಲಿಯಾಯ್ತ ಯುವಕನ ಬದುಕು?